Site icon Vistara News

Sita Ramam Film | ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಸಿನಿಮಾ ಹಿಂದಿಯಲ್ಲಿ ಬಿಡುಗಡೆ

Sita Ramam Film

ಬೆಂಗಳೂರು: ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಸಿನಿಮಾ (Sita Ramam Film) ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್‌ ಆಗಿತ್ತು. ಶುಕ್ರವಾರ (ಸೆ.2) ಹಿಂದಿ ಅವತರಣಿಕೆಯಲಿ ಸಿನಿಮಾ ಬಿಡುಗಡೆಗೆಯಾಗಿದ್ದು, ನಟ ದುಲ್ಕರ್ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಈ ಚಿತ್ರದಲ್ಲಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಸ್ಟ್‌ ಲುಕ್‌ ನೋಡಿ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದರು. ಅವರು ಬುರ್ಕಾ ಧರಿಸಿ ಕಾಣಿಸಿಕೊಂಡಿದ್ದು, ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತೆ ಆರೋಪಿಸಿ ಅರಬ್‌ ರಾಷ್ಟ್ರಗಳಲ್ಲಿ ಬ್ಯಾನ್‌ ಮಾಡಲಾಗಿದೆ ಎಂದು ವರದಿ ಆಗಿತ್ತು.

ಇದನ್ನೂ ಓದಿ | Sita Ramam Film | ಅರಬ್‌ ರಾಷ್ಟ್ರಗಳಲ್ಲಿ ಬ್ಯಾನ್‌ ಆಗಲಿದೆಯಾ ಸೀತಾ ರಾಮಂ?

ಸೌತ್ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಹನು ರಾಘವಪುಡಿ. ಈ ಚಿತ್ರವನ್ನು ಕಾಶ್ಮೀರ ಕಣಿವೆಯಲ್ಲಿ ಚಿತ್ರೀಕರಿಸಿರುವುದು ವಿಶೇಷ. ಅದರಲ್ಲೂ ಪಿ.ಎಸ್. ವಿನೋದ್ ಅವರ ಸಿನಿಮಾಟೋಗ್ರಫಿಯು ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣಿಸುತ್ತಿದೆ. ಇನ್ನು ಚಿತ್ರದಲ್ಲಿ ಯೋಧನ ನಿರೀಕ್ಷೆಗಳು, ಪ್ರೀತಿಯ ಹುಡುಕಾಟವನ್ನು ನಿರೀಕ್ಷಿಸಬಹುದು. ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ನಿರ್ಮಾಣ ಚಿತ್ರಕ್ಕಿದೆ. ಆಗಸ್ಟ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಮೃಣಾಲಾ ಠಾಕೂರ್‌ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Sita Ramam Film | ಸೀತಾ ರಾಮಂ ಪ್ರೀ ರಿಲೀಸ್‌ ಇವೆಂಟ್‌: ಚಿತ್ರಮಂದಿರ ದೇವಸ್ಥಾನ ಇದ್ದಂತೆ ಎಂದ ಪ್ರಭಾಸ್‌

Exit mobile version