ಬೆಂಗಳೂರು: ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಎಸ್.ಕೆ ಭಗವಾನ್ (SK Bhagavan) ಇನ್ನು ನೆನಪು ಮಾತ್ರ. ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಬ್ರಾಹ್ಮಣ ವಿಧಿವಿಧಾನಗಳ ಅನುಸಾರ ಅಂತ್ಯಕ್ರಿಯೆ ಮಾಡಲಾಯಿತು. ಹಿರಿಯ ಪುತ್ರ ಜ್ಯೋತಿಂಧರ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಎಸ್.ಕೆ ಭಗವಾನ್ ಅವರ ಅಂತಿಮ ದರ್ಶನಕ್ಕೆ ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ಭೇಟಿ ನೀಡಿ ಸಂತಾಪ ಸೂಚಿಸಿತು.
ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಡಾ. ರಾಜ್‌ಕುಮಾರ್ ಅವರಂತೆ ಭಗವಾನ್ ಅವರು ನೇತ್ರ ದಾನ ಮಾಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಯದೇವ ಆಸ್ಪತ್ರೆಯಲ್ಲಿ ಭಗವಾನ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: SK Bhagavan : ಆತ್ಮಕತೆ ಬರೆಯುತ್ತಿದ್ದ ಭಗವಾನ್; ಪ್ರಕಟಣೆಗೆ ಮುನ್ನವೇ ಇನ್ನಿಲ್ಲವಾದರು
ಇದನ್ನೂ ಓದಿ: SK Bhagavan: ಗೇಟ್ ಕೀಪರ್ ನಿಂದ ಸ್ಟಾರ್ ನಿರ್ದೇಶಕನವರೆಗೆ! ಎಸ್ ಕೆ ಭಗವಾನ್ ಸಿನಿ ಎಂಟ್ರಿಯೇ ಅಚ್ಚರಿ!
ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿದ ನಂತರ `ಆದರ್ಶ ಸಿನಿಮಾ ಇನ್ಸಿಟಿಟ್ಯೂಟ್‌ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.