Site icon Vistara News

Skanda Ashok: ಹಳೆ ಹೆಸರಿನ ಹೊಸ ಕತೆಯಲ್ಲಿ ಮತ್ತೆ ಬರುತ್ತಿದ್ದಾರೆ ʻರಾಧಾ ರಮಣ’ ಖ್ಯಾತಿಯ ಸ್ಕಂದ ಅಶೋಕ್!

Skanda Ashok

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಾಯಕ ರಮಣನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಪಡೆದ ಹೆಣ್ಣು ಮಕ್ಕಳ ಹೃದಯ ಕದ್ದ ಸ್ಕಂದ ಅಶೋಕ್‌ (Skanda Ashok) ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾರೆ. ‘ಅವನು ಮತ್ತು ಶ್ರಾವಣಿ’ (Avanu Mathe Shravani)ಎನ್ನುವ ಹೆಸರಿನ ಹೊಸ ಧಾರಾವಾಹಿಯೊಂದು ಸ್ಟಾರ್ ಸುವರ್ಣದಲ್ಲಿ (Star Suvarna) ಶುರುವಾಗಲಿದೆ. ಈಗಾಗಲೇ ಪ್ರೋಮೊ ಕೂಡ ರಿವೀಲ್‌ ಆಗಿದೆ. ಧಾರಾವಾಹಿಯಲ್ಲಿ ನಾಯಕ ಅಭಿಮನ್ಯು ಆಗಿ ನಟಿಸುವ ಮೂಲಕ ಸ್ಕಂದ ಬಣ್ಣ ಹಚ್ಚುತ್ತಿದ್ದಾರೆ.

ರಾಧಾ ಮಿಸ್ ಮಾತ್ರವಲ್ಲದೇ ಸೀರಿಯಲ್ ಪ್ರಿಯರ ಮನ ಗೆದ್ದ ಸ್ಕಂದ ಅಶೋಕ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧೆ ಶ್ಯಾಮ್’ನಲ್ಲಿ ಅತಿಥಿ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ಅಭಿಮನ್ಯು ಆಗಿ ಮತ್ತೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ ಸ್ಕಂದ ಅಶೋಕ್‌. ಈ ಧಾರಾವಾಹಿಗೆ ಅನುಷಾ ರಮೇಶ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. (anusha Ramesh) ಎರಡು ವರ್ಷಗಳ ಹಿಂದೆ ಸ್ಕಂದ ಎಂದರೆ ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ಇಂದು ನಟ ಸ್ಕಂದ ಅಶೋಕ್ ಗೊತ್ತಿಲ್ಲದವರು ಬಹಳ ಕಡಿಮೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಸು’ ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ನಟಿಸುವ ಮೂಲಕ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

ಮಲಯಾಳಂನ ‘ನೋಟ್ ಬುಕ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟನೆಗೆ ಕಾಲಿಟ್ಟ ಸ್ಕಂದ ಮೊದಲ ಸಿನಿಮಾಕ್ಕೆ ಏಷಿಯನೆಟ್ ಫಿಲಂ ನೀಡುವ ಹೊಸ ಮುಖ ಪ್ರಶಸ್ತಿ ಪಡೆದಿದ್ದರು. ಮಲಯಾಳಂನ ‘ಪಾಸಿಟಿವ್’, ತೆಲುಗಿನ ‘ಮಲ್ಲಿ ಮಲ್ಲಿ’, ಮಲಯಾಳಂನ ‘ಎಲೆಕ್ಟ್ರಾ’, ತಮಿಳಿನ ‘ಅಂಗುಸಂ’ ಹಾಗೂ ‘ಮುಪ್ಪರಿಮಾನಂ’ ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆದ ಸ್ಕಂದ ‘ಚಾರುಲತಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.

ಇದನ್ನೂ ಓದಿ: Actress Rajini: ʻನಿಮ್ಮ ಆ್ಯಕ್ಟಿಂಗ್‌ ಓವರ್‌ʼ ಅಂದಿದಕ್ಕೆ ʻಅಮೃತ ವರ್ಷಿಣಿʼ ಖ್ಯಾತಿಯ ನಟಿ ರಜಿನಿ ಗರಂ!

ಅವನು ಮತ್ತು ಶ್ರಾವಣಿ ಧಾರಾವಾಹಿ ಪ್ರೋಮೊ ರಿವೀಲ್‌ ಆದ ಬಳಿಕ ಪ್ರೇಕ್ಷಕರು ʻʻಈ ತರಹ ಸ್ವಂತ ಕಥೆಗಳು ಬರಲಿʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಬಲು ವಿಭಿನ್ನವಾಗಿ ಮೂಡಿ ಬರಲಿದೆ ಈ ಧಾರವಾಹಿ. ದಯವಿಟ್ಟು ಎಲ್ಲರೂ ಇದ್ದಕ್ಕೆ ಪ್ರೀತಿಯಿಂದ ಪ್ರೋತ್ಸಾಹಿಸಿʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಹಳೆ ಹೆಸರಿನ ಹೊಸ ಕತೆ ಅವನು ಮತ್ತೆ ಶ್ರಾವಣಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಚಾರುಲತಾ’ ಸಿನಿಮಾದ ನಂತರ ‘ಯೂ ಟರ್ನ್’ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ ಇವರು ತದ ನಂತರ ‘ಕಾನೂರಾಯಣ’, ‘ಜಿಗ್ರಿ ದೋಸ್ತ್’, ‘ದೇವಯಾನಿ’, ‘ಭೈರಾದೇವಿ’ ಹಾಗೂ ‘ರಣಾಂಗಣ’ ‘ಫ್ಲಾಟ್ ನಂ 9’, ‘ಬರ್ಬರಿಕಾ’ ಸಿನಿಮಾದಲ್ಲಿ ಸ್ಕಂದ ಬಣ್ಣ ಹಚ್ಚಿದ್ದಾರೆ.

Exit mobile version