Site icon Vistara News

Sneha Acharya: ಬೇಬಿ ಬಂಪ್‌ ಪೋಟೊ ಹಂಚಿಕೊಂಡ ಬಿಗ್‌ ಬಾಸ್‌ ಸ್ಪರ್ಧಿ ಸ್ನೇಹಾ ಆಚಾರ್ಯ

Sneha Acharya Baby Bump Photo

ನಟಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಸ್ನೇಹಾ ಆಚಾರ್ಯ (Sneha Acharya) ಅವರು ಮೊದಲ ಮುಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ತಮ್ಮ ಬೇಬಿ ಬಂಪ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ನೇಹಾ ಆಚಾರ್ಯ ಪೋಸ್ಟ್ ವೈರಲ್‌ ಆಗುತ್ತಿದ್ದಂತೆ ಅವರ ಸಹ-ನಟ ನಟಿಯರು ಶುಭಾಶಯ ತಿಳಿಸಿದ್ದಾರೆ. ಅನೇಕರು ಸ್ನೇಹಾ ಪೋಸ್ಟ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಸ್ನೇಹಾ ಆಚಾರ್ಯ ಅವರು ಸತ್ಯಂ ಶಿವಂ ಸುಂದರಂ, ಸಾಗರ ಸಂಗಮ ಧಾರಾವಾಹಿಯಲ್ಲಿ ನಟಿಸಿದ್ದರು. ʻಜೋಶ್ʼ, ಆಕೆ, ಸಂತು ಸ್ಟ್ರೇಟ್ ಫಾರ್ವಡ್, ಕೃಷ್ಣಲೀಲಾ ಸಿನಿಮಾದಲ್ಲೂ ಅವರು ಅಭಿನಯಿಸಿದ್ದರು.

ರಷ್ಯಾದ ಹುಡುಗ ರಾಯನ್ ಎಂಬುವವರನ್ನು ಸ್ನೇಹಾ ಆಚಾರ್ಯ ಪ್ರೀತಿಸಿ 2018ರಲ್ಲಿ ಮದುವೆ ಆಗಿದ್ದರು. ಹಿಂದು ಸಂಪ್ರದಾಯದಂತೆ ಇವರ ವಿವಾಹ ಜರುಗಿತ್ತು.

ಮದುವೆ ಆದ ಮೇಲೆ ಸ್ನೇಹಾ ಆಚಾರ್ಯ ಅವರು ಪತಿ ರಾಯನ್ ಜತೆ ವಿದೇಶದಲ್ಲೇ ನೆಲೆಸಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

Exit mobile version