Site icon Vistara News

Sneha Acharya: 10 ದಿನ ಲೇಟ್ ಆಗಿ ಮಗು ಹುಟ್ಟಿತು; ಬಿಗ್‌ ಬಾಸ್‌ ಸ್ಪರ್ಧಿ ಸ್ನೇಹಾ ಆಚಾರ್ಯ

Sneha Acharya welcomes baby boy
ನಟಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ (bigg boss kannada) ಸ್ನೇಹಾ ಆಚಾರ್ಯ (Sneha Acharya) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 10 ದಿನ ಲೇಟ್ ಆಗಿ ಮಗು ಹುಟ್ಟಿತು ಎಂದು ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ನಟಿ ಸ್ನೇಹಾ ಹೇಳಿಕೊಂಡಿದ್ದಾರೆ.
ನಟಿ ಸ್ನೇಹಾ ಆಚಾರ್ಯ ಅವರು ಸತ್ಯಂ ಶಿವಂ ಸುಂದರಂ, ಸಾಗರ ಸಂಗಮ ಧಾರಾವಾಹಿಯಲ್ಲಿ ನಟಿಸಿದ್ದರು. ʻಜೋಶ್ʼ, ಆಕೆ, ಸಂತು ಸ್ಟ್ರೇಟ್ ಫಾರ್ವಡ್, ಕೃಷ್ಣಲೀಲಾ ಸಿನಿಮಾದಲ್ಲೂ ಅವರು ಅಭಿನಯಿಸಿದ್ದರು.
ರಷ್ಯಾದ ಹುಡುಗ ರಾಯನ್ ಎಂಬುವವರನ್ನು ಸ್ನೇಹಾ ಆಚಾರ್ಯ ಪ್ರೀತಿಸಿ 2018ರಲ್ಲಿ ಮದುವೆ ಆಗಿದ್ದರು. ಹಿಂದು ಸಂಪ್ರದಾಯದಂತೆ ಇವರ ವಿವಾಹ ಜರುಗಿತ್ತು.
ಅದ್ಭುತವಾದ ಹೊಸ ಜಗತ್ತಿಗೆ ಕಾಲಿಟ್ಟಿದ್ದೇವೆ. ಬೇಬಿ ರಾಯಿಕ್ ನನಗೆ ತುಂಬ ಕ್ಲೋಸ್ ಆಗಿದ್ದಾನೆ, ನನಗೆ ಕೊಟ್ಟ ಡೇಟ್ ಮುಗಿದು 10 ದಿನಗಳ ಬಳಿಕ, ಅಪ್ಪಂದಿರ ದಿನ ಬರುವ ಸಮಯಕ್ಕೆ ಹುಟ್ಟಿದ್ದಾನೆ. ರಾಯಿಕ್ ಅಂದರೆ ಹೀರೋಯಿಕ್ ಎಂದೂ ಕೂಡ ಉಚ್ಛರಿಸಬಹುದು. ಬೆಳಕಿನ ಹೀರೊ ಎಂದರ್ಥ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sneha Acharya: ಬೇಬಿ ಬಂಪ್‌ ಪೋಟೊ ಹಂಚಿಕೊಂಡ ಬಿಗ್‌ ಬಾಸ್‌ ಸ್ಪರ್ಧಿ ಸ್ನೇಹಾ ಆಚಾರ್ಯ

ಮದುವೆ ಆದ ಮೇಲೆ ಸ್ನೇಹಾ ಆಚಾರ್ಯ ಅವರು ಪತಿ ರಾಯನ್ ಜತೆ ವಿದೇಶದಲ್ಲೇ ನೆಲೆಸಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
Exit mobile version