ಬೆಂಗಳೂರು: ನಟಿ ರಾಖಿ ಸಾವಂತ್ (Rakhi Sawant) ಪತಿ ಆದಿಲ್ ಖಾನ್ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ನನ್ನ ಬೆತ್ತಲೆ ವಿಡಿಯೊಗಳನ್ನು ಆದಿಲ್ ಖಾನ್ (Adil Khan) ಮಾರಾಟ ಮಾಡಿದ್ದಾನೆ’ ಎಂದು ಆರೋಪಿಸಿದ್ದಾರೆ. ಈಗಾಗಲೇ ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ. ರಾಖಿ ದೂರು ನೀಡಿದ ಹಿನ್ನೆಲೆಯಲ್ಲಿ ಆದಿಲ್ ಅವರನ್ನು ಬಂಧಿಸಲಾಗಿದೆ.
ಆದಿಲ್‌ಗೆ ಬಿಗ್ ಬಾಸ್ ಮನೆಗೆ ಹೋಗುವ ಹಂಬಲವಿದ್ದ ಕಾರಣ ರಾಖಿ ಅವರ ಸಖ್ಯ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿದೆ. ಆದಿಲ್ ಆಪ್ತರು ಹೇಳುವಂತೆ ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗುವ ದಾರಿ ಸುಲಭವಾಗುತ್ತದೆ. ಹೀಗಾಗಿ ರಾಖಿ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸ್ವತಃ ರಾಖಿಯೇ ಆದಿಲ್ ಜತೆ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಮಾತನಾಡಿದ್ದರು. ಕಳೆದ ವರ್ಷ ಆದಿಲ್ ಖಾನ್ ಮತ್ತು ರಾಖಿ ಸಾವಂತ್ ಮದುವೆ ನೆರವೇರಿತು. ಆದರೆ ಹಲವು ತಿಂಗಳ ಕಾಲ ಮದುವೆ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು. ಆರಂಭದಲ್ಲಿ ನಿಜ ಒಪ್ಪಿಕೊಳ್ಳಲು ಆದಿಲ್ ಖಾನ್ ಹಿಂದೇಟು ಹಾಕಿದ್ದರು. ಬಳಿಕ ಅವರು ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟರು. ಈಗ ಇವರ ಸಂಸಾರದ ಗಲಾಟೆ ಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ; ಆತ ಮೋಸಗಾರ ಎಂದ ನಟಿ!
‘ಆದಿಲ್ ಖಾನ್ ನನ್ನ ಬೆತ್ತಲೆ ಫೋಟೋಗಳನ್ನು ಮಾರಾಟ ಮಾಡಿದ್ದಾನೆ. ಅದಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ವಿಭಾಗದಲ್ಲಿ ಕೇಸ್ ದಾಖಲಾಗಿದೆ. ತನು ಚಾಂಡೇಲ್ ಜೊತೆ ಆತ ಮೂರನೇ ಮದುವೆ ಮಾಡಿಕೊಳ್ಳಲು ಬಯಸಿದ್ದಾನೆ’ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ಅಸಹಜ ಲೈಂಗಿಕ ಕ್ರಿಯೆಯಿಂದ ಹಿಡಿದು ವರದಕ್ಷಿಣೆ ಕಿರುಕುಳದ ಆರೋಪವನ್ನೂ ಪತಿ ಆದಿಲ್ ಮೇಲೆ ಹೊರಸಿದ್ದಾರೆ. ಆರೋಪಗಳಾದ ಕಾರಣದಿಂದಾಗಿ ಕೋರ್ಟ್ ಆದಿಲ್ ಗೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ.
ನಿವೇದಿತಾ ಚಾಂಡೆಲ್,ಆದಿಲ್ ಖಾನ್ ದುರಾನಿ ವಿರುದ್ಧ ಪ್ರಕರಣ ದಾಖಲಿಸುತ್ತೇನೆ
ವಿವಾಹೇತರ ಸಂಬಂಧ ಮತ್ತು ವಂಚನೆಗಾಗಿ ಆದಿಲ್ ಅಥವಾ ಅವನ ಗೆಳತಿಯನ್ನು ಬಿಡುವುದಿಲ್ಲ ಎಂದು ರಾಖಿ ಸಾವಂತ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. “ಶೀಘ್ರದಲ್ಲೇ ನಾನು ನಿವೇದಿತಾ ಚಾಂಡೆಲ್ ಮತ್ತು ಆದಿಲ್ ಖಾನ್ ದುರಾನಿ ವಿರುದ್ಧ ವಿವಾಹೇತರ ಸಂಬಂಧ, ವಂಚನೆಗಾಗಿ ಪ್ರಕರಣ ದಾಖಲಿಸುತ್ತೇನೆ. ಮತ್ತು ಅವನ ಮೊದಲ ಮದುವೆಗೆ ಕೂಡ. ಅವನು ನನಗೆ ಮೋಸ ಮಾಡಿದ ಮತ್ತು ಸುಳ್ಳು ಹೇಳಿದ,” ಎಂದು ಹೇಳಿದ್ದಾರೆ.
ಇದನ್ನೂ ಓದಿ: Rakhi Sawant: ಪತಿ ಆದಿಲ್ ಖಾನ್ ಅರೆಸ್ಟ್ ಆದ ಬೆನ್ನಲ್ಲೇ ಪೊಲೀಸ್ ಠಾಣೆ ಹೊರಗೆ ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸಾವಂತ್
“ನಾನು ನನ್ನ ಕಥೆಯನ್ನು ಹಂಚಿಕೊಳ್ಳಲು ನ್ಯಾಯಾಲಯಕ್ಕೆ ಬಂದಿದ್ದೇನೆ. ಆದಿಲ್‌ಗೆ ಜಾಮೀನು ಸಿಗಬಾರದು, ಎಲ್ಲಾ ಪುರಾವೆಗಳನ್ನು ಸಹ ಓಶಿವಾರಾ ಪೊಲೀಸ್ ಠಾಣೆಗೆ ಸಲ್ಲಿಸಿದ್ದೇನೆ. ನಾನು ನ್ಯಾಯಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನ್ಯಾಯಾಧೀಶರಿಂದ, ಆದಿಲ್ ನನಗೆ ಚಿತ್ರಹಿಂಸೆ ನೀಡಿದ್ದಾನೆ ಮತ್ತು ನನಗೆ ಮೋಸ ಮಾಡಿದ್ದಾನೆ ಮತ್ತು ಅವನಿಗೆ ಜಾಮೀನು ಪಡೆಯಲು ನಾನು ಬಿಡುವುದಿಲ್ಲ. ನಾನು ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಹ ನೀಡಿದ್ದೇನೆ, ಅವನು ನನ್ನ OTP ತೆಗೆದುಕೊಂಡು ನನ್ನ ಹಣವನ್ನು ಕದ್ದಿದ್ದಾನೆ ʼʼಎಂದಿದ್ದಾರೆ.
ನ್ಯಾಯಾಲಯದ ವಿಚಾರಣೆಯ ಕುರಿತು ಹಂಚಿಕೊಂಡ ರಾಖಿ ಪರ ವಕೀಲರು “ಪೊಲೀಸರಿಗೆ ಈ ಹಿಂದೆ ಸರಿಯಾದ ಫ್ಯಾಕ್ಟ್‌ಗಳನ್ನು ಇಡಲು ಸಾಧ್ಯವಾಗಲಿಲ್ಲ, ಆದ್ದರಿಂದ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆರೋಪಿಯ ವಕೀಲರು. ಜಾಮೀನು ಅರ್ಜಿಯೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ ಆದ್ದರಿಂದ ಇದೀಗ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ನಾವು ಪೊಲೀಸ್ ಕಸ್ಟಡಿಗೆ ಬೆಂಬಲ ನೀಡುತ್ತೇವೆ ಮತ್ತು ನಾವು ಅದೇ ರೀತಿ ಮನವಿ ಮಾಡುತ್ತೇವೆ. ರಾಖಿ ಆದಿಲ್ ವಿರುದ್ಧ ಹಣ ವಂಚನೆ ಆರೋಪ ಮಾಡಿದ್ದಾರೆ ಮತ್ತು ಹಣಕ್ಕಾಗಿ ತನ್ನ ಅನುಚಿತ ವಿಡಿಯೊಗಳನ್ನು ವ್ಯಾಪಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಅಪರಾಧವು ಸೈಬರ್ ಸೆಲ್‌ನ ವ್ಯಾಪ್ತಿಗೆ ಬರುವುದರಿಂದ ಸೈಬರ್ ಕ್ರೈಮ್ ಇಲಾಖೆಯಲ್ಲಿ ಪ್ರಕರಣ ನಡೆಯುತ್ತಿದೆʼʼ ಎಂದು ಹೇಳಿದ್ದಾರೆ.