Site icon Vistara News

Salman Khan: ಸೋಮಿ ಅಲಿ ಅಪಾರ್ಟ್‌ಮೆಂಟ್‌ನಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದ ಸಲ್ಮಾನ್‌; ಮುರಿದು ಬಿತ್ತು ಮದುವೆ!

Somy Ali Sangeeta Bijlani With Salman Khan

ಬೆಂಗಳೂರು: ಸುಮಾರು ಎಂಟು ವರ್ಷ ಕಾಲ ಸಲ್ಮಾನ್‌ ಖಾನ್‌ ಗೆಳತಿಯಾಗಿದ್ದ ಸೋಮಿ ಅಲಿ ಒಟ್ಟಿಗೆ ಇದ್ದಾಗ ಸಲ್ಮಾನ್‌ ಖಾನ್‌ ಅವರಿಂದ ಅನುಭವಿಸಿದ ಯಾತನೆಗಳನ್ನು ಆಗಾಗ ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಸಲ್ಮಾನ್ ಖಾನ್ (Salman Khan) ಅವರೊಂದಿಗೆ ಸಂಬಂಧದಲ್ಲಿದ್ದ ನಟಿ-ಸಾಮಾಜಿಕ ಕಾರ್ಯಕರ್ತೆ ಸೋಮಿ ಅಲಿ (Somy Ali) ಅವರು ʻʻಸಲ್ಮಾನ್‌ ಮಾಜಿ ಗೆಳತಿ ಸಂಗೀತಾ ಬಿಜಲಾನಿ (Sangeeta Bijlani) ಅವರನ್ನು ಬಹುತೇಕ ಮದುವೆಯಾಗಿದ್ದರು. ಮದುವೆ ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗಿತ್ತುʼʼ ಎಂಬ ಸ್ಫೋಟಕ ಮಾಹಿತಿಯನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್‌ನಿಂದಾಗಿ ತಾನು ಅನುಭವಿಸಿದ ಕೌಟುಂಬಿಕ ಹಿಂಸೆಯ ಬಗ್ಗೆ ಸೋಮಿ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದೆ ಹಂಚಿಕೊಂಡು ಭಾರಿ ಸುದ್ದಿಯಲ್ಲಿದ್ದರು. ಆ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ʻʻಸಲ್ಮಾನ್‌ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅವರನ್ನು ಬಹುತೇಕ ಮದುವೆಯಾಗಿದ್ದರುʼʼಎಂದು ಹೇಳಿಕೆ ನೀಡಿದ್ದಾರೆ.

“ಮದುವೆ ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗಿತ್ತು. ಆದರೆ ಸಂಗೀತಾ ನನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಲ್ಮಾನ್‌ನನ್ನು ರೆಡ್‌ಹ್ಯಾಂಡ್‌ಗೆ ಹಿಡಿದರು. ಸಲ್ಮಾನ್ ಸಂಗೀತಾಗೆ ಹೇಗೆ ಮೋಸ ಮಾಡಿದ್ದರೋ ಅದೇ ರೀತಿ ನನಗೂ ಆಯಿತು. ಇದನ್ನೇ ಕರ್ಮ ಎನ್ನುವುದು. ಬರಬರುತ್ತ ಅದನ್ನು ಅರ್ಥಮಾಡಿಕೊಂಡಿದ್ದೇನೆ” ಎಂದು ಸೋಮಿ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ʻʻಸಲ್ಮಾನ್ ಮೇಲೆ ನನಗೆ ಕ್ರಶ್ ಇತ್ತು ಮತ್ತು ಬಾಲಿವುಡ್‌ನಲ್ಲಿ ನನ್ನ ಅದೃಷ್ಟವನ್ನು ಪರೀಕ್ಷಿಸಲು ಮತ್ತು ನಟನನ್ನು ಮದುವೆಯಾಗಲು ಮುಂಬೈಗೆ ಬಂದಿದ್ದೆ. ‘ಪ್ರೀತಿ ಮತ್ತು ಕಾಳಜಿ’ ತೋರಿಸುವ ನೆಪದಲ್ಲಿ ಸಲ್ಮಾನ್ ನನ್ನನ್ನು ದೈಹಿಕವಾಗಿ ದುರುಪಯೋಗ ಪಡಿಸಿಕೊಂಡರುʼʼ ಎಂದರು.

ಇದನ್ನೂ ಓದಿ: Salman Khan | ಸಲ್ಮಾನ್‌ ಖಾನ್‌ ಒಬ್ಬ ಸ್ಯಾಡಿಸ್ಟ್‌, ಹಿಂಸ್ರಪಶು: 8 ವರ್ಷಗಳ ಸಂಬಂಧದ ಕಹಿ ಹಂಚಿಕೊಂಡ ಮಾಜಿ ಪ್ರೇಯಸಿ ಸೋಮಿ ಅಲಿ

ಸೋಮಿ ಅಲಿ ನಂತರ, ಸಲ್ಮಾನ್ ಖಾನ್ ಅವರು ಸಂಗೀತಾ ಬಿಜಲಾನಿ, ಕತ್ರಿನಾ ಕೈಫ್ ಮತ್ತು ಐಶ್ವರ್ಯಾ ರೈ ಅವರಂತಹ ನಟಿಯರೊಂದಿಗೆ ಅಫೇರ್‌ ಹೊಂದಿದ್ದರು ಎನ್ನಲಾಗಿದೆ. ಐಶ್ವರ್ಯ ಅವರು ಕೂಡಾ ಸಲ್ಮಾನ್‌ ನೀಡುತ್ತಿದ್ದ ಹಿಂಸೆಯಿಂದ ತುಂಬಾ ನೊಂದಿದ್ದರು. ಸಲ್ಮಾನ್ ಖಾನ್ ಪ್ರಸ್ತುತ ಮಾಡೆಲ್ ಯೂಲಿಯಾ ವಂತೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಸೋಮಿ ಮತ್ತು ಸಲ್ಮಾನ್ 1992ರ ಬುಲಂದ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು, ಆದರೆ ಅದು ತೆರೆಗೆ ಬಂದಿರಲಿಲ್ಲ.

ಇತ್ತೀಚಿಗೆ ಸೋಮಿ ಅಲಿ ತಮ್ಮ ‘ಫೈಟ್ ಅಂಡ್ ಫ್ಲೈಟ್’ ವೆಬ್‌ ಸೀರಿಸ್‌ನ ಬ್ಯಾನ್ ಮಾಡಲು ಸಲ್ಲಾನ್ ಖಾನ್ ಪ್ರಯತ್ನಿಸಿದ್ದಾರೆ. ನಾನು ಪಬ್ಲಿಸಿಟಿ ಗಿಮಿಕ್ ಮಾಡುತ್ತಿಲ್ಲ, ಸತ್ಯ ಜನರಿಗೆ ಗೊತ್ತಾಗಬೇಕು. ಸಲ್ಮಾನ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಅವರು ಅಹಂಕಾರಿ, ಸಲ್ಮಾನ್ ಖಾನ್ ಇನ್ನು ಮುಂದೆ ನನ್ನನ್ನು ಭಯಪಡಿಸಲು ಸಾಧ್ಯವಿಲ್ಲʼʼ ಎಂದು ಹಿಂದೊಮ್ಮೆ ಪೋಸ್ಟ್‌ ಮುಖಾಂತರ ಸಲ್ಮಾನ್‌ ವಿರುದ್ಧ ಕಿಡಿ ಕಾರಿದ್ದರು.

Exit mobile version