ಮುಂಬಯಿ: ವಿವಾಹದ ಮೊದಲು ಕೆಲವೊಂದು ಭಿನಾಭಿಪ್ರಾಯಗಳು ಸಾಮಾನ್ಯ. ಈಗ ಎಲ್ಲವೂ ಸರಿಯಾಗಿದೆ. ಒತ್ತಡ ಏನೇ ಇರಲಿ ಅದನ್ನು ಸರಿಪಡಿಸಲಾಗಿದೆ ಎಂದು ನಟ – ರಾಜಕಾರಣಿ (Actor-politician) ಶತ್ರುಘ್ನ ಸಿನ್ಹಾ (Shatrughan Sinha) ಹೇಳಿದ್ದಾರೆ. ಮಗಳು, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆ (Sonakshi Sinha Wedding) ವಿಚಾರವಾಗಿ ವದಂತಿಗಳ ಕುರಿತು ಅವರು ಪ್ರತಿಕ್ರಿಯಿಸಿದರು.
ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಅವರ ಮದುವೆಯ ಬಗ್ಗೆ ತಮ್ಮ ಕುಟುಂಬದಲ್ಲಿ ಕೆಲವು ಒತ್ತಡಗಳಿವೆ ಎನ್ನುವುದನ್ನು ಶತ್ರುಘ್ನ ಸಿನ್ಹಾ ಒಪ್ಪಿಕೊಂಡಿದ್ದಾರೆ. ಈಗ ಎಲ್ಲಾ ಒತ್ತಡವನ್ನು ಪರಿಹರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಹಲವಾರು ವರದಿಗಳು ಉಲ್ಲೇಖಿಸಿದಂತೆ ಜೂನ್ 23ರಂದು ಸೋನಾಕ್ಷಿಯ ಮದುವೆಯ ದಿನಾಂಕವಲ್ಲ ಎಂದು ಶತ್ರುಘ್ನ ಬಹಿರಂಗಪಡಿಸಿದರು. ವಾಸ್ತವವಾಗಿ, ಇದು ಅವಳ ಆರತಕ್ಷತೆಯ ದಿನಾಂಕವಾಗಿದೆ ಎಂದು ತಿಳಿಸಿದರು.
ಜೂನ್ 23ರಂದು ಸಂಜೆ ನಾವೆಲ್ಲರೂ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸುತ್ತಿದ್ದೇವೆ. ನನ್ನ ಕುಟುಂಬದ ಯಾರೂ ಮದುವೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಕೆಲವು ಮಾಧ್ಯಮಗಳು ಕೇವಲ ವಿಷಯಗಳನ್ನು ಊಹಿಸುತ್ತಿವೆ. ಖಾಸಗಿ ಕೌಟುಂಬಿಕ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ. ವಿವಾಹದ ಮೊದಲು ಘರ್ಷಣೆಗಳು ಸಾಮಾನ್ಯವಾಗಿದೆ. ನಾವೆಲ್ಲರೂ ಈಗ ಚೆನ್ನಾಗಿದ್ದೇವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಅವರು ಹೇಳಿದರು.
ಶತ್ರುಘ್ನ ಸಿನ್ಹಾ ಅವರ ಮಗಳು ಎಂಬ ಕಾರಣಕ್ಕೆ ಸೋನಾಕ್ಷಿ ಜೀವನದಲ್ಲಿ ತನಗೆ ಬೇಕಾದುದನ್ನು ಪಡೆಯದೆ ತ್ಯಾಗ ಮಾಡಬಾರದು ಎಂದೇನಿಲ್ಲ. ನಾವು ಪೋಷಕರು ಏನೇ ಹೇಳಬಹುದು. ಆದರೆ ನಿರ್ಧಾರ ಅವರದ್ದು ಎಂದರು.
ಮಗಳು ಸೋನಾಕ್ಷಿ ಮದುವೆ ಬಗ್ಗೆ ತನಗೆ ತಿಳಿದಿಲ್ಲ ಎಂದು ನಟ ಹೇಳಿದ ಅನಂತರ ಮೊದಲ ಬಾರಿಗೆ ಸೋನಾಕ್ಷಿ ಮತ್ತು ಶತ್ರುಘ್ನ ನಡುವಿನ ಬಿರುಕುಗಳ ವದಂತಿಗಳು ಪ್ರಾರಂಭವಾದವು. ಆದರೂ ಶತ್ರುಘ್ನ ಇತ್ತೀಚಿನ ಸಂದರ್ಶನವೊಂದರಲ್ಲಿ, ನನ್ನ ಏಕೈಕ ಪುತ್ರಿ ಸೋನಾಕ್ಷಿ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಆಕೆಯನ್ನು ಅಪಾರವಾಗಿ ಇಷ್ಟಪಡುತ್ತೇನೆ. ಅವಳು ನನ್ನನ್ನು ತನ್ನ ಶಕ್ತಿಯ ಮೂಲ ಎಂದು ಹೇಳುತ್ತಿರುತ್ತಾಳೆ. ನಾನು ಮದುವೆಗೆ ಖಂಡಿತ ಇರುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!
ಸೋನಾಕ್ಷಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕು ಇದೆ ಎಂದು ಹೇಳಿರುವ ಅವರು, ಸೋನಾಕ್ಷಿ ಮತ್ತು ಜಹೀರ್ ತಮ್ಮ ಜೀವನವನ್ನು ಒಟ್ಟಿಗೆ ಬದುಕಬೇಕು. ಅವರು ಒಟ್ಟಿಗೆ ತುಂಬಾ ಚೆನ್ನಾಗಿ ಕಾಣುತ್ತಾರೆ. ಸುಳ್ಳು ಸುದ್ದಿಗಳನ್ನು ಹೊರತರುತ್ತಿರುವವರು ಈ ಸಂತೋಷದಾಯಕ ಸಂದರ್ಭದಿಂದ ತುಂಬಾ ನಿರಾಶೆಗೊಂಡಿದ್ದಾರೆ. ಯಾಕೆಂದರೆ ಅವರು ಸುಳ್ಳನ್ನು ಹೊರತುಪಡಿಸಿ ಏನನ್ನೂ ಹರಡುತ್ತಿಲ್ಲ. ನಾನು ಅವರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಇದು ನಮ್ಮ ಖಾಸಗಿ ವಿಷಯ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.