Site icon Vistara News

Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

sonakshi sinha and zaheer iqbal

#image_title

ಮುಂಬೈ: ಬಾಲಿವುಡ್‌ನಲ್ಲಿ ನಟ-ನಟಿಯರು ಪರಸ್ಪರ ಪ್ರೀತಿಸಿಕೊಂಡು ಮದುವೆಯಾಗುವುದು ಹೊಸದೇನಲ್ಲ. ಹಲವಾರು ತಾರಾ ಜೋಡಿಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇದೀಗ ಅದೇ ಸಾಲಿಗೆ ಮತ್ತೊಂದು ಜೋಡಿ ಸೇರಿಕೊಳ್ಳಲು ಸಿದ್ಧವಾಗುತ್ತಿದೆ. ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಕೂಡ ನಟನೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ಇದೀಗ ಹೊರಬಿದ್ದಿದೆ.

ಜೂನ್‌ 2ರಂದು ಸೋನಾಕ್ಷಿ ತಮ್ಮ 36ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾರೆ. ಆ ದಿನದಂದು ಸೋನಾಕ್ಷಿ ತಂದೆ, ಹಿರಿಯ ಕಲಾವಿದ ಶತ್ರುಘ್ನ ಸಿನ್ಹಾ ಅವರು ಇನ್‌ಸ್ಟಾಗ್ರಾಂನಲ್ಲಿ ವಿಶೇಷವಾದ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಗಳಿಗೆ ಜನ್ಮದಿನದ ಶುಭ ಹಾರೈಸಿದ್ದರು. ಸೋನಾಕ್ಷಿ ಅವರ ಬಾಲ್ಯದ ಫೋಟೋಗಳನ್ನೂ ಅವರು ಹಂಚಿಕೊಂಡಿದ್ದರು. ಅದೇ ರೀತಿ ಹಲವಾರು ಗಣ್ಯರು ನಟಿಗೆ ಜನ್ಮದಿನದ ಶುಭ ಹಾರೈಸಿದ್ದರು. ಆದರೆ ಅದೆಲ್ಲಕ್ಕಿಂತ ವಿಶೇಷವಾಗಿದ್ದು ನಟ ಜಹೀರ್‌ ಇಕ್ಬಾಲ್‌ ಅವರ ಪೋಸ್ಟ್‌.

ಇದನ್ನೂ ಓದಿ: Sanya Iyer: ಬಾಲಿವುಡ್​ ಖ್ಯಾತ ಫೋಟೊಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸಾನ್ಯಾ ಅಯ್ಯರ್‌
ಸೋನಾಕ್ಷಿ ಅವರೊಂದಿಗಿರುವ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದ ನಟ ಜಹೀರ್‌, “ಜನರು ಏನಾದರೂ ಹೇಳುತ್ತಿರುತ್ತಾರೆ, ಹಾಗೆ ಹೇಳುವುದೇ ಅವರ ಕೆಲಸ. ನೀನು ಯಾವಾಗಲೂ ನನ್ನ ಮೇಲೆ ಒರಗಬಹುದು. ನೀನು ದಿ ಬೆಸ್ಟ್‌. ಹೀಗೇ ಮೇಲೇರುತ್ತಲೇ ಇರು. ಬೇರೆಯವರು ಕಾಣುವುದಕ್ಕೆ ಅದ್ಭುತವಾದ ಲೋಕವನ್ನು ನೀನು ಕಾಣುವಂತಾಗಲಿ. ಯಾವಾಗಲೂ ಸಂತೋಷವಾಗಿರು. ಐ ಲವ್‌ ಯೂ” ಎಂದು ಬರೆದುಕೊಂಡಿದ್ದಾರೆ.‌


ಜಹೀರ್‌ ಅವರು ಈ ರೀತಿಯಲ್ಲಿ ನಟಿಗೆ ಐ ಲವ್‌ ಯು ಹೇಳಿರುವುದರಿಂದ ಅವರಿಬ್ಬರು ಪರಸ್ಪರ ಪ್ರೀತಿಯಲ್ಲಿರುವ ವಿಚಾರ ಬಹಿರಂಗವಾದಂತಾಗಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ.

Exit mobile version