Site icon Vistara News

Sonal Monteiro: ನಟ ಕೋಮಲ್’ಗೆ ಜತೆಯಾದ ಕರಾವಳಿ ಬೆಡಗಿ ಸೋನಲ್ ಮೊಂತೆರೋ

Sonal Monteiro Komal Movie

ಬೆಂಗಳೂರು : ನಟ ಕೋಮಲ್ ಬಹು ದಿನಗಳ ನಂತರ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲೂ ಬ್ಯುಸಿಯಾಗುತ್ತಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ಕೋಮಲ್ ಬಣ್ಣ ಹಚ್ಚುತ್ತಿದ್ದಾರೆ. ಫೋಟೊಶೂಟ್ ಮೂಲಕ ಗಮನ ಸೆಳೆದ ಈ ಚಿತ್ರ ಜನವರಿ 26ರಂದು ಸೆಟ್ಟೇರುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡದಿಂದ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ. ಸೋನಲ್ ಮೊಂತೆರೋ (Sonal Monteiro) ನಾಯಕಿಯಾಗಿದ್ದಾರೆ.

‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಕರಾವಳಿ ಬೆಡಗಿ ಸೋನಲ್ ಮೊಂತೆರೋ ಜತೆಯಾಗಿದ್ದಾರೆ. ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ‘ರೋಲೆಕ್ಸ್ ಕೋಮಲ್’ ಚಿತ್ರತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: Kannada New Film | ʻಕಾಲಾಯ ನಮಃʼ ಎನ್ನುತ್ತ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ನಟ ಕೋಮಲ್‌!

ಇದನ್ನೂ ಓದಿ:Pathaan Movie: ಶಾರುಖ್‌ ಪೈರಸಿ ವಿರುದ್ಧ ಹೋರಾಡಲು ಮನವಿ ಮಾಡಿದ್ದರೂ ಲೀಕ್‌ ಆಯ್ತು ʻಪಠಾಣ್ʼ ಸಿನಿಮಾ!

ಕಂಟೆಂಟ್ ಬೇಸ್ಡ್ ಸಿನಿಮಾವಾಗಿರೋ ಈ ಚಿತ್ರ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಅವರ ಎರಡನೇ ಸಿನಿಮಾ ಇದಾಗಿದೆ.ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಬಾರಿ ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಜನವರಿ 27ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್‌ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.

Exit mobile version