Site icon Vistara News

Sonam Kapoor : ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ರಿಂದ ನಟಿ ಸೋನಂ ಕಪೂರ್‌ಗೆ ಬಂತು ಆಹ್ವಾನ

sonam kapoor invited by rishi sunak

ಲಂಡನ್‌: ಯುನೈಟೆಡ್‌ ಕಿಂಗ್‌ಡಂನ ಲಂಡನ್‌ನಲ್ಲಿ ಸದ್ಯ ಬ್ರಿಟನ್‌-ಭಾರತ ವಾರ ನಡೆಯುತ್ತಿದೆ. ಭಾರತದ ಗ್ಲೋಬಲ್‌ ಫೋರಮ್‌ ವತಿಯಿಂದ ಜೂನ್‌ 26ರಿಂದ 30ರವರೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅವರು ಬುಧವಾರದಂದು ರಿಸೆಪ್ಶನ್‌ ಕಾರ್ಯಕ್ರಮ ಇಟ್ಟುಕೊಂಡಿದ್ದು, ಅದಕ್ಕೆ ಬಾಲಿವುಡ್‌ನ ಪ್ರಸಿದ್ಧ ನಟಿ ಸೋನಂ ಕಪೂರ್‌ (Sonam Kapoor) ಅವರಿಗೆ ಆಮಂತ್ರಣ ನೀಡಲಾಗಿದೆ.

ರಿಷಿ ಸುನಾಕ್‌ ಅವರು ರಿಸೆಪ್ಶನ್‌ ಕಾರ್ಯಕ್ರಮವನ್ನು ತಮ್ಮ ಅಧಿಕೃತ ನಿವಾಸದಲ್ಲಿ ಮತ್ತು ಕಚೇರಿಯಲ್ಲಿ ನಡೆಸುತ್ತಿದ್ದಾರೆ. ಅದರಲ್ಲಿ ಭಾರತದ ಪ್ರತಿನಿಧಿಯಾಗಿ ಸೋನಂ ಭಾಗವಹಿಸಲಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: Viral Video : ಹಳೆಯ ಹಾಡಿಗೆ ಹುಡುಗಿಯರ ಡ್ಯಾನ್ಸ್‌; 5 ಕೋಟಿಗೂ ಅಧಿಕ ಜನರಿಂದ ವೀಕ್ಷಣೆ!
ಭಾರತದ ಗ್ಲೋಬಲ್‌ ಫೋರಂ ಯುಕೆ-ಇಂಡಿಯಾ ವಾರವನ್ನು ಐದನೇ ಬಾರಿಗೆ ನಡೆಸುತ್ತಿದೆ. ಇದು ರಾಜಕೀಯ, ವ್ಯಾಪಾರ ಸೇರಿದಂತೆ ಹಲವು ವಿಚಾರಗಳಲ್ಲ ಒಪ್ಪಂದ ಮಾಡಿಕೊಳ್ಳುವುದಕ್ಕೆ ಉಭಯ ದೇಶಗಳಿಗೆ ಸಿಗುವ ವೇದಿಕೆಯಾಗಿದೆ. ಎರಡು ದೇಶಗಳ ನಡುವಿನ ಪಾಲುದಾರಿಕೆಯನ್ನು ಹೆಚ್ಚಿಸುವುದು ಮತ್ತು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಸೋನಂ ಕಪೂರ್‌ ಅವರು ಬ್ಲೈಂಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೋಮಾ ಮಖಿಜಾ ನಿರ್ದೇಶನದ ಈ ಸಿನಿಮಾದಲ್ಲಿ ಪುರಬ್‌ ಕೊಹ್ಲಿ, ವಿನಯ್‌ ಪಾಠಕ್‌ ಮತ್ತು ಲಿಲ್ಲೆಟ್‌ ದುಬೆ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜುಲೈ 7ರಂದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

Exit mobile version