Site icon Vistara News

Sonam Kapoor: ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಸೋನಂ: ʻಬ್ಯೂಟಿ ಇನ್ ಬ್ಲ್ಯಾಕ್ʼ ಅಂದ್ರು ನೆಟ್ಟಿಗರು!

Sonam Kapoor

ಅನಿಲ್ ಕಪೂರ್ ಮನೆಯಲ್ಲಿ ಸೋನಂ ಕಪೂರ್ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ. ಜತೆಗೆ ತನ್ನ ಶೀರ್ಷಿಕೆಯಲ್ಲಿ ʻಭಾರತೀಯ ಪರಂಪರೆ ಮತ್ತು ನ್ಯಾಸಕರʼʼ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಪ್ಪು ಎಥ್ನಿಕ್‌ವೇರ್‌ ಮತ್ತು ಸಾಂಪ್ರದಾಯಿಕ ಆಭರಣಗಳಲ್ಲಿ, ಹಣೆಯ ಮೇಲೆ ಬಿಂದಿಯೊಂದಿಗೆ ‘ಅದ್ಭುತ’ವಾಗಿ ಕಂಡಿದ್ದಾರೆ.

ಚಿತ್ರಗಳ ಬಗ್ಗೆ ಅಭಿಮಾನಿಯೊಬ್ಬರು, “ಸೋನಮ್ ಅತ್ಯಂತ ಸುಂದರವಾದ ಮುಖ ಮತ್ತು ನಗುವನ್ನು ಹೊಂದಿದ್ದಾರೆ.” ಮತ್ತೊಬ್ಬರು, “ಎಂದಿನಂತೆ ಸೊಗಸಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ.

“ನೀವು ತುಂಬಾ ಸುಂದರವಾಗಿ ಕಾಣುತ್ತಿರುವಿರಿ ಸೋನಂ ಕಪೂರ್” ಎಂದು ಮತ್ತೊಬ್ಬರು ಬರೆದಿದ್ದಾರೆ. ಅಭಿಮಾನಿಯೊಬ್ಬರು “ಬ್ಯೂಟಿ ಇನ್ ಬ್ಲ್ಯಾಕ್” ಎಂದು ಕೂಡ ಕಮೆಂಟ್‌ ಮಾಡಿದ್ದಾರೆ.

ಸೋನಂ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ತಿಂಗಳು, ಅವರು ಹಳದಿ ಉಡುಪಿನಲ್ಲಿ ಪೋಸ್ ನೀಡಿದ ಚಿತ್ರಗಳನ್ನು ಹಂಚಿಕೊಂಡಿದ್ದರು.

Exit mobile version