ಬೆಂಗಳೂರು : ಪತಿ ಆನಂದ್ ಅಹುಜಾ ಮತ್ತು ಮಗ ವಾಯು ಅವರೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಬಾಲಿವುಡ್ ನಟಿ ಸೋನಂ ಕಪೂರ್ (Sonam Kapoor) ಮುಂಬೈನಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಭಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬಳಿ ಐಷಾರಾಮಿ ಅಪಾರ್ಟ್‌ಮೆಂಟ್ ಇದ್ದು, 32.5 ಕೋಟಿ ರೂ. ಮಾರಾಟ ಮಾಡಿದ್ದಾರೆ ಎಂದು ವರದಿ ಆಗಿದೆ. ಸೋನಂ ಕೊನೆಯದಾಗಿ 2019ರಲ್ಲಿ ತೆರೆಕಂಡ ‘ದಿ ಝೋಯಾ ಫ್ಯಾಕ್ಟರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಮುಂಬೈನ ಸಿಗ್ನೇಚರ್ ಐಲ್ಯಾಂಡ್‌ನಲ್ಲಿರುವ ಮೂರನೇ ಮಹಡಿಯ ಮನೆಯನ್ನು ಸೋನಂ 32.5 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. 2015ರಲ್ಲಿ 17 ಕೋಟಿ ರೂ.ಗೆ ಅಪಾರ್ಟ್‌ಮೆಂಟ್‌ನ್ನು ನಟಿ ಖರೀದಿಸಿದ್ದರು. ಇದೀಗ 32.5 ಕೋಟಿ ರೂ. ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ | Sonam kapoor ahuja | ಹೆರಿಗೆಯ ನಂತರ ಹೀಗಾಯಿತು ಸೋನಮ್ ಕಪೂರ್ ಔಟ್‌ಫಿಟ್ಸ್ – Sonam Kapoor outfits after pregnancy
ಸೋನಮ್ ಅವರು ಲಂಡನ್‌ನ ನಾಟಿಂಗ್ ಹಿಲ್‌ನಲ್ಲಿ ಮನೆಯನ್ನು ಖರೀದಿಸಿದ್ದಾರೆ. ಈ ಹಿಂದೆ ಆರ್ಕಿಟೆಕ್ಚರ್ ಮ್ಯಾಗಜೀನ್ ಒಂದರಲ್ಲಿ ತಮ್ಮ ಲಂಡನ್ ಮನೆಯ ವಿನ್ಯಾಸದ ಕುರಿತು “ಮನೆ ತುಂಬ ಫ್ಯಾಬುಲೆಸ್ ಆಗಿ ಆರಾಮದಾಯಕವಾಗಿರಬೇಕು” ಎಂದು ಹೇಳಿಕೊಂಡಿದ್ದರು.
ಆಗಸ್ಟ್ 20ರಂದು ಮಗ ವಾಯುನನ್ನು ದಂಪತಿ ಬರಮಾಡಿಕೊಂಡರು. ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಮಗನ ಜತೆ ಇರುವ ಫೋಟೊಗಳನ್ನು ಶೇರ್ ಮಾಡಿ ಶುಭಾಶಯ ತಿಳಿಸಿದ್ದರು. ಸೋನಂ ಹಾಗೂ ಆನಂದ್ ಅಹುಜಾ ಒಂದೆರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಮೇ 2018ರಲ್ಲಿ ಮುಂಬೈನಲ್ಲಿ ಮದುವೆಯಾಗಿದ್ದರು. ಸಿಖ್ ಸಂಪ್ರದಾಯದಂತೆ ವಿವಾಹ ನಡೆದಿತ್ತು. 2019ರಲ್ಲಿ ತೆರೆಕಂಡ ‘ದಿ ಝೋಯಾ ಫ್ಯಾಕ್ಟರ್’ ಚಿತ್ರದಲ್ಲಿ ಸೋನಂ ಕಪೂರ್ ಅಭಿನಯಿಸಿದ್ದರು. ಶೋಮ್ ಮಖಿಜಾ ಅವರ ʻಬ್ಲೈಂಡ್ʼ ಚಿತ್ರದಲ್ಲಿ ಸೋನಂ ಕಾಣಿಸಿಕೊಳ್ಳಲಿದ್ದಾರೆ. ದೃಷ್ಟಿಹೀನ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ | Sonam Kapoor | ದೀಪಾವಳಿಯಲ್ಲಿ ಸೋನಂ ಕಪೂರ್ ಪ್ರಭಾವಳಿ; ವೈರಲ್ ಆಯ್ತು ರೀಲ್ಸ್!