Site icon Vistara News

Sonam Kapoor | ದೀಪಾವಳಿಯಲ್ಲಿ ಸೋನಂ ಕಪೂರ್ ಪ್ರಭಾವಳಿ; ವೈರಲ್‌ ಆಯ್ತು ರೀಲ್ಸ್‌!

Sonam Kapoor

ಬೆಂಗಳೂರು: ನಟಿ ಸೋನಂ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ ದಂಪತಿ ಈ ಬಾರಿ ತಮ್ಮ ಮೊದಲ ಮಗು ವಾಯು ಜತೆಗೆ ದೀಪಾವಳಿಯನ್ನು ಆಚರಿಸಿದ್ದಾರೆ. ಇದಕ್ಕೂ ಮೊದಲು ಮಾಡಿಸಿದ್ದ ಬೇಬಿ ಬಂಪ್‌ ಫೋಟೊಶೂಟ್‌ ಸಾಕಷ್ಟು ವೈರಲ್‌ ಆಗಿತ್ತು. ಈಗ ಈ ದಂಪತಿಯ ಮತ್ತೊಂದು ಫೋಟೊಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ದೀಪಾವಳಿ ಸಂದರ್ಭದಲ್ಲಿ ಮಾಡಿಸಲಾಗಿರುವ ಫೋಟೊಶೂಟ್‌ ಅನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಲಾಗಿದೆ. ಇದಕ್ಕೆ ೧.೨೨ ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ನೂರಾರು ಕಮೆಂಟ್‌ಗಳು ಸಹ ಅಭಿಮಾನಿಗಳಿಂದ ಬಂದಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಸೋನಂ ಕಪೂರ್ ಇನ್ಸ್‌ಸ್ಟಾದಲ್ಲಿ ರೀಲ್ಸ್‌ ಹಂಚಿಕೊಂಡು ʻʻಲಕ್ಷ್ಮಿ, ಸರಸ್ವತಿ, ದುರ್ಗಾ ಮತ್ತು ಗಣೇಶನ ಆಶೀರ್ವಾದ ನಿಮ್ಮೆಲರ ಮೇಲೆ ಇರಲಿ, ನಿಮ್ಮ ಜೀವನವು ಬೆಳಕಿನಿಂದ ತುಂಬಿರಲಿ. ಶುಭೋದಯ ಮತ್ತು ದೀಪಾವಳಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Raju Srivastava | ಹಾಸ್ಯನಟ ರಾಜು ಶ್ರೀವಾಸ್ತವ್​​ಗೆ ಮರಳಿದ ಪ್ರಜ್ಞೆ; ಮುಂದುವರಿದ ಚಿಕಿತ್ಸೆ

ನಟಿ ಸೋನಂ ಕಪೂರ್‌ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಈ ಹಿಂದೆ ಹೇಳಿಕೊಂಡಿದ್ದರು. ಅಲ್ಲದೆ, ಜೀವನದುದ್ದಕ್ಕೂ ಶುಭ ಹಾರೈಸಿ, ಬೆಂಬಲಿಸಿದ ಕುಟುಂಬ ಸದಸ್ಯರು, ಸ್ನೇಹಿತರಿಗೆ ಧನ್ಯವಾದ ಸಮರ್ಪಿಸಿದ್ದರು.

ಸೋನಂ ಹಾಗೂ ಆನಂದ್ ಅಹುಜಾ ಮೇ 2018ರಲ್ಲಿ ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮೊದಲು ೨ ವರ್ಷ ಕಾಲ ಡೇಟಿಂಗ್‌ನಲ್ಲಿದ್ದರು ಎಂಬ ಗಾಸಿಪ್‌ ಹರಡಿತ್ತು. ಸಿಖ್ ಸಂಪ್ರದಾಯದಂತೆ ಈ ಜೋಡಿಯ ವಿವಾಹ ನಡೆದಿತ್ತು. 2019ರಲ್ಲಿ ತೆರೆಕಂಡ ‘ದಿ ಝೋಯಾ ಫ್ಯಾಕ್ಟರ್’ ಚಿತ್ರದಲ್ಲಿ ಸೋನಂ ಕಪೂರ್ ಅಭಿನಯಿಸಿದ್ದರು.

ಇದನ್ನೂ ಓದಿ | Sonam Kapoor | ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಸೋನಂ ಕಪೂರ್

Exit mobile version