Site icon Vistara News

Sonu Gowda: ನನ್ನ ಮನೆಯವರಿಗೆ ನೋವು ಕೊಡಬೇಡಿ ಅಂತಾ ಗಳಗಳನೇ ಅತ್ತ ಸೋನು!

Sonu Gowda

ಬೆಂಗಳೂರು: ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (sonu srinivas gowda) ತಮ್ಮ ಫೋಟೊ, ರೀಲ್ಸ್‌,ವಿಡಿಯೊ ಮೂಲಕ ಟ್ರೋಲ್‌ಗೆ (Sonu Gowda) ಗುರಿಯಾಗುತ್ತಲೇ ಇರುತ್ತಾರೆ. ಹಿಂದೊಮ್ಮೆ ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಇದಕ್ಕೆಲ್ಲ ಕಾರಣ. ಇದೀಗ ಎಂಟು ವಿಚಾರಗಳನ್ನು ಇಟ್ಟುಕೊಂಡು ಸೋನು ಗೌಡ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಸೋನು ಗಳಗಳನೇ ಅತ್ತಿದ್ದಾರೆ.

ಅಂತಹ ತಪ್ಪು ನಾನು ಏನು ಮಾಡಿದೆ?

ಸೋಷಿಯಲ್ ಮೀಡಿಯಾದಿಂದ ನನಗೆ ತುಂಬ ನೆಗೆಟಿವ್ ಕಮೆಂಟ್​ಗಳು ಬರುತ್ತಿದೆ. ನನ್ನ ಹಳೆಯ ವಿಡಿಯೊ ನೋಡಿ ಬ್ಯಾಡ್ ಕಮೆಂಟ್ ಮಾಡುತ್ತೀರಿ. ತೀರ ಕೆಟ್ಟ ಕಮೆಂಟ್ ಯಾಕೆ ಬರುತ್ತಿವೆ? ನಾನು ಅಂತಹ ತಪ್ಪು ಏನು ಮಾಡಿದ್ದೆ? ನನಗೆ ಅರ್ಥವಾಗುತ್ತಿಲ್ಲ. ಮನಸಿಗೆ ತುಂಬಾ ನೋವಾಗಿದೆ. ನಾನೆಷ್ಟು ಸ್ಟ್ರಾಂಗ್ ಇದ್ದೇನೆ. ಅಷ್ಟೇ ಎಮೋಷನಲ್ ಕೂಡಾ ಹೌದು. ಹೀಗೆ ವಿಡಿಯೊ ಮಾಡಬೇಕೆನಿಸಿದ್ದು ಏಕೆ ಅಂದರೆ ಒಂದು ವಾರದ ಹಿಂದೆ ನಮ್ಮಮ್ಮ ಒಂದು ಮೊಬೈಲ್ ನೋಡುತ್ತಿದ್ದರು. ಸೋಫಾ ಮೇಲೆ ಕುಳಿತು ಮೊಬೈಲ್ ನೋಡುತ್ತ ಇದ್ದರು. ಯೂಟ್ಯೂಬ್ ನೋಡುತ್ತ ಅವರಿಗೆ ಒಂದು ಟ್ರೋಲ್ ವಿಡಿಯೊ ಸಿಕ್ಕಿತು. ಕಟಟ್ಟದಾಗಿ ಟ್ರೊಲ್ ಮಾಡಿದ ವಿಡಿಯೊ ನೋಡಿದ ಅಮ್ಮ ಸೌಂಡ್ ಕಮ್ಮಿ ಕೊಟ್ಟು ನೋಡುತ್ತಿದ್ದರು. ಅವರ ಕಣ್ಣಲ್ಲಿ ನೀರು ಬಂತುʼʼಎಂದು ಹೇಳಿಕೊಂಡರು.

ನನ್ನ ಮನೆಯವರಿಗೆ ನೋವು ಕೊಡಬೇಡಿ

ನಾನು ತಪ್ಪು ಮಾಡಿದ್ದೀನಿ, ಅದೊಂದು ವಯಸ್ಸು. ತಪ್ಪು ಆಗಿ ಹೋಗತ್ತೆ, ನನಗೆ ಈಗ ವಯಸ್ಸು 24. ತಪ್ಪು ತಿದ್ದುಕೊಳ್ಳುವುದಕ್ಕೆ ಅವಕಾಶ ಕೊಡಬೇಕು, ಆದರೆ ಅದೇ ತಪ್ಪನ್ನು ಪದೇ ಪದೇ ಹೇಳುತ್ತಿದ್ದಾರೆ. ನನ್ನಿಂದ ಇಡೀ ಕುಟುಂಬ ನೋವು ತಿನ್ನುತ್ತಿದೆ ಎಂದು ನನಗೆ ಗೊತ್ತಾಗಿದೆ. ನನ್ನನ್ನು ಟ್ರೋಲ್ ಮಾಡಿ, ಆದರೆ ಲಿಮಿಟ್ ಇರಲಿ. ಬಹುತೇಕ ನೆಗೆಟಿವ್ ಕಮೆಂಟ್‌ ಹುಡುಗಿಯರೇ ಮಾಡಿದ್ದಾರೆ. ನಾನು ಯಾರ ಮನೆಗಾದ್ರೂ ಹೋಗಿ ಕದ್ದಿದ್ದೇನಾ? ಯಾರಿಗಾದರೂ ಮೋಸ ಮಾಡಿದ್ದೇನಾ?ಇದು ನಾಟಕ, ಇನ್ನೊಂದು ಎಂದು ಹೇಳಿದರೂ ಬೇಜಾರಿಲ್ಲʼʼಎಂದಿದ್ದಾರೆ.

ಇದನ್ನೂ ಓದಿ: Bigg Boss Kannada | ಡವ್‌ ರಾಜ ಅಂದಿದಕ್ಕೆ ಕ್ಲಾಸ್‌: ಸೋನು-ಗುರೂಜಿ ವಾಗ್ವಾದಕ್ಕೆ ಸಾನ್ಯ ಎಂಟ್ರಿ!

ಈಗಲೂ ಪಶ್ಚಾತಾಪ ಪಡುತ್ತಿದ್ದೇನೆ

ʻʻನಾನು ಜನರಿಗೇನೂ ಮಾಡಿಲ್ಲ. ನನ್ನ ಲೈಫ್​ನಲ್ಲಿ ಆದ ಒಂದು ತಪ್ಪನಿಂದ ನಾನು ಈಗಲೂ ಪಶ್ಚಾತಾಪ ಪಡುತ್ತಿದ್ದೇನೆ. ತೀರ ಹೆಚ್ಚು ಟ್ರೋಲ್ ಮಾಡಿದರೆ ಯಾರೂ ಸಹಿಸಲ್ಲ. ಕಣ್ಣೀರು ಹಾಕಿ ವಿಡಿಯೊ ಮಾಡುತ್ತಿದೇಬೆ. ಇದು ನನ್ನ ಫ್ಯಾಮಿಲಿಗೋಸ್ಕರ. ಏನೇನೋ ಎಡಿಟ್ ಮಾಡಿ, ಏನೇನೋ ಬರೆದು ಕಮೆಂಟ್ ಮಾಡುತ್ತೀರಿ. ಹಳ್ಳಿ ಜನರಿಗೆ ಎಡಿಟ್ ಮಾಡಿದ್ದು ಗೊತ್ತಾಗಲ್ಲ. ಅವರು ಅದನ್ನು ನಿಜವೆಂದೇ ನಂಬುತ್ತಾರೆʼʼ ಎಂದಿದ್ದಾರೆ.ʻʻಬಿಗ್ ಬಾಸ್ ನಂತರ ಟ್ರೋಲ್ ಕಾಟ ಹೆಚ್ಚಾಗಿದೆ. ನನಗೆ ಮಾನಸಿಕವಾಗಿ ಶಾಕ್ ಆಗಿದೆ. ನೀವು ಮಾಡುವ ಅಸಹ್ಯದಿಂದ ನನಗೆ ಭವಿಷ್ಯವೇ ಇಲ್ಲ ಅಂತ ಅನಿಸ್ತಿದೆʼʼಎಂದು ಅಳಲು ತೋಡಿಕೊಂಡಿದ್ದಾರೆ.

ಯಾರು ಈ ಸೋನು ಗೌಡ

ಸೋನು ಶ್ರೀನಿವಾಸ್‌ ಗೌಡ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌. ಹಾಗೇ ಟಿಕ್‌ಟಾಕ್‌ ಮೂಲಕ ಖ್ಯಾತಿ ಪಡೆದವರು. ಸೋನು ಗೌಡ ವಿಡಿಯೊಗಿಂತ ಟ್ರೋಲ್‌ ಮೂಲಕ ಫೇಮಸ್‌ ಆದವರು. ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಬ್ರ್ಯಾಂಡ್​ಗಳ ಪ್ರಮೋಷನ್‌​ ವಿಡಿಯೊ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಈ ಹಿಂದೆ ಅವರ ಖಾಸಗಿ ಪೋಟೊಗಳು, ವಿಡಿಯೊಗಳು ಲೀಕ್‌ ಆಗಿದ್ದವು. ಇವರು ಇನ್‌ಸ್ಟಾದಲ್ಲಿ ಸಾಕಷ್ಟು ಜನ ಫಾಲೋವರ್ಸ್‌ ಹೊಂದಿದ್ದಾರೆ. 

Exit mobile version