Site icon Vistara News

Attack on Sonu Nigam: ಸೆಲ್ಫಿಗಾಗಿ ಗಾಯಕ ಸೋನು ನಿಗಮ್​ ಮೇಲೆ ಹಲ್ಲೆ ಮಾಡಿದ ಶಾಸಕನ ಪುತ್ರ ಮತ್ತು ಅಳಿಯ

Sonu Nigam allegedly manhandled at Mumbai event

#image_title

ಮುಂಬಯಿ: ಗಾಯಕ ಸೋನು ನಿಗಮ್ ಅವರ ಜತೆ ಶಿವಸೇನೆ ಶಾಸಕ (Attack on Sonu Nigam)ಪ್ರಕಾಶ್ ಫಾತರ್​ಫೇಕರ್​ ಅವರ ಪುತ್ರ ಮತ್ತು ಅಳಿಯ ಬಲವಂತವಾಗಿ ಸೆಲ್ಫೀ ತೆಗೆಯಲು ಮುಂದಾದ ಪರಿಣಾಮ ತೀವ್ರ ಗೊಂದಲ ಸೃಷ್ಟಿಯಾಗಿತ್ತು. ಸೋನು ನಿಗಮ್ ಅವರ ಭದ್ರತಾ ಸಿಬ್ಬಂದಿ ಮತ್ತು ಶಾಸಕನ ಪುತ್ರ-ಅಳಿಯನ ನಡುವೆ ಸಣ್ಣಮಟ್ಟಿಗಿನ ಹೊಡೆದಾಟವೇ ನಡೆಯಿತು.

ಮುಂಬಯಿಯ ಚೆಂಬೂರಿನಲ್ಲಿ ಸಾಂಸ್ಕೃತಿಕ ಉತ್ಸವ ನಡೆಯುತ್ತಿತ್ತು. ಅದರಲ್ಲಿ ಸೋನು ನಿಗಮ್ ಲೈವ್ ಕಾನ್ಸರ್ಟ್ ನಡೆಸುತ್ತಿದ್ದರು. ಈ ಉತ್ಸವದಲ್ಲಿ ಬಂದು ಹಾಡುವಂತೆ ಸೋನು ನಿಗಮ್ ಗೆ ಆಹ್ವಾನ ನೀಡಿದ್ದೇ ಶಿವಸೇನೆ ಶಾಸಕ ಪ್ರಕಾಶ್ ಫಾತರಪೇಕರ್. ಆದರೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ.

ಇದನ್ನೂ ಓದಿ: Prithvi Shaw: ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಕಾರಿನ ಮೇಲೆ ದಾಳಿ; 8 ಮಂದಿ ವಿರುದ್ಧ ಪ್ರಕರಣ ದಾಖಲು

ಹೀಗೆ ಕಾರ್ಯಕ್ರಮದ ವೇಳೆ ಶಾಸಕನ ಪುತ್ರ ಮತ್ತು ಅಳಿಯ ಸೋನು ನಿಗಮ್ ಜತೆ ಬಲವಂತವಾಗಿ ಸೆಲ್ಫೀ ತೆಗೆಯಲು ಮುಂದಾದರು. ಆಗ ಗಾಯಕನ ರಕ್ಷಣಾ ಸಿಬ್ಬಂದಿ ಅದನ್ನು ತಡೆಯಲು ಬಂದಾಗ ಗಲಾಟೆ ಶುರುವಾಗಿದೆ. ಶಾಸಕನ ಪುತ್ರ ಮತ್ತು ಅಳಿಯ ಹಲ್ಲೆ ನಡೆಸಿದ ಪರಿಣಾಮ ಸೋನು ನಿಗಮ್ ಅವರ ಮೆಂಟರ್ ಗುಲಾಮ್ ಮುಸ್ತಫಾ ಖಾನ್ ಅವರ ಪುತ್ರ ರಬ್ಬಿನಿ ಖಾನ್ ಮತ್ತು ಇತರ ಬಾಡಿ ಗಾರ್ಡ್ ಗಳು ಗಾಯಗೊಂಡಿದ್ದಾರೆ. ಇವರನ್ನೆಲ್ಲ ಆಸ್ಪತ್ರೆಗೆ ದಾಖಲಾಗಿದೆ. ಸೋನು ನಿಗಮ್ ಅವರನ್ನೂ ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಸೋನು ನಿಗಮ್ ಪೊಲೀಸರಿಗೆ ದೂರು ನೀಡಿದ್ದಾರೆ.

Exit mobile version