Site icon Vistara News

Sonu sood | ಶ್ರೀಮಂತನಾದ ಸೋನು ಸೂದ್‌ ಈಗ ರೈತ!

Sonu sood

ಬೆಂಗಳೂರು: ಬಹು ಭಾಷಾ ನಟ ಸೋನು ಸೂದ್‌ (Sonu sood) ನಟನೆ ಜತೆ ಚಿತ್ರ ನಿರ್ಮಾಣದ ಹೊಣೆ ಹೊತ್ತಿರುವುದಲ್ಲದೆ, ಮಾಡೆಲ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಶ್ರೀಮಂತ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದ್ದು, ಅವರ ನಟನಾ ಶ್ರೀಮಂತಿಕೆಯನ್ನು ನೋಡಲು ಸಿನಿರಸಿಕರು ಕಾತರರಾಗಿದ್ದಾರೆ.

ಹಾಸನ್‌ ರಮೇಶ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗೋಲ್ಡನ್‌ ರೈನ್‌ ಮೂವೀಸ್‌ ಬ್ಯಾನರ್‌ ಅಡಿ ಸಿನಿಮಾ ನಿರ್ಮಾಣಗೊಳ್ಳಲಿದ್ದು, ಶ್ರೀಮಂತ ಮೋಷನ್‌ ಪೋಸ್ಟರ್‌ ಸಾಕಷ್ಟು ಗಮನ ಸೆಳೆಯುತ್ತಿದೆ. ಇಲ್ಲಿ ಸೋನು ಸೂದ್‌ ನೇಗಿಲನ್ನು ಹೊತ್ತಿದ್ದಾರೆ. ಇನ್ನೊಬ್ಬ ಎತ್ತಿನ ಗಾಡಿಯನ್ನು ಚಲಾವಣೆ ಮಾಡುತ್ತಿದ್ದಾನೆ.

ಸೋನು ಸೂದ್‌ ಬರೀ ಸಿನಿಮಾ ಅಷ್ಟೇ ಅಲ್ಲ, ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಎಲ್ಲೇ ಜನ ಕಷ್ಟದಲ್ಲಿ ಇದ್ದಾರೆ ಅಂದರೆ ಸಾಕು ಅಲ್ಲಿ ಸೋನು ಸೂದ್ ರೆಡಿ ಇರುತ್ತಾರೆ. ಸೋನು ಸೂದ್ ಹಿಂದಿ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿರುವ ಭಾರತೀಯ ನಟ.

ಇದನ್ನೂ ಓದಿ | Sonu Sood ನೆರವಿನಿಂದ 4 ಕೈ‌, 4 ಕಾಲಿನ ಪುಟಾಣಿಗೆ ಆಯ್ತು ಯಶಸ್ವಿ ಶಸ್ತ್ರಚಿಕಿತ್ಸೆ

೧೯೯೯ ರಲ್ಲಿ, ʻಕಲ್ಲಾಜ್ಹಾಗರ್ʼ ಮತ್ತು ನೆನ್ಜಿಂಜೈಲೆಯೊಂದಿಗೆ ತಮಿಳು ಭಾಷೆಯ ಚಲನಚಿತ್ರಗಳಿಗೆ ಸೂದ್ ಪದಾರ್ಪಣೆ ಮಾಡಿದರು. ೨೦೦೦ರಲ್ಲಿ ತೆಲುಗಿನ ʻಹ್ಯಾಂಡ್ಸ್ ಅಪ್ʼನಲ್ಲಿ ಕಾಣಿಸಿಕೊಂಡರು. ೨೦೦೧ ರಲ್ಲಿ ಮಜನು, ೨೦೦೨ರಲ್ಲಿ ಹಿಂದಿಯ ಶಹೀದ್-ಇ-ಅಜಮ್‌ನಲ್ಲಿ ಭಗತ್ ಸಿಂಗ್ ಪಾತ್ರದಲ್ಲಿ ನಟಿಸುವ ಮೂಲಕ ಮಿಂಚಿದರು. ಮಣಿ ರತ್ನಂ ನಿರ್ದೇಶನದಲ್ಲಿ ೨೦೦೪ರಲ್ಲಿ ತೆರೆಕಂಡ “ಯುವ” ಚಿತ್ರದಲ್ಲಿ ಅಭೀಷೇಕ್‌ ಬಚ್ಚನ್‌ಗೆ ಸಹೋದರರಾಗಿ ನಟಿಸಿದ್ದ ಸೂದ್‌, ೨೦೦೫ರಲ್ಲಿ ಬಿಡುಗಡೆಗೊಂಡ ʻಆಶಿಕ್ ಬನಾಯಾ ಆಪ್ನೆʼ ಸಿನಿಮಾ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು.

ಯುವ (2004), ಅದಾಡು (2005), ಆಶಿಕ್ ಬನಾಯಾ ಆಪ್ನೆ (2005), ಜೊಧಾ ಅಕ್ಬರ್ (2008), ದೂಕುಡು (2011) ಮತ್ತು ಶೂಟ್ಔಟ್ ಅಟ್ ವಡಾಲಾ (2013) ಸೇರಿದಂತೆ ಮುಂತಾದ ಬ್ಲಾಕ್‌ಬಸ್ಟರ್‌ ಚಲನಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ | Sonu Sood | ರಕ್ತದಲ್ಲಿ ಅರಳಿದ ಸೋನು ಸೂದ್: ಅಭಿಮಾನಿಗೆ ನಟನ ಸಂದೇಶವೇನು?

Exit mobile version