Site icon Vistara News

Sonu Sood | ರಕ್ತದಲ್ಲಿ ಅರಳಿದ ಸೋನು ಸೂದ್: ಅಭಿಮಾನಿಗೆ ನಟನ ಸಂದೇಶವೇನು?

Sonu Sood

ಬೆಂಗಳೂರು: ಬಾಲಿವುಡ್‌ ನಟ ಸೋನು ಸೂದ್‌ (Sonu Sood) ಸಮಾಜಮುಖಿ ಕಾರ್ಯದಿಂದಲೂ ಗುರುತಿಸಿಕೊಂಡು ಸಾವಿರಾರು ಮಂದಿಗೆ ಸಹಾಯ ಮಾಡುತ್ತಲೇ ಬಂದಿದ್ದು, ಈಗ ಅವರ ಅಭಿಮಾನಿಯೊಬ್ಬ ನೆಚ್ಚಿನ ನಟನ ಭಾವಚಿತ್ರವನ್ನು ರಕ್ತದಿಂದ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

2022ರಲ್ಲಿ ಕೊರೊನಾ ಸಂದರ್ಭದಲ್ಲಿ ಸೋನು ಸೂದ್ ಅನೇಕರಿಗೆ ಸಹಾಯ ಮಾಡಿದ್ದರು. ಇದೇ ಕಾರಣಕ್ಕೆ ಅನೇಕರು ಸೋನು ಸೂದ್‌ ಪೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ಅಭಿಮಾನಿ ಮಧು ಗುರ್ಜರ್ ಎಂಬಾತ ಸೋನು ಸೂದ್‌ ಭಾವಚಿತ್ರವನ್ನು ರಕ್ತದಿಂದ ಬಿಡಿಸಿದ್ದಾರೆ. ಈ ಬಗ್ಗೆ ಸೋನು ಸೂದ್‌ಗೆ ಖುಷಿ ಜತೆ ಬೇಸರವೂ ಆಗಿದೆ.

ಇದನ್ನೂ ಓದಿ | Sonu Sood ನೆರವಿನಿಂದ 4 ಕೈ‌, 4 ಕಾಲಿನ ಪುಟಾಣಿಗೆ ಆಯ್ತು ಯಶಸ್ವಿ ಶಸ್ತ್ರಚಿಕಿತ್ಸೆ

ಸೋನು ಸೂದ್‌ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ʻʻರಕ್ತದಿಂದ ಚಿತ್ರವನ್ನು ಬಿಡಿಸಬಾರದು. ರಕ್ತ ದಾನ ಮಾಡಬೇಕು. ರಕ್ತ ಅನೇಕರಿಗೆ ಸಹಾಯವಾಗುತ್ತದೆʼʼ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ. ʻʻರಕ್ತವನ್ನು ದಾನ ಮಾಡಿ. ಈ ರೀತಿ ಚಿತ್ರ ಮಾಡುವುದರಲ್ಲಿ ವ್ಯರ್ಥ ಮಾಡಬೇಡಿʼʼ ಎಂದು ಸಂದೇಶ ನೀಡಿದ್ದಾರೆ. ಸೋನು ಹಾಗೂ ಅಭಿಮಾನಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋನು ಸೂದ್ ಅವರು, ಇತ್ತೀಚೆಗೆ, ಅಕ್ಷಯ್ ಕುಮಾರ್ ಅಭಿನಯದ ʻಪೃಥ್ವಿರಾಜ್ʼ ಚಿತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ಅವರು ತಮಿಳು ಚಿತ್ರವಾದ ʻತಮಿಳರಸನ್ʼನಲ್ಲಿ ಅಭಿನಯಿಸುತ್ತಿದ್ದು, ಅದಾದ ನಂತರ ಬಾಲಿವುಡ್‌ನ ʻಫತೇʼ ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಇದನ್ನೂ ಓದಿ | Viral Video: ಒಂದೇ ಕಾಲಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ನೆರವಿಗೆ ಬಂದ ನಟ ಸೋನು ಸೂದ್‌

Exit mobile version