Site icon Vistara News

Sonu Sood | ಟಿಕ್‌ಟಾಕ್‌ ಸ್ಟಾರ್‌ ಖಾಬಿ ಜತೆ ನಟ ಸೋನು ಸೂದ್‌ ರೀಲ್ಸ್‌: ವೈರಲ್‌ ಆಯ್ತು ವಿಡಿಯೊ

Sonu Sood

ಬೆಂಗಳೂರು : ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುವ ವಿಡಿಯೊವನ್ನು ನಟ ಸೋನು ಸೂದ್‌ (Sonu Sood) ಹಂಚಿಕೊಂಡಿದ್ದರು. ವಿಡಿಯೊ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗುತ್ತಿದ್ದು, ಸೋನು ಸೂದ್ ಅಭಿಮಾನಿಗಳು ವಿಡಿಯೊ ನೋಡಿ ಸಂತಸ ವ್ಯಕ್ತಪಡಿಸಿದರೆ ರೈಲ್ವೆ ಪೊಲೀಸರು ಎಚ್ಚರಿಕೆಯ ಮೆಸೇಜ್‌ ನೀಡಿದ್ದರು. ಇದರ ಬೆನ್ನಲ್ಲೇ ನಟ ಸೋನು ಸೂದ್‌ ಹಾಗೂ ಟಿಕ್‌ ಟಾಕರ್‌ ಖಾಬಿ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ನಟ ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಖಾಬಿ ಜತೆ ಸೇರಿ, ತಮಾಷೆಯಾದ ವಿಡಿಯೊವೊಂದನ್ನ ಮಾಡಿದ್ದಾರೆ. ಈ ವಿಡಿಯೊ 40 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೊದಲ್ಲಿ ಕಾಣಿಸುವಂತೆ ಇಬ್ಬರು ಜ್ಯೂಸ್ ಕುಡಿಯಲು ಸಿದ್ಧತೆ ಮಾಡುತ್ತಿದ್ದಾರೆ. ಸೋನು ಎರಡು ಗ್ಲಾಸ್‌ಗಳನ್ನು ಇಟ್ಟು ಅವುಗಳಿಗೆ ಒಂದು ಗ್ಲಾಸ್‌ಗೆ ಹೆಚ್ಚು ಒಂದು ಗ್ಲಾಸ್‌ಗೆ ಕಡಿಮೆ ಐಸ್ ಹಾಕುತ್ತಾರೆ. ನಂತರ ಜಗ್‌ನಲ್ಲಿರುವ ಜ್ಯೂಸ್ ಅನ್ನು ತಮ್ಮ ಖಾಬಿ ಮುಂದೆ ಇರುವ ಗ್ಲಾಸ್‌ಗೆ ಪೂರ್ಣವಾಗಿ ಹಾಕಿ ಅದು ಗ್ಲಾಸ್ ತುಂಬಿದ ನಂತರ ಉಳಿವ ಸ್ವಲ್ಪವೇ ಸ್ವಲ್ಪವನ್ನು ತಮ್ಮ ಮುಂದಿದ್ದ ಗ್ಲಾಸ್‌ಗೆ ಹಾಕುತ್ತಾರೆ. ನಂತರ ತಮ್ಮ ಬಳಿ ಇದ್ದ ಒಂದು ಸ್ಟ್ರಾವನ್ನು ಗ್ಲಾಸ್‌ಗೆ ಹಾಕುತ್ತಾರೆ. ಈ ವೇಳೆ ಖಾಬಿ ತಮ್ಮ ಗ್ಲಾಸ್ ಅನ್ನ ಬಿಟ್ಟು ಸ್ವಲ್ಪವೇ ಜ್ಯೂಸ್ ಇರುವ ಗ್ಲಾಸ್ ತೆಗೆದುಕೊಳ್ಳಲು ಮುಂದಾಗುವಂತೆ ಕಾಣುತ್ತಾರೆ. ಆದರೆ ಅವರು ಕಣ್ಣು ಹಾಕಿದ್ದು, ಕಡಿಮೆ ಜ್ಯೂಸ್ ಇರುವ ಗ್ಲಾಸ್ ಮೇಲಲ್ಲ. ಅದರಲ್ಲಿರುವ ಸ್ಟ್ರಾ ಮೇಲೆ. 

ಇದನ್ನೂ ಓದಿ | Viral Video: ಒಂದೇ ಕಾಲಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ನೆರವಿಗೆ ಬಂದ ನಟ ಸೋನು ಸೂದ್‌

ಖಾಬಿ ಮಾತ್ರ ನೋಡುವಷ್ಟು ನೋಡಿ ಸೋನು ಗ್ಲಾಸ್‌ನಲ್ಲಿದ್ದ ಸ್ಟ್ರಾ ಎತ್ತಿಕೊಂಡು ಏನು ಆಗದವಂತೆ ಜ್ಯೂಸ್ ಕುಡಿಯುತ್ತಾನೆ. ವಿಡಿಯೊಗೆ ನೋಡುಗರು ಮೆಚ್ಚುಗೆ ಸೂಚಿಸಿದ್ದಾರೆ.  

ಇದನ್ನೂ ಓದಿ | Sonu sood | ಶ್ರೀಮಂತನಾದ ಸೋನು ಸೂದ್‌ ಈಗ ರೈತ!

Exit mobile version