Site icon Vistara News

Sonu Srinivas Gowda:  ‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ; ʻಮತ್ಸ್ಯ ಕನ್ಯೆʼ ಅಂದ್ರು ಫ್ಯಾನ್ಸ್‌!

Sonu Srinivas Gowda

ಬೆಂಗಳೂರು: ಬಿಗ್‌ ಬಾಸ್ ಖ್ಯಾತಿಯ ಸೋನು ಗೌಡ (Sonu Srinivas Gowda) ಮಾಲ್ಡೀವ್ಸ್‌ನಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಬಿಕಿನಿ ವಿಡಿಯೊ ಬಳಿಕ ಸೋನು ಹೊಸ ಫೋಟೊಗಳ ಜತೆ ಸಿಹಿ ಸುದ್ದಿಯನ್ನು ಫ್ಯಾನ್ಸ್‌ ಜತೆ ಶೇರ್‌ ಮಾಡಿಕೊಂಡಿದ್ದಾರೆ. ಆಕಾಶ ನೀಲಿ ಡ್ರೆಸ್ ಧರಿಸಿ ಸೋನು ಮಾಲ್ಡೀವ್ಸ್‌ನಲ್ಲಿ ಮಿಂಚಿದ್ದಾರೆ. ಜತೆಗೆ ಹೊಸ ಪ್ರಾಜೆಕ್ಟ್‌ ಬಗ್ಗೆಯೂ ಸೋನು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಶೇರ್ ಮಾಡಿರುವ ಬಿಕಿನಿ ವಿಡಿಯೊ 1 ಕೋಟಿ 90 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಇದರ ಬೆನ್ನಲ್ಲೇ ಕ್ಯಾಡ್ಬರಿಸ್ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ಸೋನು ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ಗೌಡ ಈ ಬಗ್ಗೆ ಪೋಸ್ಟ್‌ನಲ್ಲಿ ʻʻಎಲ್ಲರಿಗೂ ನಮಸ್ಕಾರ , ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಾನು ಕನಸು ಪ್ರೊಡಕ್ಷನ್ಸ್ ನಿರ್ಮಾಣದ ʻಕ್ಯಾಡ್ಬರಿಸ್ʼ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದೆ. ಈಗ ಆ ಮೂವಿಯ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಈ ವರ್ಷದ ಕೊನೆಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಈ ಚಿತ್ರದ ನನ್ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಹಾಗೂ ನಮ್ಮ ಚಿತ್ರತಂಡದ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ. ಈ ಚಿತ್ರವು ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಅದ್ವಿತಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇನ್ನು ಹಲವಾರು ದೊಡ್ಡ ದೊಡ್ಡ ನಟರು ನಟಿಸುತ್ತಿದ್ದಾರೆ. ಅವರೆಲ್ಲರ ಜತೆ ನಟಿಸಿದ್ದು ನನಗೆ ಸಂತಸ ತಂದಿದೆ. ಈ ಚಿತ್ರವನ್ನು ರಮೇಶ್ ಯಾದವ್‌ ಅವರು ನಿರ್ದೇಶನ ಮಾಡುತ್ತಿದ್ದು ಡಾ: ಶಿವರಾಜ್ ಜಾಣಗೆರೆರವರು ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಮತ್ತು ಸಾಹಿತ್ಯ, ಬರೆದು ಸಂಗೀತ ಸಂಯೋಜನೆ, ಮಾಡಿದ್ದಾರೆ. ಈ ಚಿತ್ರಕ್ಕೆ ಶರತ್ ಕುಮಾರ್ ಅವರ ಛಾಯಾಗ್ರಹಣವಿದ್ದು ಸಿನಿಮಾ ತುಂಬಾ ಸೊಗಸಾಗಿ ಮೂಡಿಬಂದಿದೆ. ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಈ ಚಿತ್ರದ ನಿರ್ಮಾಪಕರಿಗೂ ನಿರ್ದೇಶಕರಿಗೂ ಹಾಗೂ ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದಗಳು. ಕನ್ನಡ ನಾಡಿನ ಜನರ ಆಶೀರ್ವಾದ ಬಯಸುತ್ತಿರುವ ನಿಮ್ಮ ಪ್ರೀತಿಯ ಸೋನು ಶ್ರೀನಿವಾಸ್ ಗೌಡʼʼಎಂದು ಬರೆದುಕೊಂಡಿದ್ದಾರೆ.

ಇನ್ನು ಆಕಾಶ ನೀಲಿ ಡ್ರೆಸ್ ಧರಿಸಿ ಸೋನು ಪೋಸ್‌ ಕಂಡು ʻಮತ್ಸ್ಯ ಕನ್ಯೆʼ ಎಂದು ಕಮೆಂಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸೋನು ಅವರ ಹೊಸ ಸಿನಿಮಾ ಬಗ್ಗೆ ವಿಶ್‌ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ: Sonu Srinivas Gowda: ಒಳ ಉಡುಪಿನಲ್ಲಿ ರೀಲ್ಸ್‌ ಹಂಚಿಕೊಂಡ ಸೋನು ಗೌಡ, ಕರ್ನಾಟಕದ ‘ಸನ್ನಿ’ ಎಂದ ಜನ

ಹಿಂದೊಮ್ಮೆ ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇಪದೆ ಟ್ರೋಲ್‌ ಆಗಲು ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ.

Exit mobile version