Site icon Vistara News

Sonu Srinivas Gowda: ಒಳ ಉಡುಪಿನಲ್ಲಿ ರೀಲ್ಸ್‌ ಹಂಚಿಕೊಂಡ ಸೋನು ಗೌಡ, ಕರ್ನಾಟಕದ ‘ಸನ್ನಿ’ ಎಂದ ಜನ

Sonu Srinivas Gowda

ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (sonu srinivas gowda) ತಮ್ಮ ಫೋಟೊ, ರೀಲ್ಸ್‌,ವಿಡಿಯೊ ಮೂಲಕ ಟ್ರೋಲ್‌ಗೆ (Sonu Gowda) ಗುರಿಯಾಗುತ್ತಲೇ ಇರುತ್ತಾರೆ. ಹಿಂದೊಮ್ಮೆ ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಇದಕ್ಕೆಲ್ಲ ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ.  ಅಲ್ಲಿನ ಬೀಚ್‌ನಲ್ಲಿ ಬಿಂದಾಸ್‌ ಆಗಿ ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದಾರೆ. ಒಳ ಉಡುಪು ತೊಟ್ಟು, ಹಾಟ್‌ ಆಗಿ ಪೋಸ್ ನೀಡಿದ್ದಾರೆ.

ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವಿಡಿಯೊ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೊದಲ್ಲಿ ಸೂಚಿಸಿದ್ದರು. ಜತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೊ ಮೂಲಕ ತಿಳಿಸಿದ್ದರು. ಆ ವಿಡಿಯೊ ಕೂಡ ವೈರಲ್ ಆಗಿತ್ತು. ಇದೀಗ ಸೋನು ಒಳ ಉಡುಪು ತೋರಿಸಿ ಫೋಟೊಗೆ ಪೋಸ್‌ ನೀಡಿದ್ದಾರೆ.

ಇದನ್ನೂ ಓದಿ: Sonu Gowda: ನನ್ನ ಮನೆಯವರಿಗೆ ನೋವು ಕೊಡಬೇಡಿ ಅಂತಾ ಗಳಗಳನೇ ಅತ್ತ ಸೋನು!

ವೈನ್ ಗ್ಲಾಸ್ ಹಿಡಿದು ಈ ಹಿಂದೆ ಪೋಸ್ ಕೊಟ್ಟಿದ್ದರು. ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೊಗಾಗಿ ಕಾಯುತ್ತಿರುತ್ತಾರೆ. ಈ ಹಿಂದೆ ಇವರ ಕೆಲ ಖಾಸಗಿ ಫೋಟೊ- ವಿಡಿಯೋಗಳುವೈರಲ್‌ ಆಗಿತ್ತು. ಮಾಲ್ಡೀವ್ಸ್‌ ಫೋಟೊಗೆ ನೆಟ್ಟಿಗರು ʻʻಕರ್ನಾಟಕದ ಸನ್ನಿ ಲಿಯೋನ್ʼʼಎಂದು ಕಮೆಂಟ್‌ ಮಾಡಿದ್ದಾರೆ.

ಟ್ರೋಲ್‌ಗೆ ಬೆಸತ್ತು ಗಳಗಳನೇ ಅತ್ತಿದ್ದ ಸೋನು!

ʻʻಸೋಷಿಯಲ್ ಮೀಡಿಯಾದಿಂದ ನನಗೆ ತುಂಬ ನೆಗೆಟಿವ್ ಕಮೆಂಟ್​ಗಳು ಬರುತ್ತಿದೆ. ನನ್ನ ಹಳೆಯ ವಿಡಿಯೊ ನೋಡಿ ಬ್ಯಾಡ್ ಕಮೆಂಟ್ ಮಾಡುತ್ತೀರಿ. ತೀರ ಕೆಟ್ಟ ಕಮೆಂಟ್ ಯಾಕೆ ಬರುತ್ತಿವೆ? ನಾನು ಅಂತಹ ತಪ್ಪು ಏನು ಮಾಡಿದ್ದೆ? ನನಗೆ ಅರ್ಥವಾಗುತ್ತಿಲ್ಲ. ಮನಸಿಗೆ ತುಂಬಾ ನೋವಾಗಿದೆ. ನಾನೆಷ್ಟು ಸ್ಟ್ರಾಂಗ್ ಇದ್ದೇನೆ. ಅಷ್ಟೇ ಎಮೋಷನಲ್ ಕೂಡಾ ಹೌದು. ಹೀಗೆ ವಿಡಿಯೊ ಮಾಡಬೇಕೆನಿಸಿದ್ದು ಏಕೆ ಅಂದರೆ ಒಂದು ವಾರದ ಹಿಂದೆ ನಮ್ಮಮ್ಮ ಒಂದು ಮೊಬೈಲ್ ನೋಡುತ್ತಿದ್ದರು. ಸೋಫಾ ಮೇಲೆ ಕುಳಿತು ಮೊಬೈಲ್ ನೋಡುತ್ತ ಇದ್ದರು. ಯೂಟ್ಯೂಬ್ ನೋಡುತ್ತ ಅವರಿಗೆ ಒಂದು ಟ್ರೋಲ್ ವಿಡಿಯೊ ಸಿಕ್ಕಿತು. ಕೆಟ್ಟದಾಗಿ ಟ್ರೊಲ್ ಮಾಡಿದ ವಿಡಿಯೊ ನೋಡಿದ ಅಮ್ಮ ಸೌಂಡ್ ಕಮ್ಮಿ ಕೊಟ್ಟು ನೋಡುತ್ತಿದ್ದರು. ಅವರ ಕಣ್ಣಲ್ಲಿ ನೀರು ಬಂತುʼʼಎಂದು ಸೋನು ಗಳಗಳನೇ ಅತ್ತು ಹೇಳಿಕೊಂಡಿದ್ದರು.

Exit mobile version