Site icon Vistara News

Sonu Srinivas Gowda: ಬಿಕಿನಿ ವಿಡಿಯೊ ಹಂಚಿಕೊಂಡು ಫ್ಯಾನ್ಸ್‌ ಜತೆ ಗುಡ್‌ ನ್ಯೂಸ್‌ ಕೊಟ್ಟ ಸೋನು ಗೌಡ!

Sonu Srinivas Gowda Red Bikini

ಬೆಂಗಳೂರು: ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (sonu srinivas gowda) ತಮ್ಮ ಫೋಟೊ, ರೀಲ್ಸ್‌,ವಿಡಿಯೊ ಮೂಲಕ ಟ್ರೋಲ್‌ಗೆ (Sonu Gowda) ಗುರಿಯಾಗುತ್ತಲೇ ಇರುತ್ತಾರೆ. ಸದ್ಯ  ಮಾಲ್ಡೀವ್ಸ್‌ ಪ್ರವಾಸದಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಹಸಿಬಿಸಿ ಫೋಟೊಗಳನ್ನು ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಇದೀಗ ಸೋನು ಗೌಡ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ (10 ಲಕ್ಷ) ಫಾಲೋವರ್ಸ್ ಆಗಿದ್ದಾರೆ. ಈ ಖುಷಿಯಲ್ಲಿ ಸೋನು ಬಿಕಿನಿ ವಿಡಿಯೊ ಹಂಚಿಕೊಂಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಫಾಲೋವರ್ಸ್‌ ಸಿಕ್ಕಿದ್ದಾರೆ. ʻʻಈ ವಿಡಿಯೊ ಒಂದು ಮಿಲಿಯನ್ ಫಾಲೋವರ್ಸ್​’ ಸಿಕ್ಕಿದ್ದಕ್ಕೆ ಎಂದು ಸೋನು ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಅನೇಕರು ಈ ವಿಡಿಯೊಗೆ ʻʻಸೋನು ಲಿಯೋನ್ʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನೆಗೆಟಿವ್‌ ಕಮೆಂಟ್‌ ಮಾಡಿದ್ದಾರೆ.

ಹಿಂದೊಮ್ಮೆ ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇಪದೆ ಟ್ರೋಲ್‌ ಆಗಲು ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಅಲ್ಲಿನ ಬೀಚ್‌ನಲ್ಲಿ ಬಿಂದಾಸ್‌ ಆಗಿ ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದಾರೆ. ಒಳ ಉಡುಪು ತೊಟ್ಟು, ಹಾಟ್‌ ಆಗಿ ಪೋಸ್ ನೀಡಿದ್ದ ಬೆನ್ನಲ್ಲೇ ಇದೀಗ ಬಿಕಿನಿ ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Sonu Srinivas Gowda: ಒಳ ಉಡುಪಿನಲ್ಲಿ ರೀಲ್ಸ್‌ ಹಂಚಿಕೊಂಡ ಸೋನು ಗೌಡ, ಕರ್ನಾಟಕದ ‘ಸನ್ನಿ’ ಎಂದ ಜನ

ಸೋನು ಗೌಡ ವಿಡಿಯೊ

ವೈನ್ ಗ್ಲಾಸ್ ಹಿಡಿದು ಈ ಹಿಂದೆ ಪೋಸ್ ಕೊಟ್ಟಿದ್ದರು. ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೊಗಾಗಿ ಕಾಯುತ್ತಿರುತ್ತಾರೆ. ಈ ಹಿಂದೆ ಇವರ ಕೆಲ ಖಾಸಗಿ ಫೋಟೊ- ವಿಡಿಯೋಗಳು ವೈರಲ್‌ ಆಗಿದ್ದವು.

Exit mobile version