Site icon Vistara News

Sonu Srinivas Gowda: ಸಿಕ್ಕಾಪಟ್ಟೆ ಸೊಳ್ಳೆ ಕಾಟ ಇತ್ತು ಎಂದು ಜೈಲಿನ ಅನುಭವ ಹಂಚಿಕೊಂಡ ಸೋನು ಗೌಡ!

Sonu Srinivas Gowda shares Jail Experience

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಬಂಧನವಾಗಿದ್ದ ʻಬಿಗ್‌ಬಾಸ್‌ ಒಟಿಟಿ ಸೀಸನ್‌-1ʼರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) 11 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಇದಾದ ಮೇಲೆ ಅವರ ಫ್ಯಾನ್ಸ್‌ ಸೋನು ಗೌಡ (Sonu Gowda in Jail experience) ತುಂಬ ಸೈಲೈಂಟ್‌ ಆಗಿ ಬಿಟ್ಟಿದ್ದಾರೆ ಎಂದು ನಟಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲು ಶುರು ಮಾಡಿದರು. ಇದೀಗ ಸೋನು ಮತ್ತೆ ದರ್ಶನ ಕೊಟ್ಟಿದ್ದಾರೆ. ಜೈಲಿನಲ್ಲಿ ಏನಾಯಿತು? ಜೈಲಿನ ಅನುಭವ ಹೇಗಿತ್ತು ಎನ್ನುವುದನ್ನು ಯುಟ್ಯೂಬ್‌ ಮೂಲಕ ವಿವರಿಸಿದ್ದಾರೆ.

ಸೋನು ಗೌಡ ಜೈಲಿನ ಅನುಭವ ಹಂಚಿಕೊಂಡು ʻʻಆರಂಭದಲ್ಲಿ ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದರು. ಬಳಿಕ ನನ್ನನ್ನು ಜೈಲಿಗೆ ಹಾಕಿದರು. ಜೈಲಿಗೆ ಹೋಗಿದ ಕೂಡಲೇ ಬಹಳ ಕೆಟ್ಟ ಅನುಭವ ಆಯ್ತು. ನಾಲ್ಕು ಗೋಡೆ ಮಧ್ಯೆ ಇದ್ದೆ. ಅಲ್ಲಿರುವ ಜನಗಳು, ಅದೆಲ್ಲ ನೋಡಿ ಯಾಕೆ ಬೇಕಿತ್ತು ಎಂದು ಅನ್ನಿಸಿತು. ಬೇರೆ ಎಲ್ಲ ಪಾತಕ ಕೃತ್ಯ ಮಾಡಿದವರ ಜತೆ ನಾನು ಇದ್ದೆ ಎಂದು ಒಂದು ಕ್ಷಣ ಬೇಸರವಾಯ್ತು. ಮೂರು ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. 3-4 ನಿಮಿಷ ಮಾತನಾಡಲು ಮೂರು ದಿನ ಕಾಯಬೇಕು. ಇದರಿಂದ ವ್ಯಕ್ತಿಯ ಬೆಲೆ ಎಷ್ಟು ಎನ್ನುವುದು ಗೊತ್ತಾಯಿತು’ ಎಂದಿದ್ದಾರೆ ಸೋನು ಗೌಡ.

ಇದನ್ನೂ ಓದಿ: Sonu Srinivas Gowda: ಪರಪ್ಪನ ಅಗ್ರಹಾರ ಜೈಲಿನಿಂದ ರೀಲ್ಸ್ ರಾಣಿ ಸೋನು ಗೌಡ ಬಿಡುಗಡೆ

ʻʻಟ್ರೋಲ್‌ ಪೇಜ್‌ಗಳು ನನಗೆ ತುಂಬ ಸಪೋರ್ಟ್‌ ಮಾಡಿದವು. ಇದಾದ ಬಳಿಕ ಹೊರ ಬಂದ ಮೇಲೆ ಫೋನ್‌ ನೋಡಿಲ್ಲ. ನನ್ನದು ಸಣ್ಣ ಸರ್ಕಲ್‌. ನನ್ನ ಅಣ್ಣ ಎಲ್ಲರೂ ನನ್ನ ಜತೆ ನಿಂತರು. ನನ್ನ ಪ್ರಕರಣದ ಬಗ್ಗೆ ಹೆಚ್ಚಿನದ್ದನ್ನು ಹೇಳೋಕೆ ಆಗಲ್ಲ. ಈಗ ನಾನು ಆರಾಮದಾಯಕವಾಗಿ ಹೊರಗಡೆ ಓಡಾಡುತ್ತಿದ್ದೇನೆ. ರೀಲ್ಸ್‌ ಮಾಡುತ್ತೇನೆ. ನಿಮ್ಮ ಸಪೋರ್ಟ್‌ ನನಗೆ ಬೇಕು. ಜೈಲಿನಲ್ಲಿ ತುಂಬ ಸೊಳ್ಳೆ ಇರ್ತಿತ್ತು. ಅದು ಬಹಳ ಕಷ್ಟವಾಗಿತ್ತು. 24 ವಯಸ್ಸಿನಲ್ಲಿ ಇದೆಲ್ಲ ನೋಡಿ ಬಿಟ್ಟೆ ಎನ್ನುವ ಬೇಜಾರು ಅಷ್ಟೇ ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಹಿಂದೊಮ್ಮೆ ಸೋನು ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇ ಪದೇ ಟ್ರೋಲ್‌ ಆಗಲು ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸಕ್ಕೆ ಹೋದರು. ಅಲ್ಲಿನ ಬೀಚ್‌ನಲ್ಲಿ ಬಿಂದಾಸ್‌ ಆಗಿ ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದರು. ಒಳ ಉಡುಪು ತೊಟ್ಟು, ಹಾಟ್‌ ಆಗಿ ಪೋಸ್ ನೀಡಿದ್ದ ಬೆನ್ನಲ್ಲೇ ಇದೀಗ ಬಿಕಿನಿ ವಿಡಿಯೊ ಶೇರ್‌ ಮಾಡಿಕೊಂಡಿದ್ದರು.

Exit mobile version