Site icon Vistara News

Sorry (Karma Returns) | ಸಾರಿ (ಕರ್ಮ ರಿಟರ್ನ್ಸ್‌) ಸಿನಿಮಾ ಮೂಲಕ ಮಿಂಚಲು ರೆಡಿಯಾಗಿರುವ ನಟಿ ರಾಗಿಣಿ

Sorry (Karma Returns)

ಬೆಂಗಳೂರು: ʼಐಪಿಎಸ್‌ ರಾಗಿಣಿʼ ಎಂದೇ ಖ್ಯಾತಿ ಪಡೆದ ರಾಗಿಣಿ ದ್ವಿವೇದಿ ತಮ್ಮ ಹುಟ್ಟುಹಬ್ಬದ ದಿನದಂದು (ಮೇ 26) ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಗಿಣಿ ದ್ವಿವೇದಿ ಪ್ರಸ್ತುತ ʻಸಾರಿ (ಕರ್ಮ ರಿಟರ್ನ್ಸ್‌)ʼ (Sorry (Karma Returns) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಟಿ ರಾಗಿಣಿ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಸಾರಿ ಕರ್ಮ ರಿಟರ್ನ್ಸ್ ಚಿತ್ರದಲ್ಲಿ ಅರ್ಜುನ್ ಶರ್ಮ ನಾಯಕರಾಗಿದ್ದಾರೆ. ಹಾಸ್ಯ, ಮರ್ಡರ್ ಮಿಸ್ಟರಿ, ಪ್ರಣಯ ಮತ್ತು ಭಯಾನಕತೆಗಳ ಸಮ್ಮಿಶ್ರಣವನ್ನು ಹೊಂದಿರುವ ಈ ಚಿತ್ರವು, ವಾಸ್ತವವಾಗಿ ಮುಂದಿನದಕ್ಕೆ ಮುನ್ನುಡಿಯಂತೆ ಇರಲಿದೆ. ಇದು ಅಲೌಕಿಕತೆಯನ್ನು ಬಿಂಬಿಸುವಂತಹ ಕಥಾ ಹಂದರವನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Sorry (Karma Returns): ಬರಲಿದೆ ರಾಗಿಣಿ ದ್ವಿವೇದಿಯ ಹೊಸ ಚಿತ್ರ…ಕರ್ಮ!

ಈ ಚಿತ್ರವನ್ನು ಬ್ರಹ್ಮ ಅವರು ನಿರ್ದೇಶನ ಮಾಡಿದ್ದಾರೆ.ಕೆನಡಾ ನಿವಾಸಿ ನವೀನ್‌ ಕುಮಾರ್‌, ಜೈ ಕೃಪಾನಿ ಮತ್ತು ಜೇನ್‌ ಜಾರ್ಜ್‌ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಬೆಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಮುಂದಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. ರಾಜೀವ್‌ ಗಣೇಶನ್‌ ಛಾಯಾಗ್ರಹಣದ ಹೊಣೆ ನಿರ್ವಹಿಸಿದ್ದಾರೆ. ಚಿತ್ರದ ಲಿರಿಕಲ್ ಸಾಂಗ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಆದಷ್ಟು ಬೇಗ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ | 20 Years Of Devdas | 20 ವರ್ಷ ಪೂರೈಸಿದ ದೇವದಾಸ್‌ ಸಿನಿಮಾ: ಐಶ್‌ ಕಿವೀಲಿ ರಕ್ತ ಬಂದಿತ್ತಂತೆ!

Exit mobile version