Site icon Vistara News

Allu Arjun: ಅಲ್ಲು ಅರ್ಜುನ್ ವಿರುದ್ಧ ಅಜಯ್ ದೇವಗನ್ ಅಸಮಾಧಾನ? ಯಾಕೆ?

Ajay Devgn Allu Arjun

ಬೆಂಗಳೂರು: ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ 2 ಸಿನಿಮಾ 2024ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಪುಷ್ಪ 2 ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಅದೇ ದಿನ ರೋಹಿತ್ ಶೆಟ್ಟಿ ನಿರ್ದೇಶನ, ಅಜಯ್ ದೇವಗನ್ (Ajay Devgn) ನಾಯಕನಾಗಿ ನಟಿಸಿರುವ ʻಸಿಂಗಂ ಅಗೇನ್ʼ ಸಿನಿಮಾ ರಿಲೀಸ್‌ ಆಗಲಿದೆ. ಒಂದೇ ದಿನ ಈ ಬಿಗ್​ ಬಜೆಟ್​ ಸಿನಿಮಾಗಳು ರಿಲೀಸ್​ ಆಗಲಿವೆ. ಅಲ್ಲು ಅರ್ಜುನ್ ಅವರ ನಿರ್ಧಾರದಿಂದ ರೋಹಿತ್ ಮತ್ತು ಅಜಯ್ ಇಬ್ಬರೂ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ ʻಸಿಂಗಂ ಅಗೇನ್ʼ ಬಿಡುಗಡೆ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಬಾಲಿವುಡ್ ಹಂಗಾಮಾದ ವರದಿ ಪ್ರಕಾರ ಕಳೆದೆರಡು ದಿನಗಳಲ್ಲಿ ಮುಂಬೈನ ರೋಹಿತ್ ಶೆಟ್ಟಿ ಅವರ ಕಚೇರಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಪುಷ್ಪ 2 ಹಾಗೂ ಸಿಂಗಂ ಮತ್ತೆ ಕ್ಲ್ಯಾಶ್‌ ಆಗುವ ಕಾರಣಗಳಿಂದ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪುಷ್ಪ ಮತ್ತು ಸಿಂಗಮ್ ಎರಡೂ ಸಿನಿಮಾಗಳು ಹಿಂದಿಯಲ್ಲಿ ಬ್ಲಾಕ್‌ಬಸ್ಟರ್ ಚಲನಚಿತ್ರಗಳಾಗಿವೆ. ಈ ಬಗ್ಗೆ ಅಲ್ಲು ಅರ್ಜುನ್ ಒಮ್ಮೆಯೂ ಸಹ ಚರ್ಚಿಸಲಿಲ್ಲ ಎಂದು ಅಜಯ್ ದೇವಗನ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಪುಷ್ಪ 2 ಚಿತ್ರೀಕರಣವು ಪ್ರಸ್ತುತ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

‘ಸಿಂಗಂ ಅಗೇನ್​’ ಸಿನಿಮಾಗೆ ರೋಹಿತ್​ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಜಯ್​ ದೇವಗನ್​ ಮಾತ್ರವಲ್ಲದೇ ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರೀನಾ ಕಪೂರ್​ ಖಾನ್​, ದೀಪಿಕಾ ಪಡುಕೋಣೆ ಸಹ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದೇ ಚಿತ್ರದಲ್ಲಿ ಟೈಗರ್​ ಶ್ರಾಫ್​ ಮತ್ತು ಅಕ್ಷಯ್​ ಕುಮಾರ್​ ಅವರು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಚಿತ್ರದ ಬಗ್ಗೆ ಹೈಪ್​ ಹೆಚ್ಚುತ್ತಿದೆ.

ಇದನ್ನೂ ಓದಿ: Allu Arjun: ದಿನಚರಿಯನ್ನು ವಿಡಿಯೊ ಮೂಲಕ ಹಂಚಿಕೊಂಡ ಅಲ್ಲು ಅರ್ಜುನ್; ಹೇಗಿದೆ ಪುಷ್ಪ-2 ಸೆಟ್?

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version