ಬೆಂಗಳೂರು: ಅಲ್ಲು ಅರ್ಜುನ್ (Allu Arjun) ಮತ್ತು ಪತ್ನಿ ಸ್ನೇಹಾ ರೆಡ್ಡಿ ಅವರು ರಸ್ತೆ ಬದಿಯ ಡಾಬಾದಲ್ಲಿ ಊಟ ಮಾಡಿರುವ ಫೋಟೊ ಇದೀಗ ವೈರಲ್ ಆಗಿದೆ. ಡಾಬಾದಲ್ಲಿ ಊಟ ಮಾಡುತ್ತಿರುವ ಫೋಟೊ ಕಂಡು ದಂಪತಿಯ ‘ಸರಳತೆ’ಗೆ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ಜೋಡಿ ಯಾವ ಡಾಬಾದಲ್ಲಿ ಊಟ ಮಾಡಿದೆ ಎಂದು ತಿಳಿದು ಬಂದಿಲ್ಲ.
ಅಭಿಮಾನಿಯೊಬ್ಬರು ಕ್ಲಿಕ್ಕಿಸಿದ ಚಿತ್ರದಲ್ಲಿ ಅಲ್ಲು ಅವರು ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು, ಸ್ನೇಹಾ ಊಟ ಮಾಡುತ್ತಿದ್ದಾರೆ. ʻʻರಸ್ತೆ ಬದಿಯ ಡಾಬಾದಲ್ಲಿ ಜೋಡಿ! ಸರಳತೆಯ ಮನುಷ್ಯ.” ಎಂದು ಬರೆದುಕೊಂಡಿದ್ದಾರೆ ಒಬ್ಬ ಅಭಿಮಾನಿ. ಇನ್ನೊಬ್ಬರು ʻʻಪುಷ್ಪ ಅಂತಹ ಸೂಪರ್ ಹಿಟ್ ಸಿನಿಮಾ ಮಾಡಿದ್ದರೂ ಸಿಂಪಲ್ ಆಗಿ ಇದ್ದಾರೆʼʼ ಎಂದು ಕಮೆಂಟ್ ಮಾಡಿದ್ದಾರೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಜೊತೆಗೆ ಫಹಾದ್ ಫಾಸಿಲ್, ಡಾಲಿ ಸೇರಿದಂತೆ ಹಲವರು ನಟಿಸಿದ್ದಾರೆ.
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಪುಷ್ಪ 2 ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದರು. ಟೀಸರ್‌ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿದ್ದಾರೆ. ಅವರು ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿದ್ದರು. ಅವರು ಗೂಂಡಾಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ.
ಪುಷ್ಪಾ 2 ಅನ್ನು ಚಿತ್ರಮಂದಿರಗಳಲ್ಲಿ ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಚಿತ್ರವು ಖಂಡಿತವಾಗಿಯೂ ಬಾಕ್ಸ್ ಆಫೀಸ್ ಆಳುತ್ತಿದೆ. ಪುಷ್ಪಾ 2 ಚಿತ್ರದ ಥಿಯೇಟರ್ ಹಕ್ಕುಗಳನ್ನು ಅನಿಲ್ ತಡಾನಿ 200 ಕೋಟಿ ರೂ.ಗೆ ಮುಂಗಡವಾಗಿ ಖರೀದಿಸಿದ್ದಾರೆ ಎಂದು ಪಿಂಕ್ವಿಲ್ಲಾ ಇತ್ತೀಚೆಗೆ ವರದಿ ಮಾಡಿತ್ತು.
`ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!
ಪುಷ್ಪ 2 ಸಿನಿಮಾ ಕಂಡು ಸಿನಿಪ್ರಿಯರು ಬೆರಗಾಗಿದ್ದಾರೆ. ಟೀಸರ್‌ನಲ್ಲಿ ಹೆಚ್ಚು ಹೈಲೈಟ್ ಆಗಿದ್ದು, ಗಂಗಮ್ಮ ಜಾತ್ರೆ. ಈ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿ ಸಖತ್ ರಗಡ್ ಲುಕ್‌ನಲ್ಲಿ ಕಂಡಿದ್ದರು. ಈ ಸೆಟ್‌ಗೆ ಚಿತ್ರತಂಡ ಖರ್ಚು ಮಾಡಿದ್ದು ಐವತ್ತು ಕೋಟಿ ರೂ. ಎಂದು ವರದಿಯಾಗಿದೆ.
ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಹಾಕಲಾದ ಈ ಸೆಟ್ ನಲ್ಲಿ ಪ್ರತಿ ದಿನ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಕಂಡು ಬರುತ್ತಿದ್ದರು ಎಂದು ವರದಿಯಾಗಿದೆ. ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ಸುಕುಮಾರ್ ತರಿಸಿಕೊಂಡಿದ್ದರು. ಇದೆಲ್ಲದಕ್ಕೂ ಖರ್ಚಾಗಿದ್ದು ಮೂವತ್ತು ಕೋಟಿ ರೂ. ಎನ್ನಲಾಗಿದೆ. ವಿಶೇಷ ಏನೆಂದರೆ, ನಿರ್ದೇಶಕ ಸುಕುಮಾರ್ ಅವರು ಈ ಜಾತ್ರೆಯ ಸನ್ನಿವೇಶವನ್ನು ಸುಮಾರು 30ಕ್ಕೂ ಅಧಿಕ ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಸೆಟ್ ಅಲ್ಲದೇ ಕಲಾವಿದರ ಸಂಭಾವನೆ, ಮೇಕಪ್, ನೂರಾರು ಕಲಾವಿದರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್, ಸೌಂಡ್ ಡಿಸೈನ್ ಹೀಗೆ ಎಲ್ಲವೂ ಸೇರಿ ಬರೋಬ್ಬರಿ 50 ಕೋಟಿ ರೂ. ಖರ್ಚಾಗಿದೆ ಎಂದು ವರದಿಯಾಗಿದೆ.