Site icon Vistara News

Aranmanai 4 Trailer: ʻಅರಣ್ಮನೈ 4’ ಟ್ರೈಲರ್‌ ಔಟ್‌: ಹಾರರ್‌ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ!

Aranmanai 4 Trailer Tamannaah Bhatia

ಬೆಂಗಳೂರು: ತಮನ್ನಾ (Tamannaah Bhatia) ಮತ್ತು ರಾಶಿ ಖನ್ನಾ (, Raashii Khanna) ನಾಯಕಿಯರಾಗಿ ನಟಿಸಿದ ʻಅರಣ್ಮನೈ 4’ ಟ್ರೈಲರ್ ಔಟ್‌ (Aranmanai 4 Trailer) ಆಗಿದೆ. ಸುಂದರ್ ಸಿ ನಿರ್ದೇಶನದ ಈ ಚಿತ್ರ ಹಾರರ್-ಕಾಮಿಡಿ ಸರಣಿಯ ನಾಲ್ಕನೇ ಭಾಗವಾಗಿದೆ. ಚಿತ್ರದಲ್ಲಿ ಯೋಗಿ ಬಾಬು, ವಿಟಿವಿ ಗಣೇಶ್, ದೆಹಲಿ ಗಣೇಶ್, ಮತ್ತು ಕೋವೈ ಸರಳಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡದ ನಟ ಗರುಡ ರಾಮ್‌ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ಈ ಅರಣ್ಮನೈ 4 ಸೀಕ್ವೆಲ್‌ನಲ್ಲಿ ತಮನ್ನಾ ಕೊಲೆಯಾಗಿರುತ್ತಾಲೆ. ಆದರೆ ಅವಳ ಸಾವು ಸಹಜ ಅಲ್ಲ ಎಂಬುದು ಟ್ರೈಲರ್‌ನಲ್ಲಿ ಇದೆ. ತಂಗಿಯ ಸಾವಿನ ಬಗ್ಗೆ ಕಾರಣ ಹುಡುಕುವ ಲಾಯರ್‌ ಪಾತ್ರ ಸುಂದರ್‌ ಸಿ. ನಟಿಸಿದ್ದಾರೆ. ಖುಷ್ಬೂ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಕೃಷ್ಣಮೂರ್ತಿ ಅವರ ಛಾಯಾಗ್ರಹಣವನ್ನು ನಿರ್ವಹಿಸಿದರೆ, ಫೆನ್ನಿ ಆಲಿವರ್ ಸಂಕಲನವಿದೆ. ಗುರುರಾಜ್ ಕಲಾ ನಿರ್ದೇಶನವನ್ನು ನಿರ್ವಹಿಸಿದ್ದು, ಬೃಂದಾ ಮಾಸ್ಟರ್ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ‘ಅರಣ್ಮನೈ 4’ ಏಪ್ರಿಲ್ 11 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: Tamanna Bhatia: ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ತಮನ್ನಾ ಭಾಟಿಯಾ

ಈ ವರ್ಷ ಹಸೆಮಣೆ ಏರಲಿದ್ದಾರೆ ತಮನ್ನಾ

ಇತ್ತೀಚಿನ ವರದಿಗಳ ಪ್ರಕಾರ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಈ ವರ್ಷ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗುತ್ತಿದೆ. ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma ) ಜೋಡಿ 2023ರ ಆರಂಭದಲ್ಲಿ ತಮ್ಮ ರಿಲೇಶನ್‌ಶಿಪ್‌ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿತ್ತು. ಇದಾದ ಬಳಿಕ ಜೋಡಿಗೆ ಫ್ಯಾನ್ಸ್‌ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಕೇಳುತ್ತಲೇ ಇದ್ದರು. ಇತ್ತೀಚಿನ ವರದಿಗಳ ಪ್ರಕಾರ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ ಎನ್ನಲಾಗಿದೆ. ಈಗಾಗಲೇ ಮದುವೆ ಬಗ್ಗೆ ಪೋಷಕರು ತಮನ್ನಾಗೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ‘ಲಸ್ಟ್ ಸ್ಟೋರೀಸ್ 2’ ಬಿಡುಗಡೆಯ ಸಮಯದಲ್ಲಿ ಸಾರ್ವಜನಿಕವಾಗಿ ರಿಲೇಶನ್‌ಶಿಪ್‌ ಬಗ್ಗೆ ಅಧಿಕೃತಗೊಳಿಸಿದ್ದರು. ತಮನ್ನಾ ಮದುವೆಯಾಗುವಂತೆ ಪೋಷಕರಿಂದ ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ‘ಭೋಲಾ ಶಂಕರ್’ ಮತ್ತು ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ‘ಕಾವಲಾ’ ಹಾಡಿನ ನಂತರ ನಟಿ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿಲ್ಲ.

ಸ್ತ್ರೀ-2 ಸಿನಿಮಾದಲ್ಲಿ ತಮನ್ನಾ ?

ಸ್ತ್ರೀ-2 ಸಿನಿಮಾದಲ್ಲಿ ತಮನ್ನಾ ವಿಶೇಷ ಪಾತ್ರದೊಂದಿಗೆ ಕಮ್‌ ಬ್ಯಾಕ್‌ ಆಗಲಿದ್ದಾರೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಚಂದೇರಿಯಲ್ಲಿ ಸ್ತ್ರೀ 2 ಸಿನಿಮಾ ಶೂಟಿಂಗ್‌ ನಡೆದಿತ್ತು. ಇದೀಗ ತಮನ್ನಾ ಅವರ ಹಾಡಿನ ಚಿತ್ರೀಕರಣ ಚಿತ್ರತಂಡ ಮುಗಿಸಿದೆ ಎಂದು ವರದಿಯಾಗಿದೆ. ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಪರಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ. ಸ್ತ್ರೀ 1 ಸಿನಿಮಾ 2018ರಲ್ಲಿ ಬಿಡುಗಡೆಯಾಯಿತು. ಸ್ತ್ರೀ 1ಚಿತ್ರ ಬಿಡುಗಡೆಯಾದ ಹೊಸ್ತಿಲಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದು, ಭಾರಿ ಕಲೆಕ್ಷನ್‌ ಮಾಡಿತ್ತು. ಅದೇ ರೀತಿ ಈಗ ಸ್ತ್ರೀ 2 ಸಿನಿಮಾ ಪಾತ್ರವರ್ಗ ಬಹಳ ಆಸಕ್ತಿದಾಯಕವಾಗಿವೆ ಎಂದು ವರದಿಯಾಗಿದೆ. ತಮನ್ನಾ ಭಾಟಿಯಾ ಅವರು ಸ್ತ್ರೀ 2ರಲ್ಲಿಯ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ತಮನ್ನಾ ಭಾಟಿಯಾ ಅವರ ಈ ಹಾಡಿನ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂದು ಮೂಲ ತಿಳಿಸಿದೆ.

Exit mobile version