ಬೆಂಗಳೂರು: ಸಂಕ್ರಾಂತಿ ಪ್ರಯುಕ್ತ ದಕ್ಷಿಣ ಭಾರತದ ಪ್ರಮುಖ ಚಿತ್ರಗಳು ತೆರೆ ಕಂಡಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection)ವಿಚಾರದಲ್ಲಿ ಭಾರೀ ಪೈಪೋಟಿ ನಡೆದಿದೆ. ಜನವರಿ 12ರಂದು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ʼಗುಂಟೂರು ಖಾರಂʼ (Guntur Kaaram) ತೆಲುಗು ಚಿತ್ರದ ಜತೆಗೆ ಧನುಷ್ ನಟನೆಯ ತಮಿಳು ಸಿನಿಮಾ ʼಕ್ಯಾಪ್ಟ್‌ನ್ ಮಿಲ್ಲರ್ʼ (Captain Miller) ಬಿಡುಗಡೆಯಾಗಿದೆ. ಈ ಸ್ಟಾರ್‌ಗಳ ಬಹು ನಿರೀಕ್ಷಿತ ಚಿತ್ರಗಳಿಗೆ ಇದೀಗ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಹನುಮಾನ್’ (HanuMan) ಸೆಡ್ಡು ಹೊಡೆಯುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಪ್ರಶಾಂತ್ ವರ್ಮ ನಿರ್ದೇಶನದಲ್ಲಿ ತೇಜ ಸಜ್ಜಾ ಹಾಗೂ ಅಮೃತಾ ಅಯ್ಯರ್ ನಟನೆಯ ‘ಹನುಮಾನ್’ ಸಿನಿಮಾ ಬಗ್ಗೆಯೇ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದರ ಮುಂದೆ ‘ಗುಂಟೂರು ಖಾರಂ’ ಮತ್ತು ʼಕ್ಯಾಪ್ಟನ್ ಮಿಲ್ಲರ್ʼ ಮ್ಯಾಜಿಕ್ ನಡೆಯುತ್ತಿಲ್ಲ. ಉತ್ತರ ಭಾರತ ಹಾಗೂ ವಿದೇಶಗಳಲ್ಲಿಯೂ ಈ ಫ್ಯಾಂಟಸಿ ಸೂಪರ್ ಹೀರೋ ಸಿನಿಮಾ ಸದ್ದು ಮಾಡುತ್ತಿದೆ. ಕಡಿಮೆ ಬಜೆಟ್‌ನ ಈ ಸಿನಿಮಾದ ಹವಾ ನೋಡಿ ಟಾಲಿವುಡ್ ಮಂದಿ ಕೂಡ ಅಚ್ಚರಿಗೊಳಗಾಗಿದ್ದಾರೆ.
Here’s the BIGGG SURPRISE… #HanuMan first *3-day* [opening weekend] total is HIGHER than #KGF [first part] and #Kantara, at par with #Pushpa [note: all #Hindi dubbed versions]… Yes, you read it right!#HanuMan emerges FIRST HIT OF 2024… Packs an impressive total in its… pic.twitter.com/OkzYxnmkmc
— taran adarsh (@taran_adarsh) January 15, 2024
ಕಲೆಕ್ಷನ್ ವಿವರ
ʼಹನುಮಾನ್ʼ ಮೊದಲ ವಾರಾಂತ್ಯದಲ್ಲಿ 40.65 ಕೋಟಿ ರೂ. ಗಳಿಸುವ ಮೂಲಕ 2024ರ ಭಾರತದ ಮೊದಲ ಬ್ಲಾಕ್ ಬ್ಲಸ್ಟರ್ ಸಿನಿಮಾ ಎನಿಸಿಕೊಂಡಿದೆ. ಇದು ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 1’ ಮತ್ತು ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರಗಳ ಹಿಂದಿ ಅವತರಣಿಕೆಗಳಿಗಿಂತ ಹೆಚ್ಚು ಎಂದು ವರದಿಗಳು ತಿಳಿಸಿವೆ. ಅಲ್ಲದೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೈಸ್ʼ ಚಿತ್ರದ ಗಳಿಕೆಯ ಸಮೀಪಕ್ಕೆ ಬಂದು ನಿಂತಿದೆ. ಸುಮಾರು 20 ಕೋಟಿ ರೂ. ಬಜೆಟ್‌ನ ʼಹನುಮಾನ್ʼ ಮೊದಲ ದಿನ 8 ಕೋಟಿ ರೂ. ಬಾಚಿಕೊಂಡಿತ್ತು. ಚಿತ್ರಕ್ಕೆ ಲಭಿಸಿದ ಪಾಸಿಟಿವ್ ಪ್ರತಿಕ್ರಿಯೆಯಿಂದಾಗಿ ಮುಂದಿನ ದಿನಗಳಲ್ಲಿ ಗಳಿಕೆ ಹೆಚ್ಚಾಗಿದೆ. ಶನಿವಾರ 12.45 ಕೋಟಿ ರೂ. ಮತ್ತು ಭಾನುವಾರ 15.50 ಕೋಟಿ ರೂ. ತನ್ನದಾಗಿಸಿಕೊಂಡಿದೆ.
ʼಗುಂಟೂರು ಖಾರಂʼ ಕಲೆಕ್ಷನ್ ಹೇಗಿದೆ?
ಮಹೇಶ್ ಬಾಬು ಮತ್ತು ಕನ್ನಡತಿ ಶ್ರೀಲೀಲಾ ಮೊದಲ ಬಾರಿಗೆ ತೆರೆ ಮೇಲೆ ಒಂದಾದ ಚಿತ್ರ ʼಗುಂಟೂರು ಖಾರಂʼ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಿತ್ತು. ಆದರೆ ತ್ರಿವಿಕ್ರಮ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಮೊದಲ ದಿನ ಭಾರತದಲ್ಲಿ ಸುಮಾರು 50 ಕೋಟಿ ರೂ. ಕಲೆಕ್ಷನ್ ಮಾಡಿದ ʼಗುಂಟೂರು ಖಾರಂʼನ ಎರಡು ಮತ್ತು ಮೂರನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಶನಿವಾರ ಚಿತ್ರ ಕಲೆಕ್ಟ್ ಮಾಡಿದ್ದ ಕೇವಲ 13.55 ಕೋಟಿ ರೂ. ಇನ್ನು ಭಾನುವಾರ 14.25 ಕೋಟಿ ರೂ. ಗಳಿಸಿ ನಿರೀಕ್ಷೆಯನ್ನು ತಲುಪಲು ವಿಫಲವಾಗಿದೆ.
ಇದನ್ನೂ ಓದಿ: Box Office War: ಬಾಕ್ಸ್ ಆಫೀಸ್‌ನಲ್ಲಿ ಸ್ಟಾರ್ ವಾರ್; ಮಹೇಶ್ ಬಾಬು, ಧನುಷ್ ಚಿತ್ರಗಳು ಗಳಿಸಿದ್ದೆಷ್ಟು?
ʼಕ್ಯಾಪ್ಟನ್ ಮಿಲ್ಲರ್ʼ ಕಲೆಕ್ಟ್ ಮಾಡಿದ್ದೆಷ್ಟು?
ಇನ್ನು ತಮಿಳಿನ ʼಕ್ಯಾಪ್ಟ್‌ನ್ ಮಿಲ್ಲರ್ʼ ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಮ್ಯಾಜಿಕ್ ಮಾಡುತ್ತಿಲ್ಲ. ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ ಈ ಸಿನಿಮಾ ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿತ್ತು. ಆದರೆ ಇದೀಗ ಈ ಚಿತ್ರದ ಕಲೆಕ್ಷನ್ ಕೂಡ ಇಳಿಮುಖವಾಗಿದೆ. ತೆರೆಕಂಡ ಮೊದಲ ದಿನ ಅಂದರೆ ಜನವರಿ 12ರಂದು ಸುಮಾರು 8.65 ಕೋಟಿ ರೂ. ಗಳಿಸಿದ್ದ ʼಕ್ಯಾಪ್ಟನ್ ಮಿಲ್ಲರ್ʼ ಎರಡನೇ ದಿನ ಕಲೆಕ್ಟ್ ಮಾಡಿದ್ದು 6.75 ಕೋಟಿ ರೂ. ಭಾನುವಾರ 7.25 ಕೋಟಿ ರೂ. ಗಳಿಸಲಷ್ಟೆ ಯಶಸ್ವಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ