ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್ (ಪರಮೇಶ್ವರ್ ಗುಂಡ್ಕಲ್) (parameshwar gundkal) ನಿರ್ದೇಶನದ ʻಕೋಟಿʼ ಸಿನಿಮಾ ಟೀಸರ್ (Kotee teaser) ಇಂದು ಏ.13ರಂದು ಬಿಡುಗಡೆಯಾಗಿದೆ. ʻಒಂದರ ಮುಂದೆ ಇರುವ ಸೊನ್ನೆ ಕೋಟಿ ಅಲ್ಲ…ಸೊನ್ನೆಗಳ ಮೊದಲು ಬರೋ ʻ1ʼ ಅದು ಕೋಟಿʼ ಎನ್ನುವ ಡೈಲಾಗ್, ಟೀಸರ್‌ನಲ್ಲಿ ಪ್ರಮುಖ ಹೈಲೈಟ್. ಡಾಲಿ ಧನಂಜಯ್ ವಿಭಿನ್ನ (Dolly Dhananjay) ಪಾತ್ರದಲ್ಲಿ ಕಂಡರೆ, ನಟ ರಮೇಶ್ ಇಂದಿರಾ ಖಡಕ್ ಅವತಾರ ತಾಳಿದ್ದಾರೆ. ಟೀಸರ್ ಶುರುವಾಗಿನಿಂದ ಅಂತ್ಯದವರೆಗೂ ಹಣದ ಮೌಲ್ಯದ ಬಗ್ಗೆಯೇ ಸಾರುವಂತಿದೆ. ಸಿನಿಮಾ 2024ರ ಜೂನ್ 14ರಂದು ಬಿಡುಗಡೆಯಾಗಲಿದೆ.
ಟೀಸರ್‌ನಲ್ಲಿ ದೃಶ್ಯಕ್ಕೆ ತಕ್ಕಂತೆ ಡೈಲಾಗ್, ಹಿನ್ನೆಲೆ ಧ್ವನಿ (Dolly Dhananjay) ಸಖತ್ ಆಗಿ ಮೂಡಿ ಬಂದಿದೆ. ಪ್ರತಿ ಶಾಟ್‌ನಲ್ಲಿಯೂ ಕುತೂಹಲ ಮೂಡಿಸುವಂತಿದೆ. ಟೀಸರ್ ಕಂಡು ಪ್ರೇಕ್ಷಕರು ಕೂಡ ʻಕೋಟಿʼ ಮನಸ್ಸು ಗೆಲ್ಲಲಿ ಸಿನಿಮಾ ಎಂದು ಹಾರೈಸುತ್ತಿದ್ದಾರೆ. ಕೊಡಗಿನ ಕನ್ನಡತಿ ಮೋಕ್ಷಾ ಕುಶಾಲ್ (Moksha Kushal) ʻಕೋಟಿʼ ( Kotee Movie Kannada) ಸಿನಿಮಾದಲ್ಲಿ ಡಾಲಿ ಧನಂಜಯ್ (Dolly Dhananjay) ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್. ಕಲರ್ಸ್ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ʻಕೋಟಿʼ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮೋಕ್ಷಾ ಕುಶಾಲ್ ಅವರು ನವಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಯುಗಾದಿ ಹಬ್ಬದ ದಿನ ‘ಕೋಟಿ’ ಚಿತ್ರದ ಟೈಟಲ್ ಬಿಡುಗಡೆಯಾಗಿತ್ತು. 500 ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷವಾಗಿತ್ತು. ʻಕೋಟಿʼ ಕನಸು ಕಾಣುವ ಒಬ್ಬ ಕಾಮನ್ ಮ್ಯಾನ್ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿತ್ತು.
ಇದನ್ನೂ ಓದಿ: Dolly Dhananjay: ಡಾಲಿ ಧನಂಜಯ್ ಜತೆ ಕೊಡಗಿನ ಕನ್ನಡತಿ ರೊಮ್ಯಾನ್ಸ್!
ʻಹೊಯ್ಸಳʼ ನಂತರ ಬರುತ್ತಿರುವ ಧನಂಜಯ್ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.
ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟೆಲಿವಿಷನ್ ಚಾನೆಲ್‌ನಿಂದ ಹೊರಗೆ ಬಂದಾಗ, ಹಿರಿತೆರೆಯಲ್ಲಿ ಕತೆಗಳನ್ನು ಹೇಳಬೇಕು ಎಂದು ತಾವು ಆಸೆ ಪಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ. ಈ ವರ್ಷ ಒಂದಾದ ಮೇಲೆ ಒಂದು ಹಿಟ್ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ, ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.