ಬೆಂಗಳೂರು: ವಿಜಯ್ ದೇವರಕೊಂಡ (Vijay Devarakonda) ಮತ್ತು ಮೃಣಾಲ್ ಠಾಕೂರ್ (Mrinal Thakur) ಅಭಿನಯದ ಬಹುನಿರೀಕ್ಷಿತ ಫ್ಯಾಮಿಲಿ ಎಂಟರ್‌ಟೈನರ್ ʻಫ್ಯಾಮಿಲಿ ಸ್ಟಾರ್ʼ ಸಿನಿಮಾ(Family Star) ಇಂದು (ಏಪ್ರಿಲ್ 5) ಬಿಡುಗಡೆಯಾಗಿದೆ. ಏಪ್ರಿಲ್ 4 ರಂದು ಅಮೆರಿಕದಲ್ಲಿ ಮೊದಲ ಪ್ರದರ್ಶನ ಕಡಿತ್ತು. ಇದೀಗ ಭಾರತದಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಆರಂಭಿಕ (Family Star Twitter Review) ಪ್ರತಿಕ್ರಿಯೆ ಪಾಸಿಟಿವ್ ಆಗಿದೆ. ಕೌಟುಂಬಿಕ ಮನರಂಜನೆ ನೀಡುವ ಸಿನಿಮಾ ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಬ್ಬರು ʻʻಸಿನಿಮಾ ಫಸ್ಟ್ ಹಾಪ್ ಹಾಗೂ ಕಾಮಿಡಿ ಚೆನ್ನಾಗಿದೆʼʼಎಂದು ಬರೆದುಕೊಂಡಿದ್ದಾರೆ. ʻವಿಜಯ್ ಮತ್ತು ಮೃಣಾಲ್ ಅಭಿನಯ ಸೂಪರ್ʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ʻʻನನ್ನ ರೇಟಿಂಗ್ – 3.5/5. ಕೌಟುಂಬಿಕ ಮನರಂಜನೆ ಸಿನಿಮಾ ಇದುʼʼಮತ್ತೊಬ್ಬರು ಬರೆದುಕೊಂಡಿದ್ದಾರೆ.
ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: Vijay Devarakonda: ರಶ್ಮಿಕಾ ಮಂದಣ್ಣ ಬರ್ತ್ಡೇ ದಿನವೇ ವಿಜಯ್ ದೇವರಕೊಂಡ ಸಿನಿಮಾ ರಿಲೀಸ್!
Completed My Show #Familystar 🎥
— Leo Dass (@LeoDasVj) April 4, 2024
Decent first half and Comedy worked well . VD Mrunal at her best ❤️A Good family track Movie, the Interval banger is Really ufff💣🔥🔥
Emotion works beautifully in the 2nd half that saves the movie !
My Rating – 3.5/5 #FamilyStarReview pic.twitter.com/9c06vuRnh6
Perfect Family Entertainer !! Congrats @sarigamacinemas for delivering another blockbuster #FamilyStar #VijayDevarakonda
— rkvvrkvarma (@rkvvrkvarma) April 5, 2024
Good first half… Good set-up for the second half.. #VijayDeverakonda and #MrunalThakur combo working well 👍👍#FamilyStar https://t.co/OBsRMThrYJ
— N@|○ N£nu (@Karthiksharma__) April 4, 2024
#FamilyStar Review : The first part of the film is enjoyable and has a strong commercial vibe. The second half picks up more of a playful tone . Emotion connects well with the audience
— Let's X OTT GLOBAL (@LetsXOtt) April 4, 2024
Second Half > First Half
Impressive performance by Rowdy @TheDeverakonda & @mrunal0801… pic.twitter.com/OM4PmclYHa
ರಶ್ಮಿಕಾ ಮಂದಣ್ಣ (Rashmika Mandanna’s birthday) ಇಂದು (ಏಪ್ರಿಲ್ 5ರಂದು) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಇಂದೇ ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಕೂಡ ರಿಲೀಸ್ ಆಗಿದೆ.
ಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು. ಸಂದೀಪ್ ರೆಡ್ಡಿ ವಂಗಾ ಅವರ ರಣಬೀರ್ ಕಪೂರ್ ಅಭಿನಯದ ʻಅನಿಮಲ್ʼ (2023) ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ರಶ್ಮಿಕಾ ʻಫ್ಯಾಮಿಲಿ ಸ್ಟಾರ್ʼನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ, ಬಹುಶಃ ಮದುವೆಯ ಹಾಡು ʻಕಲ್ಯಾಣಿ ವಲ್ಲಾʼದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಗುಸುಗುಸು ಇದೆ. ಆದರೆ, ಇದುವರೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Vijay Devarakonda: ವಿದ್ಯಾರ್ಥಿನಿಯರಿಂದ ವಿಚಿತ್ರ ಬೇಡಿಕೆ; ಪ್ರತಿಕ್ರಿಯೆ ಕೊಟ್ಟೇ ಬಿಟ್ಟ ವಿಜಯ್ ದೇವರಕೊಂಡ!
ಫ್ಯಾಮಿಲಿ ಸ್ಟಾರ್ʼ ಚಿತ್ರಕ್ಕೆ ಗೋಪಿಸುಂದರ್ ಸಂಗೀತ ನೀಡಿದ್ದು, ಇದುವರೆಗೆ ಬಿಡುಗಡೆಯಾಗಿರುವ ಮೂರು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಷ್ ನಿರ್ಮಿಸಿರುವ ಈ ಚಿತ್ರ ಬಿಡುಗಡೆ ಆಗಿದೆ.