ಹೈದರಾಬಾದ್: ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ (Guntur Kaaram) ತೆಲುಗು ಚಿತ್ರಕ್ಕೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನೆಗೆಟಿವ್ ಪ್ರತಿಕ್ರಿಯೆಯ ನಡುವೆಯೂ ಚಿತ್ರ ಇದೀಗ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ. ಸದ್ಯ ಇದು ಜಾಗತಿಕವಾಗಿ ಸುಮಾರು 164 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಬ್ಲಾಕ್ ಬ್ಲಸ್ಟರ್ ಎಂದ ಚಿತ್ರತಂಡ
‘ಗುಂಟೂರು ಖಾರಂ’ ಚಿತ್ರವನ್ನು ಸಂಕ್ರಾಂತಿ ಬ್ಲಾಕ್ ಬ್ಲಸ್ಟರ್ ಎಂದು ಸಿನಿಮಾ ತಂಡ ಕರೆದುಕೊಂಡಿದೆ. ಈಗಾಗಲೇ ಬಜೆಟ್ ಪೈಕಿ ಶೇ. 56ರಷ್ಟು ಮರಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ. ತ್ರಿವಿಕ್ರಮ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಮೂಲಕ ಮಹೇಶ್ ಬಾಬು ಮತ್ತು ಕನ್ನಡತಿ ಶ್ರೀಲೀಲಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಮೊದಲ ದಿನ (ಜನವರಿ 12) ಭಾರತದಲ್ಲಿ ಸುಮಾರು 50 ಕೋಟಿ ರೂ. ಕಲೆಕ್ಷನ್ ಮಾಡಿದ ʼಗುಂಟೂರು ಖಾರಂʼನ ಎರಡು ಮತ್ತು ಮೂರನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬಂದಿತ್ತು. ಶನಿವಾರ ಚಿತ್ರ ಕಲೆಕ್ಟ್ ಮಾಡಿದ್ದು ಕೇವಲ 13.55 ಕೋಟಿ ರೂ. ಇನ್ನು ಭಾನುವಾರ 14.25 ಕೋಟಿ ರೂ. ಗಳಿಸಿದರೆ, ಸಂಕ್ರಾಂತಿ ಹಿನ್ನಲೆಯಲ್ಲಿ ಸೋಮವಾರ 14 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಕಥೆಯಲ್ಲಿ ಹೊಸತನವಿಲ್ಲ ಎನ್ನುವುದು ಬಹುತೇಕ ವೀಕ್ಷಕರ ಅಭಿಪ್ರಾಯ. ಅದಾಗ್ಯೂ ಮಹೇಶ್ ಬಾಬು ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದೆ.
ಮ್ಯಾಜಿಕ್ ಸೃಷ್ಟಿಸಿದ ‘ಹನುಮಾನ್’
ಇತ್ತ ಜನವರಿ 12ರಂದೇ ಬಿಡುಗಡೆಯಾದ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಹನುಮಾನ್’ (HanuMan)ಗೆ ಪಾಸಿಟಿವ್ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪ್ರಶಾಂತ್ ವರ್ಮ ನಿರ್ದೇಶನದಲ್ಲಿ ತೇಜ ಸಜ್ಜಾ ಹಾಗೂ ಅಮೃತಾ ಅಯ್ಯರ್ ನಟಿಸಿರುವ ಈ ಕಡಿಮೆ ಬಜೆಟ್‌ನ ಸಿನಿಮಾ ಬಗ್ಗೆಯೇ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೀಗ ಚಿತ್ರದ ಒಟ್ಟು ಕಲೆಕ್ಷನ್ 55.15 ಕೋಟಿ ರೂ. ದಾಟಿದೆ. ಶುಕ್ರವಾರ (ಜನವರಿ 12) ಈ ಚಿತ್ರ 8.05 ಕೋಟಿ ರೂ., ಶನಿವಾರ 12.45 ಕೋಟಿ ರೂ., ಭಾನುವಾರ 16 ಕೋಟಿ ರೂ. ಮತ್ತು ಸೋಮವಾರ 14.5 ಕೋಟಿ ರೂ. ಬಾಚಿಕೊಂಡಿದೆ.
ಇದನ್ನೂ ಓದಿ: Box Office War: ಬಾಕ್ಸ್ ಆಫೀಸ್‌ನಲ್ಲಿ ಸ್ಟಾರ್ ವಾರ್; ಮಹೇಶ್ ಬಾಬು, ಧನುಷ್ ಚಿತ್ರಗಳು ಗಳಿಸಿದ್ದೆಷ್ಟು?
ʼಕ್ಯಾಪ್ಟನ್ ಮಿಲ್ಲರ್ʼ ಕಲೆಕ್ಷನ್ ಎಷ್ಟು?
ಜನವರಿ 12ರಂದು ತಮಿಳಿನ ಸ್ಟಾರ್ ನಟ ಧನುಷ್ ಮತ್ತು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ ಕೂಡ ರಿಲೀಸ್ ಆಗಿದೆ. ಈ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ರವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಕುಂಟುತ್ತ ಸಾಗಿದೆ. ತೆರೆಕಂಡ ಮೊದಲ ದಿನ ಸುಮಾರು 8.65 ಕೋಟಿ ರೂ. ಗಳಿಸಿದ್ದ ʼಕ್ಯಾಪ್ಟನ್ ಮಿಲ್ಲರ್ʼ ಎರಡನೇ ದಿನ ಕಲೆಕ್ಟ್ ಮಾಡಿದ್ದು 6.75 ಕೋಟಿ ರೂ. ಭಾನುವಾರ 7.25 ಕೋಟಿ ರೂ. ಗಳಿಸಲಷ್ಟೆ ಯಶಸ್ವಿಯಾಗಿದೆ. ಸೋಮವಾರ ಗಳಿಸಿದ್ದು 6 ಕೋಟಿ ರೂ. ಹೀಗೆ ಒಟ್ಟು 31 ಕೋಟಿ ರೂ. ಕಲೆಕ್ಟ್ ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ