Site icon Vistara News

Hi Nanna: ಅಥೆನ್ಸ್ ಅಂತಾರಾಷ್ಟ್ರೀಯ ಕಲಾ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ನಾನಿ-ಮೃಣಾಲ್ ಸಿನಿಮಾ!

Hi Nanna Athens International Art Film Festival

ಬೆಂಗಳೂರು: ನಿರ್ದೇಶಕ ಶೌರ್ಯುವ್ ಅವರ ಚೊಚ್ಚಲ ಚಿತ್ರ, ನಾನಿ ಮತ್ತು ಮೃಣಾಲ್ ಠಾಕೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ `ಹಾಯ್ ನಾನ್ನʼ (Hi Nanna) ಅಥೆನ್ಸ್ ಅಂತಾರಾಷ್ಟ್ರೀಯ ಕಲಾ ಚಲನಚಿತ್ರೋತ್ಸವದಲ್ಲಿ (Athens International Art Film Festival) ʻಅತ್ಯುತ್ತಮ ಚಲನಚಿತ್ರʼ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ʻʻಹಾಯ್ ಡ್ಯಾಡ್ʼʼ (Hi Dad) ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ಈ ಚಿತ್ರ ಅಥೆನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

`ಹಾಯ್ ನಾನ್ನʼ ನಿರ್ದೇಶಕರು ಶೌರ್ಯುವ್ ಎಕ್ಸ್‌ನಲ್ಲಿ ಹೀಗೆ ಬರೆದಿದ್ದಾರೆ, “`ಹಾಯ್ ನಾನ್ನʼ ಸಿನಿಮಾ ʻʻಹಾಯ್ ಡ್ಯಾಡ್ʼʼ ಆಗಿ ಬಿಡುಗಡೆಯಾಯಿತು. ಮಾರ್ಚ್ 2024ರ ಆವೃತ್ತಿಯಲ್ಲಿ ಅಥೆನ್ಸ್ ಅಂತಾರಾಷ್ಟ್ರೀಯ ಕಲಾ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಲು ನಮಗೆ ತುಂಬ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ಈ ಸಾಧನೆಯು ಸಾಂಸ್ಕೃತಿಕ ಗಡಿಗಳನ್ನು ಮೀರಲು ಮತ್ತು ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಇನ್ನಷ್ಟು ಸಂಪರ್ಕ ಸಾಧಿಸಲು ಪ್ರೋತ್ಸಾಹ ನೀಡುತ್ತದೆ. ಸಂಘಟಕರು, ತೀರ್ಪುಗಾರರು ಮತ್ತು ನಮ್ಮ ʻಹಾಯ್‌ ನಾನ್ನʼ ಚಿತ್ರತಂಡಕ್ಕೆ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ʻಹಾಯ್‌ ನಾನ್ನʼ ತಂಡದ ಉತ್ಸಾಹ ಮತ್ತು ಸೃಜನಶೀಲತೆ ಜೀವ ತುಂಬಿದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hi Nanna: ನಾನಿ ಅಭಿನಯದ ʻಹಾಯ್ ನಾನ್ನ’ ಒಟಿಟಿಗೆ ಎಂಟ್ರಿ ಯಾವಾಗ?

ಶೌರ್ಯುವ್ ನಿರ್ದೇಶನದ ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ʻಹಾಯ್ ನಾನ್ನʼ (Hi Nanna Trailer) ಚಿತ್ರ 2023ರ ಡಿಸೆಂಬರ್ 7 ರಂದು ಬಿಡುಗಡೆಯಾಗಿತ್ತು. ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ ‘ಹಾಯ್ ಅಪ್ಪ’ ಎಂಬುದಾಗಿದೆ. ಸೌತ್ ಭಾಷೆಯಲ್ಲಿ ಒಂದೇ ಟೈಟಲ್ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಹಾಯ್ ನಾನ್ನ ಎಂದೇ ಶೀರ್ಷಿಕೆ ಫಿಕ್ಸ್ ಮಾಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಂಡಿದ್ದರು. ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ವೈರ ಎಂಟರ್‌ಟೇನ್‌ಮೆಂಟ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿದೆ.

Exit mobile version