Site icon Vistara News

Hostel Hudugaru Bekagiddare: ಕನ್ನಡದಲ್ಲಿ ಗೆದ್ದ ಹಾಸ್ಟೆಲ್‌ ಹುಡುಗ್ರು ಟಾಲಿವುಡ್‌ಗೆ ಎಂಟ್ರಿ!

Hostel Hudugaru Bekagiddare telugu poster

ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾವೀಗ ತೆಲುಗಿನತ್ತ ಹೆಜ್ಜೆ ಇಟ್ಟಿದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿಕೊಂಡಿರುವ ಈ ಚಿತ್ರವನ್ನು ʻಬಾಯ್ಸ್ ಹಾಸ್ಟೆಲ್ʼ ಹೆಸರಿನಡಿ ತೆಲುಗಿಗೆ ಡಬ್ ಮಾಡಲಾಗುತ್ತಿದೆ. ಇದೇ ಸೆಪ್ಟೆಂಬರ್‌ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಹಾಜರಾಗಲಿದೆ.

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳು ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಕ್ವಾಟ್ಲೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಇದೀಗ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಸಿನಿಮಾಗೆ ಬಾಯ್ಸ್ ಹಾಸ್ಟೆಲ್ ಎಂಬ ಟೈಟಲ್‌ ಇಟ್ಟು, ತೆಲುಗು ಭಾಷೆಗೆ ಡಬ್ ಆಗುತ್ತಿದೆ

ಚಾಯ್ ಬಿಸ್ಕೆಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ ’ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್‌ನಡಿ ಪ್ರೆಸೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Hostel Hudugaru Bekagiddare: ವಿದೇಶದಲ್ಲಿಯೂ ಹಾಸ್ಟೆಲ್ ಬಾಯ್ಸ್ ಹಾವಳಿ!

ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

Exit mobile version