Site icon Vistara News

Mahesh Babu: ಸಹೋದರಿ ಮಂಜುಳಾ, ಪ್ರಭಾಸ್ ಚಿಕ್ಕಮ್ಮ ಜತೆ ಸಿಹಿಕ್ಷಣ ಹಂಚಿಕೊಂಡ ಮಹೇಶ್‌ ಬಾಬು!

Mahesh Babu shares sweet moments with sister Manjula and Prabhas aunt

ಬೆಂಗಳೂರು: ನಟ ಮಹೇಶ್ ಬಾಬು (Mahesh Babu) ಅವರು ಭಾನುವಾರ ರಾತ್ರಿ (ಏ.28) ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಗಳು ಸಿತಾರಾ ಅವರೊಂದಿಗೆ ತಮ್ಮ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆಯಲ್ಲಿ ಅಭಿಮಾನಿಗಳೊಂದಿಗೆ ಫೋಟೊಗೆ ನಟ ಪೋಸ್‌ ಕೊಟ್ಟಿದ್ದಾರೆ. ನಟ ಸಹೋದರಿ ಮಂಜುಳಾ ( sister Manjula ) ಮತ್ತು ಪ್ರಭಾಸ್ ಅವರ ಚಿಕ್ಕಮ್ಮ ಶ್ಯಾಮಲಾ ದೇವಿ (Prabhas’ aunt Shyamala Devi) ಅವರೊಂದಿಗೆ ಸಿಹಿ ಕ್ಷಣಗಳನ್ನು ಹಂಚಿಕೊಂಡಿರುವ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ನೀಡಿಯಾದಲ್ಲಿ ವೈರಲ್‌ ಆಗಿವೆ.

ಅಭಿಮಾನಿಗಳು ಹಂಚಿಕೊಂಡ ವಿಡಿಯೊವೊಂದರಲ್ಲಿ, ಮಹೇಶ್ ಅವರು ತಮ್ಮ ಸಹೋದರಿ ಮಂಜುಳಾ ಅವರೊಂದಿಗೆ ಖುಷಿಯ ಸಂದರ್ಭವನ್ನು ಹಂಚಿಕೊಳ್ಳುತ್ತಿರುವುದನ್ನು ನೋಡಬಹುದು. ಸಹೋದರಿ ಮಂಜುಳಾ ಅವರು ಮಹೇಶ್‌ ಅವರ ಹೊಸ ಹೇರ್‌ಸೈಲ್‌ಗೆ ಫಿದಾ ಆದರು. ಮಹೇಶ್‌ ಅವರ ಉದ್ದನೆಯ ಕೂದಲನ್ನು ಮುಟ್ಟಿ, ತಮಾಷೆ ಮಾಡಿ ನಗುತ್ತಿರುವುದು ಕಂಡಿದೆ. ಮಹೇಶ್‌ ಕೂಡ ಸಹೋದರಿ ತಮಾಷೆಗೆ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ “ನಾವೆಲ್ಲರೂ ಇಂತಹ ಕ್ಷಣಗಳನ್ನು ಪ್ರೀತಿಸುತ್ತೇವೆ” ಎಂದು ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

ಇದನ್ನೂ ಓದಿ: Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

ಪಾಪರಾಜಿಗಳು ಕ್ಲಿಕ್ ಮಾಡಿದ ಮತ್ತೊಂದು ವಿಡಿಯೊದಲ್ಲಿ ಮಹೇಶ್ ಅವರು ಪ್ರಭಾಸ್ ಅವರ ಚಿಕ್ಕಮ್ಮ ಶ್ಯಾಮಲಾ ಅವರೊಂದಿಗೆ ಮಾತನಾಡುವುದನ್ನು ಕಾಣಬಹುದು. ನಮ್ರತಾ ಮತ್ತು ಸಿತಾರಾ ಅವರನ್ನು ತಬ್ಬಿಕೊಂಡು ಖುಷಿಯಲ್ಲಿ ಮಾತನಾಡಿದ್ದಾರೆ ಪ್ರಭಾಸ್ ಚಿಕ್ಕಮ್ಮ. ಪ್ರಭಾಸ್ ಅವರ ಅಭಿಮಾನಿಗಳು ವಿಡಿಯೊವನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಪೋಕಿರಿ ಸಿನಿಮಾಗೆ 18 ವರ್ಷ

ಭಾನುವಾರದಂದು (ಏ.28) ಮಹೇಶ್‌ ಅಭಿಮಾನಿಗಳಿಗೆ ಡಬಲ್ ಟ್ರೀಟ್ ಆಗಿತ್ತು. ಏಕೆಂದರೆ ಏಪ್ರಿಲ್ 28ರಂದು ಪುರಿ ಜಗನ್ನಾಥ್ ಅವರ ಮಹೇಶ್ ಮತ್ತು ಇಲಿಯಾನಾ ಡಿಕ್ರೂಜ್ ಅಭಿನಯದ ʻಪೋಕಿರಿʼ ಬಿಡುಗಡೆಯಾಗಿ 18 ವರ್ಷಗಳು ಕಳೆದಿತ್ತು. ಈ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಭಾರಿ ಯಶಸ್ಸನ್ನು ಕಂಡಿತ್ತು. ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆಯಾದ ಸಿನಿಮಾ ಆಗಿತ್ತು. ʻಪೋಕಿರಿʼ ಸಿನಿಮಾ ಹಿಟ್‌ ಆದ ಬಳಿಕ ತಮಿಳು, ಹಿಂದಿ, ಕನ್ನಡದಲ್ಲಿ ರಿಮೇಕ್‌ ಮಾಡಲಾಯ್ತು. 2009ರಲ್ಲಿ ಎಸ್‌ಎಸ್ ರಾಜಮೌಳಿಯವರ ʻಮಗಧೀರʼ ಸಿನಿಮಾ ಈ ಕಲೆಕ್ಷನ್‌ನನ್ನು ಸೋಲಿಸಿತ್ತು.

ಇದನ್ನೂ ಓದಿ: Mahesh Babu: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತ ಎಲ್ಲಿ? ಯಾವಾಗ?

ಟಾಲಿವುಡ್‌ ನಟ ಮಹೇಶ್‌ ಬಾಬು (Mahesh Babu) ಹಾಗೂ ನಿರ್ದೇಶಕ ರಾಜಮೌಳಿ (SS Rajamouli) ಅವರು ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್‌ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. 2022ರಲ್ಲಿ ತೆರೆಕಂಡ ʼಆರ್‌.ಆರ್‌.ಆರ್‌.ʼ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅವರು ಈ ಚಿತ್ರಕ್ಕಾಗಿಯೇ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ. ದಾಖಲೆ ಬರೆದ ʼಬಾಹುಬಲಿʼ, ʼಬಾಹುಬಲಿ 2ʼ, ʼಆರ್‌.ಆರ್‌.ಆರ್‌.ʼ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್‌ ಅವರೇ ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದ ಬರವಣಿಗೆಯಲ್ಲಿ ತೊಡಗಿರುವುದು ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣ. ಇತ್ತೀಚೆಗೆ ತೆರೆಕಂಡ ಮಹೇಶ್‌ ಬಾಬು ಅಭಿನಯದ ʼಗುಂಟೂರು ಖಾರಂʼ ಸಿನಿಮಾ ಸಾಧಾರಣ ಗೆಲುವು ದಾಖಲಿಸಿದೆ. ಹೀಗಾಗಿ ಅವರು ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದತ್ತ ಗಮನ ಹರಿಸಿದ್ದಾರೆ.

Exit mobile version