Site icon Vistara News

Bigg Boss Malayalam Season 6: ಬಿಯರ್ ಬಾಟಲಿಯಿಂದ ತಂದೆಗೆ ಹೊಡೆಯಲು ಹೋಗಿದ್ದನಂತೆ ಈ ಬಿಗ್‌ ಬಾಸ್‌ ಸ್ಪರ್ಧಿ!

Bigg Boss Malayalam Season 6 Rishi Kumar

ಬೆಂಗಳೂರು: ʻಬಿಗ್ ಬಾಸ್ ಮಲಯಾಳಂ ಸೀಸನ್ 6ʼ (Bigg Boss Malayalam Season 6) ಎರಡು ವಾರಗಳ ಹಿಂದೆ ಶುರುವಾಗಿದೆ. ಈಗ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ಶುರುವಾಗಿದೆ. ಮಾತ್ರವಲ್ಲ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಕುರಿತು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ರಿಷಿ ಕುಮಾರ್ (Rishi kumar) ಅವರು ತಮ್ಮ ತಂದೆಯಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿರುವ (Abuse by his father) ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ʻಬಿಗ್ ಬಾಸ್ ಸೀಸನ್ 6ʼರ ಸ್ಪರ್ಧಿ ರಿಷಿ ಕುಮಾರ್ ಮಾತನಾಡಿ ʻʻನಾನು, ನನ್ನ ತಾಯಿ, ಹಾಗೇ ನನ್ನ ಒಡಹುಟ್ಟಿದವರ ಮೇಲೆ ದೈಹಿಕವಾಗಿ ನನ್ನ ತಂದೆ ಹಲ್ಲೆ ನಡೆಸುತ್ತಿದ್ದರು. ತಂದೆಯ ಮದ್ಯದ ಚಟದಿಂದಾಗಿ ಬಾಲ್ಯದಲ್ಲಿ ಸಾಕಷ್ಟು ಅನುಭವಿಸಿದ್ದೇವು. ಆಗ ನಾನು ಚಿಕ್ಕವನಿದ್ದೆ. ಅಮ್ಮನ ಜತೆಗೆ ನನ್ನನ್ನು ಮತ್ತು ನನ್ನ ಸಹೋದರರನ್ನೂ ಹೊಡೆಯುತ್ತಿದ್ದರು. ಒಂದು ರಾತ್ರಿ ನನ್ನ ತಂದೆ ನನ್ನ ಅಮ್ಮನನ್ನು ಹೊಡೆಯಲು ಪ್ರಾರಂಭಿಸಿದರು. ನಂತರ ನಾನು ಬಿಯರ್ ಬಾಟಲಿಯನ್ನು ಒಡೆದು, ಅವರ ಕಡೆ ಹಿಡಿದು ನಿಂತು ಬಿಟ್ಟೆ. ನನ್ನ ತಾಯಿಯನ್ನು ನೋಯಿಸದಂತೆ ಎಚ್ಚರಿಸಿದೆ. ಆದರೆ ನನ್ನ ತಂದೆ ನನ್ನನ್ನು ನೋಡಿ ನಗಲು ಶುರು ಮಾಡಿದರು. ಆ ಬಳಿಕ ನನ್ನನ್ನು ತಳ್ಳಿ ಬಿಟ್ಟರು. ಮಕ್ಕಳಿಗೆ ಜನ್ಮ ನೀಡಿದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ತಂದೆಯಾಗಲು ಸಾಧ್ಯವಿಲ್ಲ. ನನ್ನ ಅಮ್ಮನಿಗೆ ಸ್ವಂತ ಮನೆ ಮಾಡುವ ಬಯಕೆ ಇದೆ. ಅವಳಿಗಾಗಿ ಮಾತ್ರ ಬಿಗ್ ಬಾಸ್‌ನಲ್ಲಿದ್ದೇನೆʼʼ ಎಂದು ರಿಷಿ ಮನಃಪೂರ್ವಕವಾಗಿ ಹೇಳಿದರು.

ಇದನ್ನೂ ಓದಿ: Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ

ರಿಷಿ ಕುಮಾರ್ ಅವರು 2015 ರಿಂದ 2024ರವರೆಗೆ ಫ್ಲವರ್ಸ್ ಟಿವಿಯಲ್ಲಿ ಪ್ರಸಾರವಾದ `ಸಿಟ್ಕಾಮ್ ಶೋ, ಉಪ್ಪುಮ್ ಮುಲಕುಮ್’ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಮಜವಿಲ್ ಮನೋರಮಾದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ʻಡಿ 4 ಡ್ಯಾನ್ಸ್ʼ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

ಆ ಆರನೇ ಸೀಸನ್‌ನಲ್ಲಿ ಅನ್ಸಿಬಾ, ಅಪ್ಸರಾ, ಅರ್ಜುನ್, ಗಾಬ್ರಿ, ಜಾನ್ಮೋನಿ, ಜಾಸ್ಮಿನ್, ಜಿಂಟೋ, ನಿಶಾನಾ, ನೋರಾ, ರೆಸ್ಮಿನ್, ರಿಷಿ, ರಾಕಿ, ಶರಣ್ಯ, ಸಿಜೋ, ಶ್ರೀರೇಖಾ, ಶ್ರೀತು, ಸುರೇಶ್ ಮತ್ತು ಯಮುನಾ ಇದ್ದಾರೆ. ಡಿಸ್ನಿ+ ಹಾಟ್‌ ಸ್ಟಾರ್‌ನಲ್ಲಿ ಪ್ರಸಾರ ಕಾಣುತ್ತಿದೆ.

Exit mobile version