Site icon Vistara News

Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

Kanakalatha Passes Away Film serial actor Mollywood

ಬೆಂಗಳೂರು: ಮಾಲಿವುಡ್‌ ಖ್ಯಾತ ನಟಿ ಕನಕಲತಾ ಅವರು (Kanakalatha passes away) ಮೇ 6ರಂದು ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. 2021 ರಿಂದ ಪಾರ್ಕಿನ್ಸನ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಯಿಂದ (dementia and Parkinson’s disease) ಬಳಲುತ್ತಿದ್ದರು ಎಂದು ವರದಿಯಾಗಿದೆ.

ದಕ್ಷಿಣ ಭಾರತದ ಶ್ರೇಷ್ಠ ನಟಿ ಕನಕಲತಾ 350ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಅನೇಕ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಒಂಬತ್ತನೇ ತರಗತಿಯಿಂದಲೇ ರಂಗಭೂಮಿ ಮತ್ತು ನಾಟಕದಲ್ಲಿ ತೊಡಗಿಸಿಕೊಂಡಿದ್ದ ಅವರು ರಂಗಭೂಮಿಯಲ್ಲಿ ತಮ್ಮ ಅಸಾಧಾರಣ ಪ್ರತಿಭೆಯಿಂದ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದರು.

ಈಗಾಗಲೇ ಹೇಳಿದಂತೆ ಕನಕಲತಾ ಅವರು ಪಾರ್ಕಿನ್ಸನ್‌ ಮತ್ತು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಕನಕಲತಾ ಅವರ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ತುಂಬಾ ಕಷ್ಟಪಟ್ಟಿದ್ದರು. ತನ್ನ ಹೆಸರನ್ನು ನೆನಪಿಸಿಕೊಳ್ಳಲಾಗದಷ್ಟು, ಟಿವಿಯಲ್ಲಿ ತನ್ನ ಸಿನಿಮಾ ಕಂಡರೂ ಅದು ತಾನೇ ಎಂದು ಗುರುತಿಸಲಾಗದಷ್ಟು ಆರೋಗ್ಯ ಹದಗೆಟ್ಟಿತ್ತು ಎಂದು ವರದಿ ಆಗಿದೆ.

ಇದನ್ನೂ ಓದಿ: Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

ಮಲಯಾಳಂ ನಟಿ ಕನಕಲತಾ ಅವರು ಆಗಸ್ಟ್‌ 24, 1960ರಲ್ಲಿ ಕೇರಳದ ಕೊಲ್ಲಂನಲ್ಲಿ ಪರಮೇಶ್ವರನ್‌ ಪಿಳ್ಳೈ ಮತ್ತು ಚಿನ್ನಮ್ಮ ದಂಪತಿಯ ಪುತ್ರಿಯಾಗಿ ಜನಿಸಿದರು. ಇವರು ಕೊಲ್ಲಾಮ್‌ನ ಸರಕಾರಿ ಮಹಿಳಾ ಶಾಲೆಯಲ್ಲಿ ಶಿಕ್ಷಣ ಪಡೆದರು. ಸಿನಿಮಾರಂಗಕ್ಕೆ ಪ್ರವೇಶಿಸುವ ಮೊದಲು ಅವರು ರಂಗಭೂಮಿ ಕಲಾವಿದೆಯಾಗಿದ್ದರು.

‘ಚಿಲ್ಲು’, ‘ಕರಿಯಿಲಕ್ಕಟ್ಟು ಪೋಲ್’, ‘ಜಾಗ್ರತ’, ‘ಕಿರೀಟಂ’, ‘ಸ್ಪಡಿಕಂ’, ಮತ್ತು ‘ಹರಿಕೃಷ್ಣನ್ಸ್’ ಸೇರಿದಂತೆ ಕೆಲವು ಪ್ರಮುಖ ಮಲಯಾಳಂ ಚಿತ್ರಗಳಲ್ಲಿನ ಅವರ ನೈಜ ಅಭಿನಯಕ್ಕೆ ಸಿನಿರಸಿಕರು ಮನಸೋತಿದ್ದರು. ಕೊನೆಯದಾಗಿ 2023 ರಲ್ಲಿ ಗಣೇಶ್ ರಾಜ್ ಅವರ ‘ಪೂಕ್ಕಲಂ’ ಚಿತ್ರದಲ್ಲಿ ಕಾಣಿಸಿಕೊಂಡರು.

ಪೃಥ್ವಿರಾಜ್ ಸುಕುಮಾರನ್ ಜತೆ 2006ರಲ್ಲಿ ತೆರೆಕಂಡ ‘ಪಾಕಲ’ ಚಿತ್ರದಲ್ಲಿ ಕನಕಲತಾ ತೆರೆ ಹಂಚಿಕೊಂಡಿದ್ದರು. ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಯ ಪೋಸ್ಟ್‌ ಹಾಕಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳನ್ನೇ ನಿಭಾಯಿಸುತ್ತಿದ್ದರು ನಟಿ.

Exit mobile version