ಬೆಂಗಳೂರು: ಮಲಯಾಳಂನ ಹಿರಿಯ ನಟ ಮಮ್ಮುಟ್ಟಿ ‘ಭ್ರಮಯುಗಂ’ (Bramayugam Movie) ಸೋನಿ ಲಿವ್ ಮೂಲಕ ಒಟಿಟಿಗೆ ಲಗ್ಗೆ ಇಟ್ಟಿದೆ. ಈ ಚಿತ್ರಕ್ಕೆ (Horror thriller Bramayugam) ಐಎಂಡಿಬಿಯಲ್ಲಿ 8+ ರೇಟಿಂಗ್ ನೀಡಲಾಗಿದೆ. ರಾಹುಲ್ ಸದಾಶಿವನ್ (Rahul Sadasivan) ನಿರ್ದೇಶನದ ಈ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ಸು ಕಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಬಂದಿದೆ.
ಸೋನಿ ಲಿವ್‌ನಲ್ಲಿ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಸಿನಿಮಾ. ನೈಟ್ ಶಿಫ್ಟ್ ಸ್ಟುಡಿಯೋಸ್ ಎಲ್‌ಎಲ್‌ಪಿ ಮತ್ತು ವೈ ನಾಟ್ ಸ್ಟುಡಿಯೋಸ್ ಅಡಿಯಲ್ಲಿ ಚಕ್ರವರ್ತಿ ರಾಮಚಂದ್ರ ಮತ್ತು ಶಶಿಕಾಂತ್ ಅವರು ನಿರ್ಮಿಸಿದ್ದಾರೆ. ‘ಭ್ರಮಯುಗಂ’ನಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್ ಮತ್ತು ಅಮಲ್ಡಾ ಲಿಜ್ ಒಳಗೊಂಡ ಪ್ರತಿಭಾವಂತ ನಟರುಗಳು ಇದ್ದಾರೆ.
ಬ್ಲ್ಯಾಕ್ ಆ್ಯಂಡ್ ವೈಟ್ನಲ್ಲಿ ಈ ಸಿನಿಮಾ ಇದೆ. ಸಿನಿಮಾದಲ್ಲಿ ಹಾರರ್ ಅಂಶ ಇದೆ. ಆದರೆ, ದೆವ್ವ ಬಂದು ಪ್ರೇಕ್ಷಕರನ್ನು ಭಯ ಬೀಳಿಸುವುದಿಲ್ಲ. ಭ್ರಮಯುಗಂದಲ್ಲಿ ಮಮ್ಮುಟ್ಟಿ ಅವರ ಅದ್ಭುತ ಮತ್ತು ವೈವಿಧ್ಯಮಯ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಭ್ರಮಯುಗಂ ಚಿತ್ರವು ವಿಶ್ವಾದ್ಯಂತ ಎರಡು ದಿನಗಳಲ್ಲಿ ಸುಮಾರು 13 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಪೈಕಿ ಈ ಸಿನಿಮಾ ಭಾರತದಲ್ಲೇ 6.55 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: Actor Mammootty: ಮಮ್ಮುಟ್ಟಿ ಹೊಸ ಲುಕ್ ಕಂಡು ದಂಗಾದ ಫ್ಯಾನ್ಸ್; ‘ಭ್ರಮಯುಗಂ’ ಫಸ್ಟ್ ಲುಕ್ ಪೋಸ್ಟರ್ ಔಟ್!
Even if this scene had a small glitch, it would have been a troll material for sure but mammukka maintained perfection with his unanimous acting."God level acting by our undisputed #rakshasa_nadikar♥️🥶👑 "#Bramayugam #Mammootty𓃵 #Mammootty pic.twitter.com/odS7nmflmB
— Harsha Vardhan (@harshavarthan49) March 16, 2024
ಮಮ್ಮುಟ್ಟಿ ಅವರು ಹಲವು ಸಿನಿಮಾಗಳನ್ನು ಘೋಷಿಸಿದ್ದಾರೆ. ಅದರಲ್ಲಿ ಟರ್ಬೋ ಕೂಡ ಒಂದು. ರಾಜ್ ಬಿ ಶೆಟ್ಟಿ ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗುವ ಸಾಧ್ಯತೆಯಿದೆ ಎಂತಲೂ ವರದಿಯಾಗಿದೆ. ಇದರಲ್ಲಿ ಫೈಟ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೀಪಿನಿಂದ ಹೊರಬರುವ ಮಮ್ಮುಟ್ಟಿಯ ಸ್ಟೈಲಿಶ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Fun fact: The screams and growls of the "Chaathan" from #Bramayugam were voiced by director #RahulSadasivan 😉💜 pic.twitter.com/0yOQSpoASp
— Midhun Vijayakumari (@1whodunnit) March 16, 2024
ʻಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ.