Site icon Vistara News

Manjummel Boys Collection: 180 ಕೋಟಿ ರೂ. ಗಡಿ ದಾಟಿದ ʻಮಂಜುಮ್ಮೇಲ್ ಬಾಯ್ಸ್ʼ : ಅಂಥದ್ದೇನಿದೆ ಚಿತ್ರದಲ್ಲಿ?

Manjummel Boys Collection Rs 200 cr mark globally

ಬೆಂಗಳೂರು: ʼಮಂಜುಮ್ಮೇಲ್ ಬಾಯ್ಸ್’ (Manjummel Boys) ಮಲಯಾಳಂ ಸಿನಿಮಾ ಹಿಟ್‌ ಕಂಡಿದೆ. ಭಾರತದಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 120 ಕೋಟಿ ರೂಪಾಯಿ ಬಾಚಿಕೊಂಡಿದೆ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದ ಬಜೆಟ್ 5 ಕೋಟಿ ರೂ. ಎಂದು ವರದಿಯಾಗಿದೆ. ಆದರೆ, ಸಿನಿಮಾದ ಗಳಿಕೆ ಮಾತ್ರ ಭರ್ಜರಿ ಇದೆ. ಮಾತ್ರವಲ್ಲ ಜೂಡ್ ಆಂಥನಿ ಜೋಸೆಫ್ ಅವರ ʻ2018ʼ ಸಿನಿಮಾದ ದಾಖಲೆಯನ್ನು ಮುರಿದಿದೆ.

ʻಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮಾತ್ರ ವಿಶ್ವಾದ್ಯಂತ 180 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಮಾಲಿವುಡ್​ನಲ್ಲಿ ಸಿನಿಮಾ ದಾಖಲೆ ಬರೆದಿದೆ. ಸಿನಿಮಾ ಯಶಸ್ಸನ್ನು ತಂಡದವರು ಸಂಭ್ರಮಿಸಿದ್ದು, ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಸೌಬಿನ್ ಶಬೀರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 2006ರಲ್ಲಿ ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪ್ ಒಂದು ಟ್ರಿಪ್ ಹೊರಡುತ್ತದೆ. ʻಡೆವಿಲ್ಸ್ ಕಿಚನ್ʼ ಹೆಸರಿನ ಗುಹೆಯಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನ ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಇದರಲ್ಲಿ ಸಕ್ಸೆಸ್‌ ಆಗ್ತಾರಾ? ಇಲ್ಲವಾ ಎಂಬುದೇ ಕಥೆ.

ಭಾರತದಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 120 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವದ ವಿವಿಧ ಭಾಗದಲ್ಲಿ ಸಿನಿಮಾಗೆ ಬೇಡಿಕೆ ಬಂದಿದ್ದು, 60 ಕೋಟಿ ರೂಪಾಯಿ ಹೊರ ದೇಶಗಳಿಂದ ಬಂದಿದೆ. ಮಲಯಾಳಂ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ.

ಇದನ್ನೂ ಓದಿ: Lok Sabha Election 2024: ಸುಮಲತಾಗೆ ದಿಲ್ಲಿಗೆ ಬುಲಾವ್;‌ ಸ್ಪರ್ಧೆ ಮಂಡ್ಯದಿಂದಲೋ? ಚಿಕ್ಕಬಳ್ಳಾಪುರದಿಂದಲೋ?

ಭಾನುವಾರ (ಮಾ.17) ಮಧ್ಯಾಹ್ನದ ಹೊತ್ತಿಗೆ ಮಂಜುಮ್ಮೆಲ್ ಬಾಯ್ಸ್ ಕಲೆಕ್ಷನ್ 180 ಕೋಟಿ ರೂಪಾಯಿ ಮುಟ್ಟಿದೆ ಎಂಬ ವರದಿಗಳು ಹೊರಬಿದ್ದಿವೆ. ಮನರಂಜನಾ ಉದ್ಯಮದ ತಜ್ಞ ರಮೇಶ್ ಬಾಲಾ ಇತ್ತೀಚೆಗೆ ಘೋಷಿಸಿದ್ದರು. ತಮಿಳು ಡಬ್ಬಿಂಗ್ ಆವೃತ್ತಿಯಿಲ್ಲದೆ, ತಮಿಳುನಾಡಿನಲ್ಲಿ ರೂ 50 ಕೋಟಿ ಗಳಿಕೆ ಕಂಡಿದೆ ಎಂದು ಬರೆದುಕೊಂಡಿದ್ದಾರೆ.

ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಜೀನ್ ಪಾಲ್ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version