Site icon Vistara News

The Goat Life: 100 ಕೋಟಿ ರೂ. ಗಳಿಕೆ ಕಂಡ ʻಆಡುಜೀವಿತಂʼ: ಧನ್ಯವಾದ ತಿಳಿಸಿದ ಪೃಥ್ವಿರಾಜ್!

Aadujeevitham The Goat Life box office collection Aadujeevitham The Goat Life box office collection 100 crore worldwide

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಅವರ ಮಲಯಾಳಂ ಚಿತ್ರ ʻಆಡುಜೀವಿತಂʼ (The Goat Life) ಬಿಡುಗಡೆಯಾದ ದಿನವೇ ಒಳ್ಳೆಯ ಗಳಿಕೆ ಕಂಡಿತ್ತು. ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಯ ಈ ಸಿನಿಮಾ ಇದೀಗ ವಿಶ್ವಾದ್ಯಂತ 100 ಕೋಟಿ ರೂ. ಗಳಿಸಿದೆ. ಪೃಥ್ವಿರಾಜ್ ಎಕ್ಸ್‌ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ʻಆಡುಜೀವಿತಂʼ ಬಾಕ್ಸ್ ಆಫೀಸ್

ಪೃಥ್ವಿರಾಜ್ ಎಕ್ಸ್‌ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಿದ್ದಾರೆ. “100 ಕೋಟಿ ರೂ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ! ಈ ಅಭೂತಪೂರ್ವ ಯಶಸ್ಸಿಗೆ ಧನ್ಯವಾದಗಳು!ʼʼಎಂದು ಬರೆದುಕೊಂಡಿದ್ದಾರೆ. ಕೆಲವರು ಇದು ಮಾಲಿವುಡ್‌ನಲ್ಲಿ ವೇಗವಾಗಿ 100 ಕೋಟಿ ರೂ. ಗಳಿಸಿದ ಚಿತ್ರ ಎಂದು ಹೇಳಿಕೊಂಡರು. ಇದು ಮಲಯಾಳಂ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಬ್ಲೆಸ್ಸಿ ನಿರ್ದೇಶನದ ಈ ಚಿತ್ರ ಆರು ದಿನಗಳಲ್ಲಿ ಭಾರತದಲ್ಲಿ ಸುಮಾರು 40.4 ಕೋಟಿ ರೂ. ಸಂಗ್ರಹಿಸಿತ್ತು. ಮೊದಲ ದಿನ, ʻಆಡುಜೀವಿತಂʼ ಭಾರತದಲ್ಲಿ ಒಟ್ಟು ಎಲ್ಲಾ ಭಾಷೆಗಳು ಸೇರಿದಂತೆ 7.6 ಕೋಟಿ ರೂ. ಸಂಗ್ರಹಿಸಿದರೆ, ಎರಡನೇ ದಿನ ದಿನ 6.25 ಕೋಟಿ ರೂ. ಮೂರನೇ ದಿನ 7.75 ಕೋಟಿ ರೂ. ನಾಲ್ಕು ಮತ್ತು ಐದನೇ ದಿನ 8.7 ಕೋಟಿ ರೂ. ಮತ್ತು ಆರನೇ ದಿನ 4. 5 ಕೋಟಿ ರೂ. ವ್ಯವಹಾರ ಮಾಡಿತ್ತು.

ಇದನ್ನೂ ಓದಿ: Aadujeevitham Movie: ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡ  ‘ಆಡುಜೀವಿತಂ‘!

ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

ಆಡು ಜೀವಿತಂʼ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಏನಿದೆ ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.

Exit mobile version