ಬೆಂಗಳೂರು: ನಟಿ ಸಮಂತಾ (samantha) ಮಾಜಿ ಪತಿ ನಟ ನಾಗ ಚೈತನ್ಯ (Naga Chaitanya) ಎರಡನೇ ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ (Naga Chaitanya -Sobhita Dhulipala) ಹರಿದಾಡುತ್ತಿತ್ತು. ಪೂರಕ ಎಂಬಂತೆ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ವರದಿಗಳ ಪ್ರಕಾರ ಜೋಡಿ ಇಂದೇ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ ಎನ್ನಲಾಗಿದೆ.
ಕೆಲವು ವರ್ಷಗಳ ಹಿಂದೆ ಸಮಂತಾ ರುತ್ ಪ್ರಭು ಅವರಿಗೆ ವಿಚ್ಛೇದನ ನೀಡಿದ ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಅವರೊಂದಿಗಿನ ಡೇಟಿಂಗ್ ಮಾಡುತ್ತಿರುವ ಸುದ್ದಿ ಸಖತ್ ವೈರಲ್ ಆಗಿತ್ತು. ಅವರಿಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢೀಕರಿಸದಿದ್ದರೂ, ಜೋಡಿಯು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು.
2021ರ ಅಕ್ಟೋಬರ್ ತಿಂಗಳಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಬೇರೆ ಆಗುವ ಬಗ್ಗೆ ಘೋಷಣೆ ಮಾಡಿದರು. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ರಿವೀಲ್ ಮಾಡಿಲ್ಲ. ಆ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆ ಡೇಟಿಂಗ್ ಆರಂಭಿಸಿದರು.
ಇದೀಗ ಈ ಜೋಡಿ ಮದುವೆಯಾಗುತ್ತಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದು ಕುತೂಹಲಕಾರಿ ವಿವರವೆಂದರೆ ನಾಗಾ ಚೈತನ್ಯ ಅವರ ತಂದೆ ನಾಗಾರ್ಜುನ ಅವರು ಮದುವೆಯ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರೆ ಎನ್ನಲಾಗಿದೆ. ಶುಕ್ರವಾರದಂದು ನಿಶ್ಚಿತಾರ್ಥದ ಚಿತ್ರಗಳು ಲಭ್ಯವಾಗಬಹುದು ಎಂದು ಮೂಲಗಳು ಹೇಳುತ್ತವೆ. ಆದರೆ ಈ ಬಗ್ಗೆ ಜೋಡಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: Naga Chaitanya: ನಾಗಚೈತನ್ಯ ಜೊತೆ ಪ್ರೇಮಿ, ಪತ್ನಿ ಮತ್ತು ತಾಯಿಯಾಗಿ ನಟಿಸಿದ್ದಾರೆ ಈ ನಟಿ!
ಇತ್ತೀಚೆಗೆ, ಶೋಭಿತಾ ಧೂಳಿಪಾಲ ಅವರು ಜಂಗಲ್ ಸಫಾರಿಯ ಫೋಟೊಗಳನ್ನು ಹಂಚಿಕೊಂಡಿದ್ದರು. ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್ಗ್ರೌಂಡ್ ಇತ್ತು. ಈ ಕಾರಣದಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಹಿಂದೆ ಜೋಡಿ ಲಂಡನ್‌ನಲ್ಲಿ ಕಾಣಿಸಿಕೊಂಡಿತ್ತು. ಕೆಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ, ಇಬ್ಬರು ತಮ್ಮ ಸಂಬಂಧದ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಸಿನಿಮಾ ವಿಚಾರಕ್ಕೆ ಬಂದರೆ ನಾಗ ಚೈತನ್ಯ ಸದ್ಯ ಸಾಯಿ ಪಲ್ಲವಿಯೊಂದಿಗೆ ‘ತಾಂಡೇಲ್’ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರವನ್ನು ಚಂದೂ ಮೊಂಡೇಟಿ ನಿರ್ದೇಶಿಸುತ್ತಿದ್ದಾರೆ. ಶೋಭಿತಾ ಧೂಳಿಪಾಲ ಇತ್ತೀಚೆಗೆ ದೇವ್ ಪಟೇಲ್ ನಿರ್ದೇಶನದ ‘ಮಂಕಿ ಮ್ಯಾನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಿದ್ದರೂ, ಸೆನ್ಸಾರ್ ಸಮಸ್ಯೆಗಳಿಂದಾಗಿ ಇದು ಭಾರತದಲ್ಲಿ ಬಿಡುಗಡೆಯಾಗಲು ಇನ್ನೂ ಸಾಧ್ಯವಾಗಿಲ್ಲ