ಬೆಂಗಳೂರು: ನಟ ಪ್ರಭಾಸ್ (Ayodhya Rama Mandir) ಅವರು ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿವೆ. ಇದಕ್ಕೆ ಪೂರಕವಾಗಿ ಆಂಧ್ರಪ್ರದೇಶದ ಶಾಸಕ ಚಿರ್ಲಾ ಜಗ್ಗಿ ರೆಡ್ಡಿ ಅವರು ಉದ್ಘಾಟನಾ ದಿನದಂದು ಊಟದ ವೆಚ್ಚವನ್ನು ಪ್ರಭಾಸ್ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಮಾಧ್ಯಮವೊಂದು ಇದು ಸುಳ್ಳು ಸುದ್ದಿ ಎಂದು ವರದಿ ಮಾಡಿದೆ. ಅಷ್ಟೇ ಅಲ್ಲದೇ ಪ್ರಭಾಸ್ ಅವರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Rama Mandir) ಪ್ರಾಣ ಪ್ರತಿಷ್ಠೆ ಸಮಾರಂಭ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಹಿತ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಡೀ ದೇಶಾದ್ಯಂತ ರಾಮ ಜಪ ಮೊಳಗುತ್ತಿದೆ. ಹಲವಾರು ಬಾಲಿವುಡ್ ತಾರೆಯರು ಮತ್ತು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ರಭಾಸ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಇದೀಗ ಪ್ರಭಾಸ್ ಅವರು ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿವೆ.
ಇದಕ್ಕೆ ಪೂರಕವಾಗಿ ಆಂಧ್ರಪ್ರದೇಶದ ಶಾಸಕ ಚಿರ್ಲಾ ಜಗ್ಗಿರೆಡ್ಡಿ ಅವರು ಉದ್ಘಾಟನಾ ದಿನದಂದು ಊಟದ ವೆಚ್ಚವನ್ನು ಪ್ರಭಾಸ್ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಪ್ರಭಾಸ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ, ಅವರ ತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮಾಧ್ಯಮವೊಂದರ ಮಾಹಿತಿ ಪ್ರಕಾರ ʻಇದು ಸುಳ್ಳು ಸುದ್ದಿ ಮತ್ತು ಪ್ರಭಾಸ್ ಅಂತಹ ಯಾವುದೇ ದೇಣಿಗೆ ನೀಡಿಲ್ಲʼ ಎಂದು ವರದಿ ಮಾಡಿದೆ.
ಇದನ್ನೂ ಓದಿ: Ayodhya Rama Mandir: ರಾಮಮಂದಿರ ಪ್ರಾಣ ಪ್ರತಿಷ್ಠೆ ದಿನ ಬ್ಯಾಂಕ್‌ಗಳಿಗೂ ರಜೆ ಇದೆಯಾ?
ದೆಹಲಿಯಲ್ಲಿ ಪ್ರಾಣ ಪ್ರತಿಷ್ಠೆ ದಿನ 1,500ಕ್ಕೂ ಕಾರ್ಯಕ್ರಮಗಳು ನಿಗದಿಯಾಗಿವೆ. ದೇಗುಲಗಳು, ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿವೆ ಎಂದು ಛೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿಯ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ. “‘ಸುಂದರ್ ಕಾಂಡ್’ ಮತ್ತು ‘ಧಾರ್ಮಿಕ್ ಪತ್’ ಪ್ರದರ್ಶಿಸುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ” ಎಂದು ಗೋಯಲ್ ಹೇಳಿದ್ದಾರೆ.