ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. 2000 ಕ್ಕೂ ಹೆಚ್ಚು ಜನ ನಟಿಯನ್ನು ನೋಡಲು ಮುಗಿ ಬಿದ್ದಿದ್ದರು. ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ, ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್ ಒಂದೆಡೆ ಸೇರಿದ್ದರು.
ಇದೀಗ ರಶ್ಮಿಕಾ ಫೋಟೊ ಶೇರ್ ಮಾಡಿ “ನಾನು ನಿಮ್ಮೆಲ್ಲರನ್ನು ಭೇಟಿಯಾದಾಗ ನನ್ನ ಹೃದಯ ತುಂಬಿ ಬಂತು. ಧನ್ಯವಾದಗಳು ಕರುನಾಗಪಲ್ಲಿ. ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಹೀಗಾಗಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ನಿನ್ನೆ (ಜು. 25) ಕೇರಳದ ಕೊಲ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು, ಆದರೆ ನಟಿಯನ್ನು ವೀಕ್ಷಿಸಲು 2000 ಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದರು. ನಟಿಯನ್ನು ಸ್ವಾಗತಿಸಲು ಕಾರ್ಯಕ್ರಮದ ಸಮಯದಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾಗಳ ಹಲವಾರು ಹಾಡುಗಳನ್ನು ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡರು ರಶ್ಮಿಕಾ.
ಇದನ್ನೂ ಓದಿ: Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?
ʻರಂಜಿತಮೆ’ ಹಾಡು ಪ್ಲೇ ಆಗುತ್ತಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸಿದರು ನಟಿ. ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ತಮ್ಮ ಎಂದಿನ ಸ್ಟೈಲ್‌ನಲ್ಲಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ನಟಿ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದೇ ರೀತಿ ಛಾವಾ ಸಿನಿಮಾಗೆ ರಶ್ನಿಕಾ ನಾಯಕಿ. ಪುಷ್ಪ ಸಿನಿಮಾಗೂ ರಶ್ಮಿಕಾ ನಾಯಕಿ. ಈಗ ಒಂದೇ ದಿನ ರಶ್ಮಿಕಾ ಅವರ ಈ ಎರಡು ಸಿನಿಮಾಗಳು ರಿಲೀಸ್ ಆಗೋ ಸಾಧ್ಯತೆ ಇದೆ ಎಂದು ವರದಿಯಾಗಿದೆ.
‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಮಾಡೋದಾಗಿ ತಂಡದವರು ಘೋಷಣೆ ಮಾಡಿದ್ದಾರೆ. ಅದೇ ರೀತಿ ರಶ್ಮಿಕಾ ನಟನೆಯ ‘ಛವಾ’ ಕೂಡ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ‘ಪುಷ್ಪ 2’ ಘೋಷಣೆ ಆದ ಬಳಿಕ ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಈ ಚಿತ್ರ ಕೂಡ ಅಂದುಕೊಂಡಂತೆ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.