Site icon Vistara News

Rashmika Mandanna: ರಶ್ಮಿಕಾ ಬಾಳಿಗೆ ವಿಶೇಷ ವ್ಯಕ್ತಿ ಎಂಟ್ರಿ; ವಿಜಯ್‌ ದೇವರಕೊಂಡ ಗತಿ ಏನು ಎಂದ ಫ್ಯಾನ್ಸ್‌!

vijay rashmika

vijay rashmika

ಬೆಂಗಳೂರು: ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ʼಅನಿಮಲ್‌ʼ (Animal) ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಈಗಾಗಲೇ 800 ಕೋಟಿ ರೂ. ಗಡಿ ದಾಟಿರುವ ಈ ಸಿನಿಮಾ 1,000 ಕೋಟಿ ರೂ. ಮೈಲುಗಲ್ಲಿನತ್ತ ದಾಪುಗಾಲು ಹಾಕಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಕುತೂಹಲ ಮೂಡಿಸಿದೆ. ಅವರು ತಮ್ಮ ಖಾತೆಯಲ್ಲಿ, ʼʼನನ್ನ ಜೀವನಕ್ಕೆ ಬಂದಿರುವುದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆʼʼ ಎಂದು ಬರೆದು ಸ್ಟೋರಿಯನ್ನು ಪೋಸ್ಟ್‌ ಮಾಡಿದ್ದರು. ಇದನ್ನು ಅವರು ಯಾರಿಗಾಗಿ ಬರೆದಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ವಿಜಯ್‌ ದೇವರಕೊಂಡಗೆ ಧನ್ಯವಾದ ಹೇಳಿದ್ರಾ?

ತೆಲುಗು ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ನಡೆಸುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಇಬ್ಬರು ತುಟಿ ಬಿಚ್ಚದಿದ್ದರೂ ಅವರ ನಡುವಿನ ಒಡನಾಟ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಫೋಟೊಗಳು ಹಲವು ಬಾರಿ ವೈರಲ್‌ ಆಗಿದ್ದವು. ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಉತ್ತರಿಸಿದ್ದರು. ಇತ್ತೀಚೆಗೆ ತೆರೆಕಂಡ ‘ಖುಷಿ’ ಸಿನಿಮಾದ ಪ್ರಚಾರದ ವೇಳೆ ವಿಜಯ್ ದೇವರಕೊಂಡ ಸದ್ಯದಲ್ಲೇ ಮದುವೆ ಆಗುವುದಾಗಿ ಹೇಳಿದ್ದರು. ವಧು ರಶ್ಮಿಕಾ ಮಂದಣ್ಣ ಎಂದೇ ಸುದ್ದಿಯಾಗಿತ್ತು. ಇದೀಗ ರಶ್ಮಿಕಾ ಪೋಸ್ಟ್‌ ಮತ್ತಷ್ಟು ಅನುಮಾನ ಹುಟ್ಟು ಹಾಕಿದೆ.

ಇತ್ತೀಚೆಗೆ ಇಬ್ಬರು ಟರ್ಕಿಯಲ್ಲಿ ಒಟ್ಟಿಗೇ ಇದ್ದರು ಎನ್ನುವುದನ್ನು ಅವರ ಪ್ರತ್ಯೇಕ ಫೋಟೊಗಳಿಂದ ಅಭಿಮಾನಿಗಳು ಪತ್ತೆ ಹಚ್ಚಿದ್ದರು. ಮೊದಲು ವಿಜಯ್ ಫೋಟೊ​ ಶೇರ್​ ಮಾಡಿಕೊಂಡಿದ್ದರು. ರೆಸ್ಟೋರೆಂಟ್​ ಒಂದರಲ್ಲಿ ಆಹಾರ ಸೇವಿಸುವ ಫೋಟೊ ಇದಾಗಿತ್ತು. ಅದೇ ಬ್ಯಾಕ್​ಗ್ರೌಂಡ್​ ಇರುವ ಫೋಟೊವನ್ನು ರಶ್ಮಿಕಾ ಬಹಳ ದಿನಗಳ ಬಳಿ ಶೇರ್​ ಮಾಡಿಕೊಂಡು ಇದು ತುಂಬಾ ಹಳೆಯ ಫೋಟೋ ಎಂದಿದ್ದರು. ಆದರೆ ಈ ಫೋಟೊಗಳನ್ನು ಹೋಲಿಸಿ ನೋಡಿದ ನೆಟ್ಟಿಗರು ಇವೆರಡೂ ಒಂದೇ ಹೋಟೆಲ್​ನಲ್ಲಿ ತೆಗೆದ ಫೋಟೊ ಎನ್ನುವುದನ್ನು ಪತ್ತೆ ಹಚ್ಚಿದ್ದರು. ಇದೀಗ ಮತ್ತೆ ಈ ಜೋಡಿಯ ಕುರಿತಾದ ಚರ್ಚೆ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: Rashmika Mandanna: ʻದಿಯಾʼ ಹೀರೊ ಜತೆ ರಶ್ಮಿಕಾ ಮಂದಣ್ಣ ರೊಮ್ಹಾನ್ಸ್‌!

ಸದ್ಯ ʼಅನಿಮಲ್‌ʼ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹು ನಿರೀಕ್ಷಿತ ʼಪುಷ್ಪ 2: ದಿ ರೂಲ್‌ʼ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಮೊದಲ ಭಾಗ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು. ಹೀಗಾಗಿ ಈ ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಜತೆಗೆ ʼರೈನ್‌ ಬೋʼ, ʼದಿ ಗರ್ಲ್‌ಫ್ರೆಂಡ್‌ʼ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಮತ್ತು ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version