Site icon Vistara News

Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

rashmika vijay devarakonda

rashmika vijay devarakonda

ಬೆಂಗಳೂರು: ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ನ್ಯಾಷನಲ್‌ ಕ್ರಶ್‌ ಆಗಿ ಜನಪ್ರಿಯ. ಇತ್ತೀಚೆಗೆ ತೆರೆಕಂಡ ಬಾಲಿವುಡ್‌ ಚಿತ್ರ ‘ಅನಿಮಲ್‌’ (Animal) ಸೂಪರ್‌ ಹಿಟ್‌ ಆಗಿದ್ದು, ರಶ್ಮಿಕಾ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ. ಈ ಚಿತ್ರದಲ್ಲಿ ರಣಬೀರ್‌ ಕಪೂರ್‌ ಜತೆಗೆ ಗೀತಾಂಜಲಿಯಾಗಿ ರಶ್ಮಿಕಾ ಕೂಡ ಮೋಡಿ ಮಾಡಿದ್ದಾರೆ. ಈ ಮಧ್ಯೆ ಟಾಲಿವುಟ್‌ ಸ್ಟಾರ್‌ ವಿಜಯ್‌ ದೇವರಕೊಂಡ (Vijay Deverakonda) ಜತೆ ರಶ್ಮಿಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ಬಗ್ಗೆ ಇಬ್ಬರೂ ಬಾಯಿ ಬಿಟ್ಟಿಲ್ಲ. ಆದರೂ ಈ ಜೋಡಿ ಆಗಾಗ ಜತೆಯಾಗಿ ಕಾಣಿಸಿಕೊಂಡು ಗಾಸಿಪ್‌ಗೆ ಆಹಾರವಾಗುತ್ತದೆ. ಈಗಲೂ ಅಂತಹದ್ದೆ ಘಟನೆಯೊಂದು ನಡೆದಿದೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮಾಡಿರುವ ಕಮೆಂಟ್‌ ಅನೇಕರ ಗಮನ ಸೆಳೆದಿದೆ. ವಿಜಯ್‌ ದೇವರಕೊಂಡ ಜತೆ ರಶ್ಮಿಕಾ ಮದುವೆ ಆಗೋದು ಖಚಿತ ಎಂದು ಈ ಕಮೆಂಟ್‌ ನೋಡಿದ ಅಭಿಮಾನಿಗಳು ನಿರ್ಧರಿಸಿದ್ದಾರೆ. ವಿಜಯ್‌ ದೇವರಕೊಂಡ ಜತೆಗಿನ ಸಂಬಂಧವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ ಎಂದೆಲ್ಲ ಮಾತನಾಡತೊಡಗಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಹೇಳಿದ್ದೇನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಶ್ಮಿಕಾ ಹೇಳಿದ್ದೇನು ?

ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಫ್ಯಾನ್​ ಪೇಜ್​ ಒಂದರಲ್ಲಿ ವಿಶೇಷವಾದ ಪೋಸ್ಟ್​ ಮಾಡಲಾಗಿತ್ತು. ‘ರಶ್ಮಿಕಾ ಮಂದಣ್ಣ ಅವರ ಗಂಡನಿಗೆ ಯಾವ ಗುಣಗಳು ಇರಬೇಕು?ʼ ಎಂದು ಪ್ರಶ್ನಿಸಿ ಅದರ ಕೆಳಗೆ ಉತ್ತರವನ್ನೂ ನೀಡಲಾಗಿತ್ತು. ʼರಶ್ಮಿಕಾ ನ್ಯಾಷನಲ್​ ಕ್ರಶ್​ ಆದ್ದರಿಂದ ಅವರ ಗಂಡ ಸ್ಪೆಷಲ್​ ಆಗಿರಬೇಕು. ಅವರ ಗಂಡ ವಿಡಿ (VD) ರೀತಿ ಇರಬೇಕು. ವಿಡಿ ಎಂದರೆ ವೇರಿ ಡೇರಿಂಗ್​. ಅಂದರೆ ಸದಾ ಕಾಲ ರಶ್ಮಿಕಾ ಅವರನ್ನು ಕಾಪಾಡಬೇಕು. ರಶ್ಮಿಕಾ ಅವರನ್ನು ನಾವು ರಾಣಿ ಎಂದು ಕರೆಯುತ್ತೇವೆ. ಹಾಗಾಗಿ ಅವರನ್ನು ಮದುವೆ ಆಗುವವರು ರಾಜನ ರೀತಿ ಇರಬೇಕು’ ಎಂದು ಬರೆಯಲಾಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ‘ಖಂಡಿತವಾಗಿಯೂ ನಿಜ’ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯ್‌ ದೇವರಕೊಂಡ ಅವರನ್ನು ಎಲ್ಲರೂ ವಿಡಿ ಎಂದೇ ಕರೆಯುತ್ತಾರೆ. ಹೀಗಾಗಿ ಈ ಪೇಜ್‌ನಲ್ಲಿ ಉಲ್ಲೇಖಿಸಿದ ವಿಡಿ ಪದವನ್ನು ಅಭಿಮಾನಿಗಳು ವಿಜಯ್‌ ದೇವರಕೊಂಡ ಎಂದೇ ವ್ಯಾಖ್ಯಾನಿಸುತ್ತಿದ್ದಾರೆ. ವಿಜಯ್‌ ದೇವರಕೊಂಡ ಅವರನ್ನು ವಿಡಿ ಎಂದು ಕರೆಯುವ ವಿಚಾರ ಗೊತ್ತಿದ್ದರೂ ರಶ್ಮಿಕಾ ಖುಷಿಯಿಂದ ಕಮೆಂಟ್​ ಮಾಡಿದ್ದಾರೆ ಎಂದರೆ ಮದುವೆಯ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದೇ ಅರ್ಥ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸದ್ಯ ಈ ಪೋಸ್ಟ್‌ ವೈರಲ್‌ ಆಗಿದೆ. ಒಟ್ಟಿನಲ್ಲಿ ವಿಜಯ್‌-ರಶ್ಮಿಕಾ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: Rashmika Mandanna: ನಟಿ ರಶ್ಮಿಕಾ ಮಂದಣ್ಣ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡತಿ

ಫೋರ್ಬ್ಸ್ ಇಂಡಿಯಾ (Forbes India) ನಿಯತಕಾಲಿಕೆ ಇತ್ತೀಚೆಗೆ ಪ್ರಕಟಿಸಿದ 30 ವರ್ಷದೊಳಗಿನ 30 ಯಶಸ್ವಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಶ್ಮಿಕಾ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 27 ವರ್ಷದ ರಶ್ಮಿಕಾ ಮನರಂಜನೆ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಸದ್ಯ ರಶ್ಮಿಕಾ ವಿವಿಧ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ, ಅಲ್ಲು ಅರ್ಜುನ್‌ ಅವರ ʼಪುಷ್ಪ 2ʼ,‌ ತೆಲುಗಿನ ʼರೈನ್‌ ಬೋʼ, ʼದಿ ಗರ್ಲ್‌ ಫ್ರೆಂಡ್‌ʼ, ಬಾಲಿವುಡ್‌ನ ʼಛಾವಾʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜತೆಗೆ ತಮಿಳಿನಲ್ಲಿ ಧನುಷ್‌ ಅಭಿನಯದ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ಕಿ ಕೌಶಲ್‌ ನಾಯಕನಾಗಿ ನಟಿಸುತ್ತಿರುವ ʼಛಾವಾʼ ಐತಿಹಾಸಿಕ ಚಿತ್ರ ಎನ್ನುವುದು ವಿಶೇಷ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version