ಲಂಡನ್: ಸೆಲೆಬ್ರಿಟಿಗಳ ಪ್ರತಿ ನಡೆಯನ್ನೂ ಅವರ ಅಭಿಮಾನಿಗಳು ಹಾಗೂ ಟ್ರೋಲಿಗರು ಗಮನಿಸುತ್ತಿರುತ್ತಾರೆ. ಅವರ ಎಲ್ಲ ಕ್ರಿಯೆಯಲ್ಲೂ ತಪ್ಪು, ಸರಿಗಳನ್ನು ಹುಡುಕುತ್ತಿರುತ್ತಾರೆ. ಸದ್ಯದ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಒಂದು ಅವಕಾಶ ಸಿಕ್ಕರೂ ಟ್ರೋಲ್ ಮಾಡಿಬಿಡುತ್ತಾರೆ. ಅಂತೆಯೇ ಬಹುಬಾಷಾ ನಟಿ ಸಮಂತಾ ರುತ್ ಪ್ರಭು ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಿಟಿಷರಂತೆ ಇಂಗ್ಲಿಷ್ ಮಾತನಾಡಿ ಟ್ರೋಲ್ ಆಗಿದ್ದಾರೆ. ಅವರು ಮಾತನಾಡುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬಗೆಬಗೆಯಾಗಿ ಕಾಮೆಂಟ್ಗಳನ್ನು ಬರೆದಿದ್ದಾರೆ.
ಸಮಂತಾ ಹಾಗೂ ವರುಣ್ ಧವನ್ ನಟನೆಯ ಸಿಟಾಡೆಲ್ ವೆಬ್ ಸೀರಿಸ್ನ ಪ್ರೀಮಿಯರ್ ಶೋ ಲಂಡನ್ನಲ್ಲಿ ನಡೆದಿದೆ. ಈ ವೆಬ್ಸೀರಿಸ್ನ ಇಂಗ್ಲಿಷ್ ಅವತರಣಿಕೆಯಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಅಂತೆಯೇ ಕಾರ್ಯಕ್ರಮದಲ್ಲಿ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಲು ಹೋದ ಸಮಂತಾ ರುತ್ ಪ್ರಭು ಇಂಗ್ಲೆಂಡ್ನವರಂತೆ ಉಚ್ಛಾರಣೆ ಮಾಡುತ್ತಾರೆ. ಈ ವಿಡಿಯೊ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಹುಡುಕಿ ಹೆಕ್ಕಿ ಹಾಕಿ ವೈರಲ್ ಮಾಡಿದ್ದಾರೆ.
ಶಂಕರ್ ಪ್ರಸಾದ್ ಎಂಬುವರು ನಾನು ಸಮಂತಾ ಅವರ ನಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ. ಆದರೆ, ಇಂಗ್ಲೆಂಡ್ಗೆ ಹೋದ ತಕ್ಷಣ ಅಲ್ಲಿನವರ ರೀತಿ ಮಾತನಾಡುವುದು ಯಾಕೆ. ಭಾರತೀಯರಂತೆ ಮಾತನಾಡಿದರೆ ಅವರಿಗೇನು ನಷ್ಟ ಎಂದು ಬರೆದುಕೊಂಡಿದ್ದಾರೆ. ಎಮ್ ರತ್ನಮ್ ಎಂಬುವರು ಬರೆದು, ಯಾರಾದರೂ ಸಮಂತಾ ಅವರಿಗೆ ಕೇರಳ ಮೂಲದವರು ಎಂದು ನೆನಪಿಸುವುದು ಉತ್ತಮ ಎಂದು ಬರೆದಿದ್ದಾರೆ.
ಇದನ್ನೂ ಓದಿ : Samantha Ruth Prabhu: 16ವರ್ಷಗಳ ಹಿಂದೆ ಸಮಂತಾ ಹೇಗಿದ್ದರು?; ಇನ್ಸ್ಟಾದಲ್ಲಿ ಹಳೇ ಫೋಟೋ ಶೇರ್ ಮಾಡಿಕೊಂಡ ನಟಿ
ಸಮಂತಾ ಅವರ ಜತೆಗಿದ್ದ ವರುಣ್ ಧವನ್ ಭಾರತೀಯರಂತೆ ಇಂಗ್ಲಿಷ್ ಮಾತನಾಡಿದ್ದಾರೆ. ಆದರೆ, ಸಮಂತಾ ಮಾತ್ರ ಯಾಕೆ ಆ ರೀತಿ ಮಾತನಾಡಿದ್ದಾರೆ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗೋಲ್ಡನ್ ಗ್ಲೋಬ್ ಕಾರ್ಯಕ್ರಮದಲ್ಲಿ ಆರ್ಆರ್ಆರ್ ಸಿನಿಮಾದ ನಟ ಜೂನಿಯರ್ ಎನ್ಟಿಆರ್ ಅಮೆರಿಕನ್ ಇಂಗ್ಲಿಷ್ನಲ್ಲಿ ಮಾತನಾಡಿ ಟ್ರೋಲ್ಗೆ ಗುರಿಯಾಗಿದ್ದರು. ಆಗಲೂ ಅವರಿಗೆ ಭಾರತೀಯ ಇಂಗ್ಲಿಷ್ನಲ್ಲೇ ಮಾತನಾಡಿ ಎಂದು ನೆಟ್ಟಿಗರು ಸಲಹೆ ಕೊಟ್ಟಿದ್ದರು.
ಸಿಟಾಡೆಲ್ ವೆಬ್ಸೀರಿಸ್ ಎರಡು ವರ್ಷನ್ನಲ್ಲಿ ತಯಾರಾಗುತ್ತಿದೆ. ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡನ್ ಇದ್ದರೆ, ಭಾರತೀಯ ಆವೃತ್ತಿಯಲ್ಲಿ ವರುಣ್ ಧವನ್ ಹಾಗೂ ಸಮಂತಾ ನಟಿಸಿದ್ದಾರೆ. ಅಮೆಜಾನ್ ಪ್ರೈಮ್ನಲ್ಲಿ ಈ ವೆಬ್ಸರಣಿ ಬಿಡುಗಡೆಗೊಳ್ಳಲಿದೆ.
ಸಮಂತಾ ರುತ್ ಪ್ರಭು ನಟಿಸಿರುವ ಇತ್ತೀಚಿನ ಎರಡು ಸಿನಿಮಾಗಳಾದ ಯಶೋಧ ಹಾಗೂ ಶಾಕುಂತಲಮ್ ಬಾಕ್ಸ್ ಆಫೀನಲ್ಲಿ ಸೋಲು ಕಂಡಿತ್ತು. ಇದೀಗ ಅವರು ವಿಜಯ್ ದೇವರಕೊಂಡ ಅವರ ಜತೆ ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.