69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು (69th annual National Film Awards) ಆಗಸ್ಟ್ 24ರ ಸಂಜೆ 5 ಗಂಟೆಗೆ ಘೋಷಣೆ ಮಾಡಲಾಗುತ್ತಿದೆ. 2021 ರಲ್ಲಿ ಬಿಡುಗಡೆ ಆದ ಸಿನಿಮಾಗಳಿಲ್ಲಿ ಅತ್ಯುತ್ತಮ ಸಿನಿಮಾ, ನಟ, ತಂತ್ರಜ್ಞರಿಗೆ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷ ಜೈ ಭೀಮ್, ಮಿನ್ನಲ್ ಮುರಳಿ (Minnal Murali,), ತಲೈವಿ, ಸರ್ದಾರ್ ಉದಾಮ್ (Sardar Udham), 83, ಪುಷ್ಪಾ ದಿ ರೈಸ್, ಶೇರ್ಷಾ, ದಿ ಗ್ರೇಟ್ ಇಂಡಿಯನ್ ಕಿಚನ್, ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಮತ್ತು ನಾಯಟ್ಟು (Nayattu) ಸೇರಿದಂತೆ ಹಲವು ಚಿತ್ರಗಳು ಸ್ಪರ್ಧೆಯಲ್ಲಿವೆ.
ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ ಪ್ರಶಸ್ತಿಯನ್ನು ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗುತ್ತಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ.
ಇದನ್ನೂ ಓದಿ: National Film Awards | ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸ್ವೀಕರಿಸಿದ ಸೂರ್ಯ, ಅಜಯ್ ದೇವಗನ್, ಅತ್ಯುತ್ತಮ ನಟಿ ಅಪರ್ಣಾ
ದಕ್ಷಿಣ ಭಾರತದ ಯಾವೆಲ್ಲ ಸಿನಿಮಾಗಳಿವೆ?
ತೆಲುಗಿನಲ್ಲಿ ‘ಆರ್ಆರ್ಆರ್‘ ಸಿನಿಮಾ ಸ್ಪರ್ಧೆಯಲ್ಲಿದ್ದು ಈ ಸಿನಿಮಾವು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳಲಿದೆ. ‘ಆರ್ಆರ್ಆರ್‘ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿದ್ದರೂ ಸೆನ್ಸಾರ್ ಆಗಿದ್ದು 2021ರಲ್ಲಿ ಆದ್ದರಿಂದ ಸಿನಿಮಾವನ್ನು 69ನೇ ವರ್ಷದ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ‘ ಸಿನಿಮಾ ಸಹ ಸ್ಪರ್ಧೆಯಲ್ಲಿದೆ. ಅತ್ಯುತ್ತಮ ನಟ ಪ್ರಶಸ್ತಿಗಾಗಿ ರಾಮ್ ಚರಣ್, ಜೂ ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ನಡುವೆ ಸ್ಪರ್ಧೆಯಿದೆ. ತೆಲುಗಿನ ‘ಜಾತಿ ರತ್ನಾಲು‘, ‘ಉಪ್ಪೆನ‘ ಇನ್ನೂ ಹಲವು ಸಿನಿಮಾಗಳು ಸಹ ಸ್ಪರ್ಧೆಯಲ್ಲಿವೆ.
ಮಲಯಾಳಂನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಿಚನ್‘, ‘ಮಿನ್ನಲ್ ಮುರಲಿ‘, ‘ನಾಯಟ್ಟು‘, ‘ಮೇಪ್ಪಾದಿಯಾನ್‘ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಮಲಯಾಳಂ ಚಿತ್ರ ‘ನಾಯಟ್ಟು’ ಕೂಡ ಹಲವು ಪ್ರಶಸ್ತಿಗಳನ್ನು ಪಡೆಯಬಹುದು. ನಟ ಜೋಜು ಜಾರ್ಜ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆಯಬಹುದು. ಬಾಸಿಲ್ ಜೋಸೆಫ್ ನಿರ್ದೇಶನದ ಮಿನ್ನಲ್ ಮುರಳಿ ಕೂಡ ಪ್ರಬಲ ಸ್ಪರ್ಧಿಯಾಗಿದೆ.
ಇದನ್ನೂ ಓದಿ: 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ
ಕನ್ನಡದ ‘ಗರುಡಗಮನ ವೃಷಭ ವಾಹನ‘ ಸೇರಿದಂತೆ ಕೆಲವು ಸಿನಿಮಾಗಳು ಪಟ್ಟಿಯಲ್ಲಿವೆ. ಬಾಲಿವುಡ್ನ ‘ಗಂಗೂಬಾಯಿ ಕಾಠಿಯಾವಾಡಿ’, ಕಂಗನಾ ನಟನೆಯ ‘ತಲೈವಿ’ ಸಿನಿಮಾ ರೇಸ್ನಲ್ಲಿದೆ. ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.