ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ (Actor Chiranjeevi) ಅವರ ಮಾಜಿ ಅಳಿಯ ಹಾಗೂ ಶ್ರೀಜಾ ಅವರ ಮಾಜಿ ಪತಿ ಶಿರಿಷ್ ಭಾರದ್ವಾಜ್ ನಿಧನರಾಗಿದ್ದಾರೆ. ಶಿರಿಷ್ ಭಾರದ್ವಾಜ್ ಮತ್ತು ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧ ನಡುವೆ ಪ್ರೀತಿಸಿ ಮದುವೆಯಾಗಿದ್ದ ಶ್ರೀಜಾ ಮನೆಯಿಂದ ಹೊರ ಹೋಗಿದ್ದರು. ಆ ಬಳಿಕ ಶ್ರೀಜಾ ಹಾಗೂ ಶಿರಿಷ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಶ್ರೀಜಾ ತನ್ನ ಪುತ್ರಿಯೊಂದಿಗೆ ಮತ್ತೆ ತಂದೆ ಚಿರಂಜೀವಿ ಮನೆಗೆ ವಾಪಸ್ ಆಗಿದ್ದರು.
2012ರಲ್ಲಿ ಶ್ರೀಜಾ ಕಿರುಕುಳ ನೀಡಿದ್ದಕ್ಕಾಗಿ ಶಿರಿಷ್ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ನಂತರ 2014ರಲ್ಲಿ ಶ್ರೀಜಾ ಅವರು ಶಿರಿಷ್ ಭಾರದ್ವಾಜ್‌ಗೆ ವಿಚ್ಛೇದನ ನೀಡಿದ್ದರು. ಇದೀಗ ಶಿರಿಷ್ ಭಾರದ್ವಾಜ್ ಬಾರದ ಲೋಕಕ್ಕೆ ಹೋಗಿದ್ದಾರೆ. ಸದ್ಯ ಶಿರಿಷ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.
ಮಾಧ್ಯಮಗಳ ವರದಿ ಪ್ರಕಾರ ಶಿರಿಷ್ ಭಾರದ್ವಾಜ್ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ,ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶ್ರೀಜಾ ಅವರಿಂದ ವಿಚ್ಛೇದನದ ನಂತರ, ಶಿರಿಷ್ ಭಾರದ್ವಾಜ್ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. ನಂತರ ಶ್ರೀಜಾ ಅವರು ಕಲ್ಯಾಣ್ ದೇವ್ ಅವರನ್ನು ವಿವಾಹವಾದರು. ಶ್ರೀಜಾ ಮತ್ತು ಶಿರೀಷ್ ಶಿರಿಷ್ ಭಾರದ್ವಾಜ್ ಜೋಡಿಗೆ ಹೆಣ್ಣು ಮಗಳು ಇದ್ದಳು. ವಿಚ್ಛೇದನ ಬಳಿಕ ಮಗಳು ತಾಯಿ ಜತೆಗೆ ಇದ್ದಾಳೆ. ಮತ್ತೊಂದೆಡೆ, ಕಲ್ಯಾಣ್ ದೇವ್ ಜತೆ ಮತ್ತೆ ಮದುವೆಯಾದ ಶ್ರೀಜಾ ಅವರು ಮತ್ತೊಂದು ಮಗುವಿಗೆ ಜನ್ಮ ನೀಡಿದರು. ಶ್ರೀಜಾ ಅವರ ಎರಡನೇ ಪತಿ ಕೆಲವು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದರು.
ಇದನ್ನೂ ಓದಿ: Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?
ಆಗಿನ ಕಾಲಕ್ಕೆ ಶ್ರೀಜಾ ಮತ್ತು ಶಿರಿಷ್ ಭಾರದ್ವಾಜ್ ಅವರ ಮದುವೆ ವಿಚಾರ ಎಷ್ಟು ಸೆನ್ಸೇಷನ್ ಆಗಿತ್ತೋ, ಅವರ ವಿಚ್ಛೇದನವೂ ಅಷ್ಟೇ ವೈರಲ್ ಆಗಿತ್ತು. ಶಿರಿಷ್ ಸ್ನೇಹಿತರು ಮಾತ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರೀಜಾ ಮತ್ತು ಕಲ್ಯಾಣ್ ದೇವ್ ಮಾರ್ಚ್ 2016ರಂದು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ವಿವಾಹವಾದರು. ಕೆಲವು ಸಮಯದ ನಂತರ ಶ್ರೀಜಾ ತನ್ನ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಲ್ಯಾಣ್ ದೇವ್ ಜತೆಗಿನ ಫೋಟೊವನ್ನು ಡಿಲೀಟ್ ಮಾಡಿ ಇಬ್ಬರೂ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದರು. ಇದೀಗ ಕಲ್ಯಾಣ್ ದೇವ್ ಜತೆಗೂ ಶ್ರೀಜಾ ಡಿವೋರ್ಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.