ಬೆಂಗಳೂರು: ಗಣರಾಜ್ಯೋತ್ಸವದ ಮುನ್ನಾ ದಿನ ಗುರುವಾರ (ಜ.25) ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ(Actor Chiranjeevi), ಕಲಾವಿದೆ ವೈಜಯಂತಿಮಾಲಾ ಬಾಲಿ, ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು (Venkaiah Naidu) ಅವರಿಗೆ ʻಪದ್ಮ ವಿಭೂಷಣʼ ಪ್ರಶಸ್ತಿ ಸಂದಿದೆ. ನಟ ಚಿರಂಜೀವಿ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2006ರಲ್ಲಿಯೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ʻಪದ್ಮ ವಿಭೂಷಣʼ ಗೌರವ ದೊರಕಿದೆ.
ನಟ ಚಿರಂಜೀವಿ ಮಾತನಾಡಿ ʻʻನನಗೆ ಈಗ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ತುಂಬ ಸಂತೋಷವಾಗಿದೆ. ಇದು ಪ್ರೇಕ್ಷಕರು, ನನ್ನ ಸ್ನೇಹಿತರು, ನನ್ನ ಸಹೋದರ ಮತ್ತು ಸಹೋದರಿಯರ ಪ್ರೀತಿ ಇಂದ ಸಾಧ್ಯವಾಗಿದೆ. ನಿಮ್ಮೆಲ್ಲರ ಈ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಋಣಿಯಾಗಿದ್ದೇನೆ. ತೆರೆಯ ಮೇಲೆ, ನನ್ನ ವೃತ್ತಿಜೀವನದ ಕಳೆದ 45 ವರ್ಷಗಳಲ್ಲಿ, ನನ್ನ ಸಾಮರ್ಥ್ಯದಿಂದ ನಿಮ್ಮನ್ನು ರಂಜಿಸಲು ಪ್ರಯತ್ನಿಸಿದ್ದೇನೆ. ನಿಜ ಬದುಕಿನಲ್ಲಿ ನನ್ನ ಸುತ್ತಲೂ ಇರುವ ಸಮಾಜದಲ್ಲಿ ನನ್ನ ಅವಶ್ಯಕತೆ ಇದ್ದಾಗೆಲ್ಲ ಸಹಾಯ ಮಾಡುತ್ತಲೇ ಬಂದಿದ್ದೀನಿ. ಆದರೂ ನನ್ನ ಜೀವನದಲ್ಲಿ ಇಷ್ಟು ಮಾಡಿದ್ದು ಕಡಿಮೆ. ಆದರೂ, ನೀವು ನನಗೆ ಮನ್ನಣೆ ಮತ್ತು ಗೌರವವನ್ನು ನೀಡಿದ್ದೀರಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಈ ಹೆಮ್ಮೆಯ ಕ್ಷಣದಲ್ಲಿ, ನನಗೆ ಪದ್ಮವಿಭೂಷಣವನ್ನು ನೀಡಿದ ಭಾರತ ಸರ್ಕಾರ ಮತ್ತು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಧನ್ಯವಾದ. ಜೈ ಹಿಂದ್.” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Padma Awards: ನಟ ಚಿರಂಜೀವಿ, ವೆಂಕಯ್ಯ ನಾಯ್ಡುಗೆ ಪದ್ಮವಿಭೂಷಣ, ಉದ್ಯಮಿ ಸೀತಾರಾಮ್ ಜಿಂದಾಲ್‌ಗೆ ಪದ್ಮಭೂಷಣ
🙏🙏🙏 pic.twitter.com/4PDaCV2kzv
— Chiranjeevi Konidela (@KChiruTweets) January 25, 2024
ವೈಜಯಂತಿ ಮಾಲಾ ಬಾಲಿ
ನಟ ಚಿರಂಜೀವಿ, ಕಲಾವಿದೆ ವೈಜಯಂತಿ ಮಾಲಾ ಬಾಲಿ, ಮಾಜಿ ಉಪಾರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ತಮಿಳುನಾಡಿನ ಪದ್ಮಾ ಸುಬ್ರಮಣ್ಯಂ ಹಾಗೂ ಸುಲಭ್ ಶೌಚಾಲಯದ ಪರಿಚಯಿಸಿದ ಬಿಹಾರದ ಬಿಂದೇಶ್ವರ್ ಪಾಠಕ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಈ ವರ್ಷದ ಪಟ್ಟಿಯಲ್ಲಿ ಮಿಥುನ್ ಚಕ್ರವರ್ತಿ, ಗಾಯಕಿ ಉಷಾ ಉತ್ತುಪ್ ಮತ್ತು ಸಂಗೀತ ಸಂಯೋಜಕ ಪ್ಯಾರೇಲಾಲ್ ಶರ್ಮಾ ಸೇರಿದಂತೆ ಇತರ ಪುರಸ್ಕೃತರು ಸೇರಿದ್ದಾರೆ.
ಚಿರಂಜೀವಿ ಅವರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ (ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಸೇರಿದಂತೆ) ಕೆಲಸ ಮಾಡಿದ ಅತ್ಯಂತ ಯಶಸ್ವಿ ನಟರಲ್ಲಿ ಚಿರಂಜೀವಿ ಕೂಡ ಒಬ್ಬರು. 2006ರಲ್ಲಿ, ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಇದು ಅವರ ಎರಡನೇ ಪದ್ಮ ಪ್ರಶಸ್ತಿಯಾಗಿದೆ. ಬಿಂಬಿಸಾರ ಖ್ಯಾತಿಯ ವಸಿಷ್ಠ ನಿರ್ದೇಶನದ ʻವಿಶ್ವಂಭರʼ ಚಿತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.