Site icon Vistara News

Aditi Rao Hydari: ʻಲವ್ಲಿ ಜೋಡಿ’ ಎನ್ನುತ್ತಿದ್ದಂತೆ ನಾಚಿ ನೀರಾದ ಅದಿತಿ ರಾವ್ ಹೈದರಿ

Aditi Rao Hydari blushes as paps say 'lovely jodi'

ಬೆಂಗಳೂರು: ನಟಿ ಅದಿತಿ ರಾವ್ ಹೈದರಿ (Aditi Rao Hydari) ಅವರು ತಮ್ಮ  ‘ಜ್ಯುಬಿಲಿ’ ವೆಬ್‌ ಸಿರೀಸ್‌ ಬಿಡುಗಡೆಯಾದ ಮೊದಲ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ಆಕೆಯ ಜತೆಯಲ್ಲಿ ಗೆಳೆಯ ಮತ್ತು ನಟ ಸಿದ್ಧಾರ್ಥ್ ಕಾಣಿಸಿಕೊಂಡದ್ದು ವಿಶೇಷವಾಗಿತ್ತು. ಇದೀಗ ಹೊಸ ವಿಡಿಯೊ ವೈರಲ್‌ ಆಗಿದ್ದು, ಇದರಲ್ಲಿ ಪಾಪರಾಜಿಗಳು ‘ಲವ್ಲಿ ಜೋಡಿ’ ಎಂದು ಕರೆಯುತ್ತಿರುವುದು ಕಂಡುಬಂದಿದೆ. ಅದಕ್ಕೆ ಅದಿತಿ ನಾಚಿಕೆಪಡುತ್ತಿರುವಂತೆ ಪ್ರತಿಕ್ರಿಯಿಸಿದ್ದಾರೆ.

ಏಪ್ರಿಲ್ 7ರಂದು ಅಮೇಜಾನ್​ ಪ್ರೈಂ ವಿಡಿಯೊ ಮೂಲಕ ರಿಲೀಸ್ ಆಗಿರುವ ‘ಜ್ಯುಬಿಲಿ’ ವೆಬ್​ ಸಿರೀಸ್​ನಲ್ಲಿ ಅದಿತಿ ರಾವ್​ ಹೈದರಿ ನಟಿಸಿದ್ದಾರೆ. ಹಾಗಾಗಿ ಪ್ರೀಮಿಯರ್​ ಶೋಗೆ ಅವರ ಜತೆ ಸಿದ್ದಾರ್ಥ್​ ಕೂಡ ಆಗಮಿಸಿದ್ದರು. ಅದಿತಿ ಕಪ್ಪು ಅನಾರ್ಕಲಿ ಉಡುಗೆಯನ್ನು ಧರಿಸಿದ್ದರೆ, ಸಿದ್ಧಾರ್ಥ್ ಸಂಪೂರ್ಣ ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಗೂ ಅದಿತಿ ಮತ್ತು ಸಿದ್ಧಾರ್ಥ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿಲ್ಲ.

ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ

ʻತಾಜ್: ಡಿವೈಡೆಡ್ ಬೈ ಬ್ಲಡ್ʼ ಚಿತ್ರದಲ್ಲಿ ಅದಿತಿ ಕಾಣಿಸಿಕೊಂಡಿದ್ದರು. ಅನಾರ್ಕಲಿ ಪಾತ್ರದ ಕುರಿತು ನಟಿ ಮಾತನಾಡುವಾಗ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. “ನಾವು (ಮೊಘಲರ) ಕಥೆಯೊಂದಿಗೆ ಹೆಚ್ಚು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿದ್ದೇವೆ. ನಿರ್ದೇಶಕ ರೊನಾಲ್ಡ್ ಸ್ಕಾಲ್ಪೆಲೋ ಯಾವಾಗಲೂ ‘ಅನಾರ್ಕಲಿ ದುರಂತ ನಾಯಕಿ’ ಎಂದು ಹೇಳುತ್ತಿರುತ್ತಾರೆ. ಒಂದು ಹಂತದಲ್ಲಿ ನಾನು ಇಲ್ಲ ಎಂದಿದ್ದೆ. ಅವಳು ನಮಗೆ ದುರಂತ, ಆದರೆ ಅವಳಿಗೆ ಅವಳು ದುರಂತ ನಾಯಕಿ ಅಲ್ಲ. ಗೋಡೆಯೊಂದರಲ್ಲಿ ಬಂಧಿಯಾಗಿರುವಾಗ ತನ್ನ ಪ್ರೀತಿಗೆ ಬೆಂಬಲವಾಗಿ ನಿಂತಿರುವ ನಿರ್ಭೀತ ಹುಡುಗಿ ಅವಳು. ಎಂತಹ ಅದ್ಭುತ ಹುಡುಗಿ, ಮತ್ತು ಅದು ಎಂತಹ ಪ್ರೀತಿ ʼಎಂದರು.

ಇದನ್ನೂ ಓದಿ: Aditi Rao Hydari: ಸಿದ್ಧಾರ್ಥ್ ಜತೆಗಿನ ಸಂಬಂಧದ ವದಂತಿಗಳ ಬೆನ್ನಲ್ಲೇ ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ ಎಂದ ಅದಿತಿ ರಾವ್ ಹೈದರಿ!

‘ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ

ನಿಜ ಜೀವನದಲ್ಲಿ ಅಂತಹ ಪ್ರೀತಿ ಇದೆಯಾ ಎಂಬ ಪ್ರಶ್ನೆಗೆ ನಟಿ ಉತ್ತರಿಸಿ ʻʻಸಿನಿಮಾ ಎಲ್ಲಿಂದಲೋ ಬರುತ್ತದೆ. ಪ್ರೀತಿ (ಹಾಗೆ) ಇನ್ನೂ ಅಸ್ತಿತ್ವದಲ್ಲಿದೆ ಎಂದು ನಾನು ನಂಬುತ್ತೇನೆʼʼಎಂದರು. ನಟ ಸಿದ್ಧಾರ್ಥ್ ಜತೆಗಿನ ಸಂಬಂಧದ ವದಂತಿಗಳ ನಡುವೆ ಅದಿತಿ ಪ್ರೀತಿಯ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜೋಡಿ ಒಟ್ಟಿಗೆ ಡ್ಯಾನ್ಸ್‌ ಮಾಡಿರುವ ವಿಡಿಯೊ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ನಟಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರು ‘ಟಮ್​ ಟಮ್​..’ ಹಾಡಿಗೆ ಹೆಜ್ಜೆ ಹಾಕಿದ್ದರು. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ʻಮಹಾ ಸಮುದ್ರಮ್‌ʼ ಚಿತ್ರದಲ್ಲಿ ಸಿದ್ಧಾರ್ಥ್‌ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು. ಈ ಹಿಂದೆ ರಾಜಕುಮಾರ್‌ ರಾವ್‌ ಅವರ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್‌ ಹುಟ್ಟುಹಬ್ಬಕ್ಕೆ ಅತ್ಯಂತ ಪ್ರೀತಿಯಿಂದ ಹಾರೈಸಿದ್ದರು ಅದಿತಿ.

Exit mobile version