Site icon Vistara News

Aishwarya Arjun:  ಅರ್ಜುನ್ ಸರ್ಜಾ ಪುತ್ರಿಯ ಮದುವೆ ಸಮಾರಂಭ ಶುರು: ಹಳದಿ ಶಾಸ್ತ್ರದ ಫೋಟೊ ವೈರಲ್‌!

Aishwarya Arjun Marriage Haldi Ceremony

ಐಶ್ವರ್ಯಾ ಅರ್ಜುನ್ (Aishwarya Arjun) ಅವರ ಹಳದಿ ಕಾರ್ಯಕ್ರಮ ಜರುಗಿದ್ದು, ಆ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಸೋಮವಾರ (ಮೇ.10) ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.

 ಕರ್ನಾಟಕ ಮೂಲದ ದಕ್ಷಿಣ ಭಾರತದ ಖ್ಯಾತ ನಟ, ‘ಆ್ಯಕ್ಷನ್ ಕಿಂಗ್’ (Action King) ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Sarja) ಅವರ ನಿಶ್ಚಿತಾರ್ಥವು ತಮಿಳುನಾಡಿನ ಚೆನ್ನೈನಲ್ಲಿ ನಟ ತಂಬಿ ರಾಮಯ್ಯ ಅವರ ಪುತ್ರ (Aishwarya Arjun ಉಮಾಪತಿ ರಾಮಯ್ಯ(umapathy ramaiah) ಜತೆಗೆ ಆಗಿತ್ತು.

ಇದನ್ನೂ ಓದಿ: Aishwarya Arjun: ಅರ್ಜುನ್ ಸರ್ಜಾ ಪುತ್ರಿ ವಿವಾಹ; ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

 ಜೋಡಿ ಜೂನ್ 10 ರಂದು ಚೆನ್ನೈನ ಹನುಮಾನ್ ದೇವಸ್ಥಾನದಲ್ಲಿ ವಿವಾಹವಾಗಲಿದೆ. ನಿಶ್ಚಿತಾರ್ಥ ಆದ ಸ್ಥಳದಲ್ಲಿಯೇ ವಿವಾಹ ನಡೆಯಲಿದೆ. ಜೂನ್ 14 ರಂದು ಚೆನ್ನೈನಲ್ಲಿ ಆರತಕ್ಷತೆಯನ್ನು ಕುಟುಂಬ ಆಯೋಜಿಸಿದೆ ಎಂದು ವರದಿಯಾಗಿದೆ.

ಈ ಮದುವೆಯಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಯಶಿಕಾ ಆನಂದ್ ಜತೆ ಉಮಾಪತಿ ರಾಮಯ್ಯ ಸಂಬಂಧ ಹೊಂದಿದ್ದರು ಎಂಬ ಊಹಾಪೋಹಗಳು ಇದ್ದವು. ಅರ್ಜುನ್ ಸ್ವತಃ ಹೋಸ್ಟ್ ಮಾಡಿದ ರಿಯಾಲಿಟಿ ಟಿವಿ ಶೋ “ಸರ್ವೈವರ್ ತಮಿಳು” ನಲ್ಲಿ ಉಮಾಪತಿ ಸ್ಪರ್ಧಿಯಾಗಿ ಭಾಗವಹಿಸಿದ್ದರು, ಈ ಮೂಲಕ ಅರ್ಜುನ್‌ ಫ್ಯಾಮಿಲಿಗೆ ಉಮಾಪತಿ ರಾಮಯ್ಯ ಹತ್ತಿರವಾಗಿದ್ದಾರೆ ಎನ್ನಲಾಗಿದೆ.

Exit mobile version